ಕಾರವಾರ: ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಸಿದ್ಧವಾಗಿದ್ದು, ಐದು ವರ್ಷಗಳ ಹಿಂದಿನ ಪಟ್ಟಿಗೆ ಹೋಲಿಸಿದರೆ ಜಿಲ್ಲೆಯಲ್ಲಿ 2,226 ಜನ ಮಾತ್ರ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ.
ಜಿಲ್ಲೆಯಲ್ಲಿ 20 ಕ್ಕೂ ಅಽಕ ಪ್ರಥಮ ದರ್ಜೆ ಕಾಲೇಜ್‌ಗಳು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜ್‌ಗಳಿವೆ. ಪ್ರತಿ ತಾಲೂಕಿನಲ್ಲಿ ವರ್ಷಕ್ಕೆ ಕನಿಷ್ಠ 1 ಸಾವಿರಕ್ಕೂ ಅಧಿಕ ಪದವೀಧರರು ಶಿಕ್ಷಿತರಾಗಿ ಹೊರ ಬೀಳುತ್ತಿದ್ದು, ಜಿಲ್ಲೆಯಲ್ಲಿ ಲಕ್ಷಾಂತರ ಪದವೀಧರರಿದ್ದಾರೆ. ಆದರೆ, ಮತದಾರರ ಪಟ್ಟಿಯಲ್ಲಿ ಶೇ.10 ರಷ್ಟು ಜನರ ಹೆಸರೂ ಸೇರ್ಪಡೆಯಾಗದೇ ಇರುವುದು ಇದರ ಬಗ್ಗೆ ಪದವೀಶರರು ಆಸಕ್ತಿ ರೋರದೇ ಇರುವುದರ ಸಂಕೇತವಾಗಿದೆ.
ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಇದೇ ವರ್ಷ ಚುನಾವಣೆ ನಡೆಯಲಿದೆ. ಈಗಾಗಲೇ ಪಕ್ಷಗಳು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಸಿವೆ. ಈ ಹಂತದಲ್ಲಿ ಆಗಸ್ಟ್1 ರಿಂದ ನವೆಂಬರ್ 6 ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ನೀಡಲಾಗಿತ್ತು. ಜಿಲ್ಲೆ, ತಾಲೂಕು ಆಡಳಿತಗಳು ಸಾಕಷ್ಟು ಪ್ರಚಾರ ನಡೆಸಿದ್ದವು. ರಾಜಕೀಯ ಪಕ್ಷಗಳಿಗೂ ಸೂಚಿಸಲಾಗಿತ್ತು. ನವೆಂಬರ್ 25 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಆಕ್ಷೇಪಣೆಗಳನ್ನು ಪರಿಶೀಲಿಸಿ ಡಿಸೆಂಬರ್ 30 ರಂದು ಅಂತಿಮ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ.
ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಉತ್ತರ ಕನ್ನಡ,ಹಾವೇರಿ, ಗದಗ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿವೆ. ಕಂದಾಯ ಇಲಾಖೆ ಬೆಳಗಾವಿ ವಿಭಾಗೀಯ ಆಯುಕ್ತರು ಇದರ ಮಖ್ಯ ಚುನಾವಣಾಽಕಾರಿಯಾಗಿದ್ದು, ಅವರು ಡಿಸೆಂಬರ್ 30 ರಂದು ಮತದಾರರ ಪಟ್ಟಿ ಪ್ರಕಟಿಸಿದ್ದಾರೆ. 51,599 ಪುರುಷರು ಮತ್ತು 36,488 ಮಹಿಳಾ ಮತದಾರರು ಸೇರಿದಂತೆ ಒಟ್ಟು 88,087 ಮತದಾರರಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ 7,660 ಪುರುಷರು, 7,714 ಮಹಿಳೆಯರು ಸೇರಿ ಒಟ್ಟು 15,347 ಮತದಾರರಿದ್ದಾರೆ ಎಂದು ಘೋಷಿಸಲಾಗಿದೆ. 2020 ರಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಡೆದಾಗ ಮತದಾರರ ಸಂಖ್ಯೆ 13,148 ಇತ್ತು.
