ಹಳಿಯಾಳ ಪುರಸಭೆಯಲ್ಲಿ ಕರ್ತವ್ಯನಿರತ ನೌಕರಿನಿಗ ಅವಮಾನ, ಬೆದರಿಕೆ ಹಾಕಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪುರಸಭೆ ಸಿಬ್ಬಂದಿ ಗ್ರೇಡ್-2 ತಹಸಿಲ್ದಾರ್ ನೇಸರ್ಗಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಅಶೋಕ ಸಾಳೆನ್ನವರ, ಈರಪ್ಪ ಕೊಡ್ಲಿ, ಮಹಮಹ್ಮದ ರಫಿಕ್ ವಸ್ತಾದ, ಮಂಜುನಾಥ ಹರಿಜನ, ಎಪಿಡಿಎ ರವಿ ಪಟ್ಟಿಹಾಳ, ಇತರರಿದ್ದರು. 
ಉತ್ತರ ಕನ್ನಡ

ಹಳಿಯಾಳ ಪುರಸಭೆಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ purasabhe staff

ಪ್ರಮುಖ ಮುಖ್ಯಾಂಶಗಳು

  • ನೌಕರರಿಂದ ಪ್ರತಿಭಟನೆ
  • ಗ್ರೇಡ್-2 ತಹಸಿಲ್ದಾರ್ ನೇಸರ್ಗಿಗೆ ಮನವಿ

ಹಳಿಯಾಳ: ಕರ್ತವ್ಯನಿರತಪುರಸಭೆ ಸಿಬ್ಬಂದಿಗೆ ಅವಮಾನ,ಬೆದರಿಕೆಹಾಗೂ ಮಾನಸಿಕ ಕಿರುಕುಳ ನೀಡಿದವ್ಯಕ್ತಿಯ ವಿರುದ್ಧ ಹಳಿಯಾಳಪುರಸಭೆ ಸಿಬ್ಬಂದಿ ಮಂಗಳವಾರಸಾಮೂಹಿಕ ಪ್ರತಿಭಟನೆ ನಡೆಸಿ,ತಾಲೂಕಾಡಳಿತಕಚೇರಿಯಲ್ಲಿ ಗ್ರೇಡ್-2ತಹಸಿಲ್ದಾರ್ನೇಸರ್ಗಿ ಅವರಿಗೆ ಮನವಿ ಸಲ್ಲಿಸಿದರು.

ಪುರಸಭೆಯದನಂದಿನ ಕಾರ್ಯ ನಿರ್ವಹಣೆಗೆಅಡ್ಡಿಪಡಿಸುತ್ತಿರುವ ವ್ಯಕ್ತಿಯೊಬ್ಬರು,ಕರ್ತವ್ಯದಲ್ಲಿದ್ದಸಿಬ್ಬಂದಿಯನ್ನು ಮನಸೋ ಇಚ್ಛೆನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ..ಜಾಮತ್ತು ಪ.ಪಂ.ಸಮುದಾಯಕ್ಕೆಸೇರಿದ ಹನುಮಂತ ಎನ್ನುವ ವ್ಯಕ್ತಿಯೊಬ್ಬಅವಾಚ್ಯ ಶಬ್ಬಗಳಿಂದ ನಿಂದಿಸಿ,ಮಾನಸಿಕವಾಗಿನೋವು ಉಂಟಾಗುವ ರೀತಿಯಲ್ಲಿವರ್ತಿಸಿದ್ದಾರೆ ಎಂದು ಪುರಸಭೆಸಿಬ್ಬಂದಿ ದೂರಿದ್ದಾರೆ.

