ಗೋಕರ್ಣದ ಪರಿವರ್ತನಾ ಸಂಸ್ಥೆ ವತಿಯಿಂದ ಮಹಾಬಲೇಶ್ವರ ಮಂದಿರ ಗರ್ಭಗುಡಿ ಜಲಾವೃತ ತಡೆ ಕಾಮಗಾರಿ ಮಂಜೂರಿ ಮಾಡಲು ಮಾಜಿ ಸಚಿವ ಮಂಕಾಳ ವೈದ್ಯ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ, ಪತ್ರಕರ್ತ ಪ್ರಮೋದ ಶಾಸಿ ಮಂಗಳವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು. 
ಉತ್ತರ ಕನ್ನಡ

ಜರೂರ್ ಕಾಮಗಾರಿ ಪರಿಗಣಿಸಿ ಸಿಎಂ ಆದೇಶ gokarna

ಪ್ರಮುಖ ಮುಖ್ಯಾಂಶಗಳು

  • ಗೋಕರ್ಣ ಮಹಾಬಲೇಶ್ವರ ಗರ್ಭಗುಡಿ ಜಲಾವೃತ ಘಟನೆ

ಗೋಕರ್ಣ: ಕಳೆದಹಲವು ದಶಕಗಳಿಂದ ಭಾರಿ ಮಳೆ ಬೀಳುವವೇಳೆಯಲ್ಲಿ ಲಕ್ಷಾಂತರ ಭಕ್ತರಿಂದಪೂಜಿಸಲ್ಪಡುವ ಇಲ್ಲಿನ ಮಹಾಬಲೇಶ್ವರಮಂದಿರದ ಗರ್ಭಗುಡಿ ಜಲಾವೃತವಾಗಿಮಂದಿರ ಮತ್ತು ಕ್ಷೇತ್ರದಪಾವಿತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ.ಕಾರಣಇದನ್ನು ತಡೆಯಲು ಮಂದಿರದ ತೀರ್ಥವನ್ನುಹೊರಕ್ಕೆ ಸಾಗಿಸುವ ಸೋಮಸೂತ್ರನಾಲೆ ಮತ್ತು ತೀರ್ಥ ಅಂತಿಮವಾಗಿಹೋಗಿ ಸೇರುತ್ತಿರುವ ಸಮುದ್ರಬಳಿಯ ಸಂಗಮ ನಾಲೆಯ ಸ್ವಚ್ಛತೆಮತ್ತು ಯುಕ್ತ ನಿರ್ವಹಣೆ ಬಗ್ಗೆಅಗತ್ಯ ಕಾಮಗಾರಿ ಮಂಜೂರಿ ಮಾಡುವಂತೆಇಲ್ಲಿನ ಪರಿವರ್ತನಾ ಸಂಸ್ಥೆಯವತಿಯಿಂದ ಮಾಡಿದ್ದ ಲಿಖಿತ ಮನವಿಯನ್ನುಮಾಜಿ ಸಚಿವ ಮಂಕಾಳ ವೈದ್ಯ,ರಾಜ್ಯಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿನಿವೇದಿತ್ ಆಳ್ವಾ ಮತ್ತು ಪತ್ರಕರ್ತಪ್ರಮೋದ ಶಾಸಿ ಮುಖ್ಯಮಂತ್ರಿಡಿ.ಕೆ.ಶಿವಕುಮಾರಅವರ ಕಚೇರಿಯಲ್ಲಿ ಮಂಗಳವಾರಭೇಟಿಯಾಗಿ ನೀಡಿದರು.

ಈವೇಳೆ ಸಿಎಂ ಅವರಿಗೆ ಸಮಸ್ಯೆಯನ್ನುವಿವರಿಸಿದ ಮಂಕಾಳ ವೈದ್ಯ ಮತ್ತುನಿವೇದಿತ್ ಆಳ್ವಾ ಅವರು ಈ ವರ್ಷದಮಳೆಗಾಲದ ಪ್ರಾರಂಭದ ದಿನಗಳಲ್ಲಿಎರಡು ಬಾರಿ ಗರ್ಭಗುಡಿ ಜಲಾವೃತವಾಗಿಭಕ್ತರಿಗೆ ಪೂಜೆಗೆ ಅನನುಕೂಲವಾಗಿರುವಸಂಬಂಧ ವಿಜಯವಾಣಿ ಪತ್ರಿಕೆ ಸೇರಿವಿವಿಧ ಮಾಧ್ಯಮಗಳಲ್ಲಿ ಬಂದವರದಿಗಳತ್ತ ಗಮನ ಸೆಳೆದರು.

