ಕಿಡ್ನಾಪ್‌ ನ ಸಿಸಿ ಕ್ಯಾಮರಾ ವಿಡಿಯೋ 
ಉತ್ತರ ಕನ್ನಡ

ಕಾರವಾರದಲ್ಲಿ ಗೋವಾದ ಕಿಡ್ನಾಪರ್‌ಗಳ ಬಂಧನ

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ಇಬ್ಬರ ಬಂಧನ ಮಾಡಿದ ಸೌತ್‌ ಗೋವಾ ಅಧಿಕಾರಿಗಳು
  • ಕಿಡ್ನಾಪ್‌ಗೊಳಗಾದ ವ್ಯಕ್ತಿಯ ರಕ್ಷಣೆ
ಕಾರವಾರ: ಗೋವಾ ರಾಜ್ಯದ ಮಡಗಾಂವನಿಂದ ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಅಲ್ಲಿನ ಪೊಲೀಸರು ಕಾರವಾರದಲ್ಲಿ ಬಂಧಿಸಿದ್ದಾರೆ. 
ಗೋವಾದ ವೈದ್ಯ ಡಾ.ಸತೀಶ ಕುಡ್ಚಲಕರ್ ಅವರ ಪುತ್ರ ಸಂಜಿಲ್ ಎಂಬಾತನನ್ನು ರಕ್ಷಿಸಲಾಗಿದೆ. ಈ ಸಂಬAