ಕಾರವಾರ: ಇಲ್ಲಿನ ಕ್ರಿಮ್ಸ್ ಆಸ್ಪತ್ರೆಯಲ್ಲಿ ನಡೆದ ಶಸ್ತ್ರ ಚಿಕಿತ್ಸೆಗಳ ಪೈಕಿ ಎಲುಬು ಮತ್ತು ಕೀಲುಗಳ ಪ್ರಕರಣಗಳೇ ಹೆಚ್ಚಾಗಿವೆ ಎಂಬುದು ಗಮನಾರ್ಹ ಸಂಗತಿ. ನಾಯಿ, ಜಾನುವಾರುಗಳು ಅಡ್ಡಬಂದು ಅಪಘಾತಕ್ಕೊಳಗಾಗಿ ಮೂಳೆ ಮುರಿದ ಪ್ರಕರಣಗಳು ಹೆಚ್ಚುತ್ತಿವೆ ಎಂಬುದು ವೈದ್ಯರು ಗಮನಿಸಿದ ಅಂಶವಾಗಿದೆ.
ಹೌದು, ಜಿಲ್ಲಾ ಸರ್ಕಾರಿ ಆಸ್ಪತ್ರೆಯು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಎಂದರೆ ಸರ್ಕಾರಿ ಮೆಡಿಕಲ್ ಕಾಲೇಜ್‌ಗೆ ಹಸ್ತಾಂತರವಾಗಿ 10 ವರ್ಷಗಳು ಕಳೆದಿವೆ. ಹಂತ, ಹಂತವಾಗಿ ಸೌಲಭ್ಯಗಳು ಲಭ್ಯವಾಗುತ್ತಿವೆ. ಒಟ್ಟಾರೆ ಒಳ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಸಾಕಷ್ಟು ಶಸ್ತç ಚಿಕಿತ್ಸೆಗಳೂ ನಡೆಯುತ್ತಿವೆ. ಅದರಲ್ಲಿ ಎಲುಬು ಮತ್ತು ಕೀಲು ವಿಭಾಗಕ್ಕೆ ಹೆಚ್ಚು ಕೆಲಸವಿದೆ. ಮುಖ್ಯವಾಗಿ ಮೂಳೆ ಮುರಿತ ಪ್ರಕರಣಗಳೇ ಹೆಚ್ಚಾಗಿವೆ.
ಕಳೆದ ಐದು ವರ್ಷಗಳಲ್ಲಿ ಎಂದರೆ 2021 ರಿಂದ 2025 ರವರೆಗಿನ ಶಸ್ತç ಚಿಕಿತ್ಸೆಯ ಡೇಟಾ ಗಮನಿಸಿದರೆ. ಕ್ರಿಮ್ಸ್ನಲ್ಲಿ 11,696 ಆಪರೇಶನ್‌ಗಳಾಗಿವೆ. ಅದರಲ್ಲಿ 4,187 ಎಲುಬು, ಕೀಲು ಮುರಿತದ ಶಸ್ತç ಚಿಕಿತ್ಸೆಗಳೇ ಆಗಿವೆ. ಇನ್ನು ಹೊಟ್ಟೆ ಮುಂತಾದ ಜನರಲ್ ಸರ್ಜರಿ ವಿಭಾಗಕ್ಕೆ ಸೇರಿದ 3,694 ಶಸ್ತç ಚಿಕಿತ್ಸೆಗಳು ನಡೆದಿವೆ. ಕಣ್ಣಿಗೆ ಸಂಬAಽಸಿದ 2009 ಶಸ್ತç ಚಿಕಿತ್ಸೆಗಳಾಗಿವೆ. ವಿಶೇಷ ಎಂದರೆ 2025 ರಲ್ಲಿ ಸೂಪರ್ ಸ್ಪೆಷಾಲಿಟಿ ವಿಭಾಗಕ್ಕೆ ಸಂಬಂಧಿಸಿದ 33 ಪ್ಲಾಸ್ಟಿಕ್ ಸರ್ಜರಿ ಆಗಿದೆ. ಕಿಡ್ನಿಗೆ ಸಂಬಂಧಿಸಿದ 23 ಶಸ್ತ್ರ ಚಿಕಿತ್ಸೆಗಳಾಗಿವೆ. 40 ದಂತ ಶಸ್ತ್ರ ಚಿಕಿತ್ಸೆಗಳಾಗಿವೆ.