ಜತೆಗೆಜಲಾವೃತಗೊಂಡು ಆತ್ಮಲಿಂಗ ಮುಳುಗಿರುವಮತ್ತು ನಾಲೆಗಳ ದುಸ್ಥಿತಿಯ ವಿವಿಧಚಿತ್ರಗಳನ್ನು ಕೂಡ ವೀಕ್ಷಿಸಿದಸಿಎಂ ತಕ್ಷಣ ಕಚೇರಿಯಲ್ಲಿ ಅಧಿಕಾರಿಗಳಜತೆಗೆ ಈ ಕುರಿತು ಸಭೆ ನಡೆಸಿಚರ್ಚಿಸಿ,ಸಣ್ಣನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳಿಗೆನಿರ್ದೇಶನವಿತ್ತರು.ಚರ್ಚೆಯನಂತರ ಅಧಿಕೃತವಾಗಿ ಪರಿವರ್ತನಾಸಂಸ್ಥೆಯ ಅಧ್ಯಕ್ಷ ಪ್ರಮೋದ ಪೈಮತ್ತು ಕಾರ್ಯದರ್ಶಿ ಶಂಕರ ಗೋಪಿಅವರಿಂದ ನೀಡಲಾದ ಮನವಿ ಪತ್ರದಮೇಲೆ ಜರೂರು ಕಾಮಗಾರಿ ಎಂದುಪರಿಗಣಿಸಿ ಕೂಡಲೆ ಕಾಮಗಾರಿತೆಗೆದುಕೊಳ್ಳುವಂತೆ ಸಣ್ಣ ನೀರಾವರಿಇಲಾಖೆಗೆ ಲಿಖಿತ ಆದೇಶ ಮಾಡಿದರು.

ಈಬಗ್ಗೆ ಪತ್ರಿಕೆ ಜತೆ ಮಾತನಾಡಿರುವಮಂಕಾಳ ವೈದ್ಯ,ದೇಶದಲ್ಲಿವಿಖ್ಯಾತವಾಗಿರುವ ಏಕಮೇವ ಆತ್ಮಲಿಂಗಸನ್ನಿಧಿ ಎದುರಿಸುತ್ತಿರುವಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳುತೀವ್ರ ಕಾಳಜಿ ವ್ಯಕ್ತ ಪಡಿಸಿದ್ದಾರೆ.ಶ್ರೀಮಂದಿರದಪಾವನತ್ವದ ಸಂಬಂಧ ಈ ಸಮಸ್ಯೆಯಶಾಶ್ವತ ಪರಿಹಾರದ ಅಗತ್ಯವಿದೆ.ಹಂತಹಂತದ ಕಾಮಗಾರಿ ಮೂಲಕ ಸಮಸ್ಯೆಗಳನ್ನುಶಾಶ್ವತವಾಗಿ ಕೊನೆಗಾಣಿಸಲಾಗುವುದಾಗಿತಿಳಿಸಿರುವ ಅವರು,ಸಂಬಂಧಿಸಿದಇಲಾಖೆಗಳಿಗೆ ಕಟ್ಟುನಿಟ್ಟಿನಆದೇಶ ನೀಡಿದ್ದಾರೆ.ಈಹಿನ್ನೆಲೆಯಲ್ಲಿ ಸಿಎಂ ನಿರ್ದೇಶನದಂತೆಸರ್ಕಾರ ಮತ್ತು ಸಂಬಂಧಿಸಿದ ಇಲಾಖಾಅಧಿಕಾರಿಗಳು ಕೂಡಲೆ ಮುಂದಿನಅಗತ್ಯ ಕ್ರಮ ಜರುಗಿಸಲಿದ್ದಾರೆಎಂದು ಮಂಕಾಳ ವೈದ್ಯ ವಿಶ್ವಾಸವ್ಯಕ್ತ ಪಡಿಸಿದ್ದಾರೆ.