ಗಾಳಿ ಮಳೆಗೆ rain ಮರಬಿದ್ದು ಹಾನಿಗೊಳಗಾದ ಮನೆ. 
ಉತ್ತರ ಕನ್ನಡ

rain ಭಾರಿ ಗಾಳಿ ಮಳೆಗೆ ಮನೆಗಳಿಗೆ ಹಾನಿ

ಮಂಜುನಾಥ ಕೆಂಪಸಣ್ಣವರ
ಕುಮಟಾ: ತಾಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ rain ಉಳ್ಳೂರಮಠ ಹಾಗೂ ಬಾಸೊಳ್ಳಿಯಲ್ಲಿ ಮನೆಗಳಿಗೆ ಹಾನಿಯಾದ ವರದಿಯಾಗಿದೆ.
ಸಂತೆಗುಳಿ ಪಂಚಾಯಿತಿ ವ್ಯಾಪ್ತಿಯ ಉಳ್ಳೂರುಮಠ ಗ್ರಾಮದ ರಾಮಚಂದ್ರ ನಾರಾಯಣ ನಾಯ್ಕ ಎಂಬುವರ ಮನೆಯ ಮೇಲೆ ಮರದ ಟೊಂಗೆ ಮುರಿದು ಬಿದ್ದು ಮನೆಯ ಮೇಲ್ಛಾವಣಿಯ ಹಂಚು, ಪಕಾಸು ಹಾನಿಗೊಳಗಾಗಿದೆ.
ಘಟನೆಯಲ್ಲಿ ಜನ ಜಾನುವಾರುಗಳಿಗೆ ಯಾವುದೇ ಹಾನಿಯಾಗಿಲ್ಲ. ಬಾಸೊಳ್ಳಿ ಗ್ರಾಮದ ಭಾರತಿ ರಮೇಶ ಮುಕ್ರಿ ಅವರ ಮನೆಯ ತಗಡು ಗಾಳಿಯ ರಭಸಕ್ಕೆ ಹಾರಿ ಹೋಗಿ ಹಾನಿಯಾಗಿದೆ.