ಕಾರವಾರ:
ಜಿಲ್ಲೆಯ 228 ಗ್ರಾಮ ಪಂಚಾಯಿತಿಗಳ 988 ಕ್ಷೇತ್ರಗಳ 2,643 ಸ್ಥಾನಗಳಿಗೆ ಮೀಸಲಾತಿಗೆ ಅಽಸೂಚನೆಯನ್ನು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅಧಿಸೂಚನೆ ಹೊರಡಿಸಿದ್ದಾರೆ. 2011 ರ ಜನಗಣತಿಯನ್ನು ಆಧರಿಸಿ ಮೀಸಲಾತಿಯನ್ನು ನಿಗದಿ ಮಾಡಲಾಗಿದೆ. ಈ ಹಿಂದೆ 2020 ರಲ್ಲಿ ಗ್ರಾಮ ಪಂಚಾಯಿತಿಗಳಿಗೆ ಮೀಸಲಾತಿ ಘೋಷಿಸಲಾಗಿತ್ತು. ಒಟ್ಟಾರೆ ಸ್ಥಾನಗಳ ಪೈಕಿ ಶೇ.50 ಕ್ಕಿಂತ ಹೆಚ್ಚು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಭಟ್ಕಳ ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು, ಹೆಬಳೆ ಗ್ರಾಮ ಪಂಚಾಯಿತಿ ನೂತನ ನಗರಸಭೆಗೆ ಸೇರ್ಪಡೆಯಾಗಿದೆ. ಇದರಿಂದ ಜಿಲ್ಲೆಯ
ಒಟ್ಟಾರೆ
ಗ್ರಾಪಂಗಳ ಸಂಖ್ಯೆ 229 ರಿಂದ 228 ಕ್ಕೆ ಇಳಿಕೆಯಾಗಿದೆ. ಮುರ್ಡೇಶ್ವರ (ಮಾವಳ್ಳಿ) ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನ ಮಾಡಿದೆ. ಸದ್ಯ ಮಾವಳ್ಳಿ ಗ್ರಾಪಂಗೂ ಮೀಸಲಾತಿ ಘೋಷಣೆಯಾಗಿದೆ. ಆದರೆ, ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ.
ಒಟ್ಟಾರೆ ಸ್ಥಾನಗಳ ಪೈಕಿ 48 ಎಸ್‌ಸಿ ಸಾಮಾನ್ಯಕ್ಕೆ , 248 ಎಸ್‌ಸಿ ಮಹಿಳೆಗೆ, 13 ಎಸ್‌ಟಿ ಸಾಮಾನ್ಯಕ್ಕೆ, 231 ಎಸ್‌ಟಿ ಮಹಿಳೆಗೆ, 222 ಬಿಸಿಎಂ ಎಗೆ, 348 ಬಿಸಿಎಂ ಮಹಿಳೆಗೆ, 66 ಬಿಸಿಎಂ ಬಿ ವರ್ಗಕ್ಕೆ 62 ಬಿಸಿಎಂ ಮಹಿಳೆಗೆ, 493 ಸಾಮಾನ್ಯ ಮಹಿಳೆಗೆ ಮೀಸಲಾಗಿವೆ. 913 ಸ್ಥಾನಗಳು ಸಾಮಾನ್ಯ ವರ್ಗಕ್ಕೆ ತೆರೆದುಕೊಂಡಿವೆ.
ಮಹಿಳಾ ಸ್ಥಾನವೇ ಅಧಿಕ
ಗ್ರಾಪಂನಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ಇದೆ. ಆದರೆ, ಕೆಲವು ಮೀಸಲಾತಿಯಡಿ ತಾಲೂಕಿಗೆ ಒಂದೇ ಸ್ಥಾನಗಳು ನಿಗದಿಯಾಗಿವೆ. ಅದನ್ನು ನಿಯಮದಂತೆ ಮಹಿಳೆರಿಗೇ ಹಂಚಿಕೆ ಮಾಡಲಾಗಿದೆ. ಹಾಗಾಗಿ ಶೇ.50 ಕ್ಕಿಂತ ಹೆಚ್ಚು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. 2,643 ಸದಸ್ಯರ ಪೈಕಿ 1381 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಎಸ್‌ಸಿ ಹಾಗೂ ಎಸ್‌ಟಿ ಮೀಸಲಾತಿಗಳಲ್ಲಿ ಕೆಲವು ತಾಲೂಕಿನಲ್ಲಿ ಒಬ್ಬ ಪುರುಷನೂ ಸ್ಪಽðಸುವ ಅಽಕಾರ ಹೊಂದಿಲ್ಲ. ಒಟ್ಟಾರೆ
ವ್ಯತ್ಯಾಸ
2011 ರ ಜನಗಣತಿಯಂತೆ ಮೀಸಲಾತಿ ನಿಗದಿ ಮಾಡಲಾಗಿದೆ. ಈಗಾಗಲೇ 15 ವರ್ಷ ಕಳೆದಿದ್ದರಿಂದ ಜನಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸವಾಗಿದೆ. ಹೊಸ ಜನಗಣತಿ ಇದುವರೆಗೂ ಆಗಿಲ್ಲ. ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಅಥವಾ ಬೇರೆ ಯಾವುದಾದರೂ ಗಣತಿಯ ಡೇಟಾಗಳನ್ನು ಆಧರಿಸಿ ಮೀಸಲಾತಿ ನಿಗದಿ ಮಾಡಿದಲ್ಲಿ ಅನುಕೂಲವಾಗುತ್ತಿತ್ತು ಎಂಬ ಅಭಿಪ್ರಾಯ ಕೇಳಿ ಬಂದಿವೆ.
ತಾಲೂಕುವಾರು ಮೀಸಲಾತಿ ವಿವರ
ತಾಲೂಕು ಗ್ರಾಪಂಗಳ ಸಂಖ್ಯೆ ಕ್ಷೇತ್ರಗಳು ಸ್ಥಾನಗಳು
- ಕಾರವಾರ 18 85 226
- ಅಂಕೋಲಾ 21 74 226
- ಕುಮಟಾ 22 96 321
- ಹೊನ್ನಾವರ 26 122 333
- ಭಟ್ಕಳ 15 73 254
- ಶಿರಸಿ 32 134 323
- ಸಿದ್ದಾಪುರ 23 108 222
- ಯಲ್ಲಾಪುರ 15 73 254
- ಮುಂಡಗೋಡ 16 70 194
- ಹಳಿಯಾಳ 20 83 212
- ಜೊಯಿಡಾ 16 57 137
- ದಾಂಡೇಲಿ 04 16 37