ಯಲ್ಲಾಪುರ ತಾಲೂಕಿನ ಉಪಳೇಶ್ವರದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮಾಸಿಕ ಸಭೆ ಹಾಗೂ ಗ್ರಾಮೀಣ ಶಿಬಿರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನರಸಿಂಹ ಜಿ. ಭಟ್ಟ, ಕಮಲಾ ಆರ್. ಭಟ್ಟ, ಶ್ರೀಲತಾ ರಾಜೀವ ಅವರನ್ನು ಸನ್ಮಾನಿಸಲಾಯಿತು. ಶಾಸಕ ಶಿವರಾಮ ಹೆಬ್ಬಾರ, ಉಲ್ಲಾಸ ಶಾನಭಾಗ, ಆರ್.ಎಸ್. ಭಟ್ಟ, ವಿ.ಎಸ್. ಭಟ್ಟ, ಎಸ್.ಕೆ. ಭಾಗ್ವತ ಇತರರಿದ್ದರು. 
ಉತ್ತರ ಕನ್ನಡ

ಬಡವರಿಗೆ ನೆರವಾದ ಗ್ಯಾರಂಟಿ ಯೋಜನೆ

ವಿನಯ ಆಶೋಕ ನಾಯ್ಕ
ಯಲ್ಲಾಪುರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿವೆ. ಅದರಿಂದ ತೀರಾ ಕೆಳಮಟ್ಟದಲ್ಲಿದ್ದ ಬಡವರಿಗೆ ಸಹಕಾರಿಯಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕಿನ ಉಪಳೇಶ್ವರದಲ್ಲಿ ನಂದೊಳ್ಳಿ ಮತ್ತು ಚಂದಗುಳಿ ಗ್ರಾಮ ಪಂಚಾಯಿತಿಗಳ ಆಶ್ರಯದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮಾಸಿಕ ಸಭೆ ಹಾಗೂ ಗ್ರಾಮೀಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಿತಿ ಹಾಗೂ ನಾಗರಿಕರ ಪರವಾಗಿ ಶಾಸಕ ಶಿವರಾಮ ಹೆಬ್ಬಾರ ಅವರಿಗೆ ನಾಗರಿಕ ಸನ್ಮಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನರಸಿಂಹ ಜಿ. ಭಟ್ಟ, ಕಮಲಾ ಆರ್. ಭಟ್ಟ, ಶ್ರೀಲತಾ ರಾಜೀವ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ ಅಧ್ಯಕ್ಷತೆ ವಹಿಸಿ, ಪಂಚ ಗ್ಯಾರಂಟಿ ಯೋಜನೆಗಳ ಪೋಸ್ಟರ್ ಬಿಡುಗಡೆಗೊಳಿಸಿದರು.
ತಾಪಂ ಇಒ ರಾಜೇಶ ಧನವಾಡಕರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ಟ, ಸ್ಥಳೀಯ ಸಹಕಾರಿ ಸಂಘದ ಅಧ್ಯಕ್ಷ ಎಸ್.ಕೆ. ಭಾಗ್ವತ, ಪ್ರಮುಖರಾದ ನಾಗೇಶ ಹೆಗಡೆ ಬಾಳೆಗದ್ದೆ, ಜಿ.ಎಸ್. ಭಟ್ಟ ತಟ್ಟಿಗದ್ದೆ, ಟಿ.ವಿ. ಭಾಗ್ವತ, ನಾಗರತ್ನಾ ನಾಯ್ಕ, ಊರಿನ ಪ್ರಮುಖರು, ಸಮಿತಿಯ ಸದಸ್ಯರು, ಅಧಿಕಾರಿಗಳು, ಆಡಳಿತಾಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು. ಶಿವಾನಂದ ನಾಯ್ಕ ಹಾಗೂ ಎಂ.ಎನ್. ಭಟ್ಟ ನಿರ್ವಹಿಸಿದರು.