ಪುರಸಭೆಮುಖ್ಯಾಧಿಕಾರಿ ಅಶೋಕ ಸಾಳೆನ್ನವರ,ವ್ಯವಸ್ಥಾಪಕಈರಪ್ಪ ಕೊಡ್ಲಿ,ಅಕೌಂಟೆಂಟ್ಮಹಮಹ್ಮದ ರಫಿಕ್ ಫಕ್ರುಸಾಬವಸ್ತಾದ,ಕಂದಾಯಅಧಿಕಾರಿ ಮಂಜುನಾಥ ಹರಿಜನ,ಎಪಿಡಿಎರವಿ ಪಟ್ಟಿಹಾಳ,ನೀರುಸರಬರಾಜು ವಿಭಾಗದ ಪ್ರಕಾಶ ಟೋಸೂರ,ಧನಂಜಯಮತ್ತು ಇತರರ ಜತೆಗೆ ಅನುಚಿತವಾಗಿವರ್ತಿಸಿ ಅವಮಾನಿಸಿದ್ದಾರೆ ಎಂದುದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಾಹಿತಿಹಕ್ಕು ನೆಪದಲ್ಲಿ ಬೆದರಿಕೆ: ಮಾಹಿತಿಹಕ್ಕು ಕಾರಣ ನೀಡುತ್ತ ಸಿಬ್ಬಂದಿಗೆನಿರಂತರವಾಗಿ ಹೆದರಿಸಿ,ಬೆದರಿಸಿಕರ್ತವ್ಯಕ್ಕೆ ಅಡ್ಡಿ ಮಾಡುತ್ತಿರುವುದಾಗಿಪುರಸಭೆ ಮುಖ್ಯಾಧಿಕಾರಿ ತಮ್ಮಅಳಲು ತೋಡಿಕೊಂಡಿದ್ದಾರೆ.ಇಂತಹನಡವಳಿಕೆಗಳಿಂದ ಸಿಬ್ಬಂದಿಯಮನೋಸ್ಥೈರ್ಯ ಕುಂದುತ್ತಿದೆ ಎಂದುಅವರು ತಿಳಿಸಿದ್ದಾರೆ

ಆರೋಪಿಮೇಲೆ ಕೂಡಲೇ ಕಾನೂನು ಕ್ರಮಜರುಗಿಸುವಂತೆ ಆಗ್ರಹಿಸಿತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ.ಕರ್ತವ್ಯನಿರ್ವಹಿಸುವ ಸಿಬ್ಬಂದಿಗೆ ಸೂಕ್ತರಕ್ಷಣೆ ನೀಡಬೇಕು ಎಂದುಒತ್ತಾಯಿಸಿದ್ದಾರೆ.

ಸರ್ಕಾರಿಕೆಲಸಕ್ಕೆ ಅಡ್ಡಿ ದೂರು
ಹಳಿಯಾಳ: ಹಳಿಯಾಳಪುರಸಭೆ ಕಚೇರಿಯಲ್ಲಿ ಕರ್ತವ್ಯನಿರತ ಸಿಬ್ಬಂದಿಗೆ ಅವಾಚ್ಯಶಬ್ದಗಳಿಂದ ನಿಂದಿಸಿ,ಸರ್ಕಾರಿಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಮೇಲೆ ಪಟ್ಟಣದ ನಿವಾಸಿ ಹನುಮಂತಹರಿಜನ ಎಂಬಾತನ ವಿರುದ್ಧ ಹಳಿಯಾಳಪೊಲೀಸ್ ಠಾಣೆಯಲ್ಲಿ ಸರ್ಕಾರಿಕರ್ತವ್ಯಕ್ಕೆ ಅಡ್ಡಿಪಡಿಸಿದಬಗ್ಗೆ ಪ್ರಕರಣ ದಾಖಲಾಗಿದೆ.

ಪುರಸಭೆಯಪ್ರಥಮ ದರ್ಜೆ ಸಹಾಯಕ ಅನಿಲ ಚಲವಾದಿನೀಡಿದ ದೂರಿನ ಅನ್ವಯ ಹಳಿಯಾಳಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು,ಪಿಎಸ್‌ಐಬಸವರಾಜ ಮಬನೂರ ತನಿಖೆ ನಡೆಸುತ್ತಿದ್ದಾರೆ.

ಮೇ13ರಿಂದಮೇ 25ರವರೆಗೆಆರೋಪಿ ಪದೇಪದೆ ಕಚೇರಿಗೆ ಬಂದುಅಸಂವಿಧಾನಿಕ ಭಾಷೆಯಲ್ಲಿನಿಂದಿಸುತ್ತಾ ಕರ್ತವ್ಯಕ್ಕೆಅಡ್ಡಿಪಡಿಸಿದ್ದಾನೆ ಎಂದುದೂರಿನಲ್ಲಿ ತಿಳಿಸಲಾಗಿದೆ.