ಅಂಗೀಕೃತ ವಿಶ್ವ ವಿದ್ಯಾಲಯದಿಂದ ಯಾವುದೇ ಪದವಿ ಪಡೆದು 3 ವರ್ಷ ಪೂರೈಸಿದವರು ತಮ್ಮ ಪದವಿಯ ಅಂತಿಮ ಪ್ರಮಾಣಪತ್ರ(ಪಾಸಿಂಗ್ ಸರ್ಟಿಫಿಕೇಟ್) ಅಥವಾ ಗ್ರಾಜುವೇಶನ್ ಸರ್ಟಿಫಿಕೇಟ್ ಹಾಗೂ ವಾಸ್ತವ್ಯ ದಾಖಲೆ ಒದಗಿಸಿ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬಹುದು.
ಪದವೀಧರರ ನಿರ್ಲಕ್ಷ್ಯಕ್ಕೆ ಕಾರಣ
- *ಪದವೀಧರರಿಂದ ಆಯ್ಕೆಯಾದ ಅಭ್ಯರ್ಥಿಗಳು ಸರ್ಕಾರಿ ನೌಕರರು, ಶಿಕ್ಷಕರು ಮುಂತಾದ ಆಯ್ದ ಸಂಘಟಿತ ಕ್ಷೇತ್ರವನ್ನು ಮಾತ್ರ ಕೇಂದ್ರೀಕರಿಸಿ ಅವರ ಸಮಸ್ಯೆಗಳ ಮಾತ್ರ ಪರಿಗಣನೆ.
- *ಮತದಾರರು ಹೆಚ್ಚಿದಂತೆ ಜವಾಬ್ದಾರಿ, ಪೈಪೋಟಿ ಹೆಚ್ಚುತ್ತವೆ ಎಂಬ ಕಾರಣಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಬಗ್ಗೆ ದೂರ ಉಳಿಯುವ ರಾಜಕೀಯ ಪಕ್ಷಗಳು ಜಾಣ ನಡೆ.
- *ಪದವೀಧರ ಕ್ಷೇತ್ರದ ಅಭ್ಯರ್ಥಿ ನಾಲ್ಕು ಜಿಲ್ಲೆಯ ವಿಸ್ತಾರ ಕ್ಷೇತ್ರವನ್ನು ಹೊಂದಿದ್ದು, ಯಾವುದೇ ಒಂದು ಊರಿಗೆ ಗಣನೀಯ ಕೊಡುಗೆ ಕೊಡಲು ಸಾಧ್ಯವಾಗದೇ ಇರುವುದು.
- *ಆ ಪಟ್ಟಿಯಲ್ಲಿ ಹೆಸರು ಸೇರಿಸಿದರೆ ನಮಗೇನು ಸಿಗುತ್ತದೆ. ಅಷ್ಟಕ್ಕೂ ನಮ್ಮ ಮತ ಪಡೆದು ಅವರು ಕಡಿದು ಕಟ್ಟೆ ಹಾಕುವುದೇನಿದೆ ಎಂಬ ತಾತ್ಸಾರ.
- *ರಾಜಕೀಯ, ರಾಜಕೀಯ ಪಕ್ಷಗಳ ಬಗ್ಗೆ ಯುವಕರಲ್ಲಿ ಜಿಗುಪ್ಸೆಯ ಭಾವ ಮೂಡಿರುವುದು.
ತಾಲೂಕು 2025 ರ ಮತದಾರರು
ಅಂತಿಮ ಮತದಾರರ ಪಟ್ಟಿಯಲ್ಲಿ ತಪ್ಪಿಹೋದ ಅರ್ಹ ಪದವೀಧರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಲು ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕಕ್ಕೆ 10 ದಿನಗಳ ಮೊದಲು ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ ಮತದಾರರ ನೋಂದಣಿ ಹಾಗೂ ನವೀಕರಣ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ.
ಎಂ.ಕೆ.ಜಾನಕಿ ಬೆಳಗಾವಿ ವಿಭಾಗೀಯ ಆಯುಕ್ತೆ