ಯಲ್ಲಾಪುರ ತಾಲೂಕಿನ ಆನಗೋಡಿನಲ್ಲಿ ಏರ್ಪಡಿಸಿದ್ದ ಸುಶಾಸನ ದಿನ ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ಕಾರ್ಯಕರ್ತ ಗಣಪತಿ ಮಾನಿಗದ್ದೆ ಅವರನ್ನು ಸನ್ಮಾನಿಸಲಾಯಿತು. ಪ್ರಸಾದ ಹೆಗಡೆ, ಹರಿಪ್ರಕಾಶ ಕೋಣೆಮನೆ, ಜಿ.ಎನ್. ಗಾಂವ್ಕರ, ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ, ರಾಮು ನಾಯ್ಕ, ಪ್ರಮೋದ ಹೆಗಡೆ ಇತರರಿದ್ದರು.
ಯಲ್ಲಾಪುರ: ತಾಲೂಕಿನ ಆನಗೋಡ ಸೊಸೈಟಿ ಸಭಾಭವನದಲ್ಲಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನದ ಪ್ರಯುಕ್ತ ಸುಶಾಸನ ದಿನವನ್ನು ಬಿಜೆಪಿ ತಾಲೂಕು ಮಂಡಲದ ವತಿಯಿಂದ ಆಚರಿಸಲಾಯಿತು.
ದೇಶ ಕಂಡ ಶ್ರೇಷ್ಠ ಪ್ರಧಾನಿ, ಮೌಲ್ಯಾಧಾರಿತ ರಾಜಕಾರಣಿಯಾಗಿ ವಾಜಪೇಯಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು. ಪಕ್ಷದ ಹಿರಿಯ ಕಾರ್ಯಕರ್ತ ಗಣಪತಿ ಮಾನಿಗದ್ದೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಯುವ ಕಲಾವಿದ ಗಣೇಶ ಹೆಗಡೆ ನೆರ್ಲೆಮನೆ ತಂಡದವರು ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ, ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ, ಮಂಡಲದ ನಿಕಟಪೂರ್ವ ಅಧ್ಯಕ್ಷ ಜಿ.ಎನ್. ಗಾಂವ್ಕರ, ಹಿರಿಯರಾದ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ, ರಾಮು ನಾಯ್ಕ, ಪ್ರಮೋದ ಹೆಗಡೆ, ರೈತ ಮೋರ್ಚಾ ಅಧ್ಯಕ್ಷ ರಾಮಚಂದ್ರ ಚಿಕ್ಯಾನಮನೆ, ಶಕ್ತಿ ಕೇಂದ್ರ ಪ್ರಮುಖ ಸತ್ಯನಾರಾಯಣ ಹೆಗಡೆ ಇತರರಿದ್ದರು.