ಹೆರಿಗೆಗಳು ಕಡಿಮೆ
ಸಾಮಾನ್ಯವಾಗಿ ಹೆರಿಗೆ ಸಂಖ್ಯೆಯ ಮೇಲೆ ಆಸ್ಪತ್ರೆಯ ಗಾತ್ರವನ್ನು ಅಳೆಯಲಾಗುತ್ತದೆ. ಜಿಲ್ಲೆಯ ಶಿರಸಿ, ಕುಮಟಾ ಮುಂತಾದ ತಾಲೂಕು ಆಸ್ಪತ್ರೆಗಳಿಗಿಂತ ಕಾರವಾರ ಕ್ರಿಮ್ಸ್ನಲ್ಲಿ ಹೆರಿಗೆಗಳು ಕಡಿಮೆ ಆಗುತ್ತವೆ. ದಿನಕ್ಕೆ 4 ರಿಂದ 5 ಮಾತ್ರ ಹೆರಿಗೆಗಳಾಗುತ್ತವೆ ಎನ್ನುತ್ತದೆ ಕ್ರಿಮ್ಸ್ ಡೇಟಾ. 2021 ರಿಂದ ಇದುವರೆಗೆ 4231 ಹೆರಿಗೆಗಳಾಗಿವೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಎಂದರೆ, 2388 ಹೆರಿಗೆಗಳು ಶಸ್ತç ಚಿಕಿತ್ಸೆಗಳಾಗಿವೆ. ಅಲ್ಲದೇ 590 ರಷ್ಟು ಸ್ತಿçà ರೋಗಕ್ಕೆ ಸಂಬAಽಸಿದ ಶಸ್ತç ಚಿಕಿತ್ಸೆಗಳನ್ನು ಮಾಡಲಾಗಿದೆ.
ವರ್ಷ ಒಟ್ಟಾರೆ ಶಸ್ತ್ರ ಚಿಕಿತ್ಸೆಗಳು
- 2021- 1251
- 2022 -2183
- 2023 - 2630
- 2024 -2888
- 2025 -2844
"
ಕಾರವಾರದಲ್ಲಿ ಬೇರೆ ತಾಲೂಕುಗಳಿಂದ ಸಾಮಾನ್ಯ ಹೆರಿಗೆಗೆ ಇಲ್ಲಿ ಬರುವುದಿಲ್ಲ. ಕ್ಲಿಸ್ಟಕರ ಹೆರಿಗೆಗಳಿಗಾಗಿ ಬೇರೆ ಆಸ್ಪತ್ರೆಗಳಿಂದ ಇಲ್ಲಿ ಗರ್ಭಿಣಿಯರು ಬರುತ್ತಾರೆ. ಇನ್ನು ಹಲವು ಕ್ಲಿಸ್ಟಕರ ಮೂಳೆ ಮುರಿತ ಪ್ರಕರಣಗಳೂ ಇಲ್ಲಿ ರೆಫರ್ ಆಗುತ್ತವೆ. ಇತರ ವಿಭಾಗಗಳಿಗೆ ಹೋಲಿಸಿದರೆ ಆ ವಿಭಾಗದಲ್ಲಿ ವೈದ್ಯರ ಸಂಖ್ಯೆಯೂ ಇದೆ. ಡಾ.ಪೂರ್ಣಿಮಾ ಆರ್.ಟಿ.ಡೀನ್, ಕ್ರಿಮ್ಸ್ ಕಾರವಾರ
"
ಒಟ್ಟಾರೆ ಮಾಡಲಾದ ಎಲುಬು ಕೀಲು ಶಸ್ತç ಚಿಕಿತ್ಸೆಗಳಲ್ಲಿ ಅಪಘಾತಗಳಾಗಿ ಎಲುಬು ಮುರಿದುಕೊಂಡು ಬರುವವರ ಸಂಖ್ಯೆ ಹೆಚ್ಚಿದೆ. ನಾಯಿ, ದನ ಅಡ್ಡ ಬಂದು ಅಪಘಾತಗಳಾಗುತ್ತಿರುವ ಪ್ರಕರಣಗಳು ಹೆಚ್ಚು ಬರುತ್ತಿರುವುದು ಗಮನಿಸಬೇಕಾದ ಅಂಶ.
ಡಾ.ಮಧುಕರ್ ಎಲುಬು, ಕೀಲು ವಿಭಾಗದ ಮುಖ್ಯಸ್ಥ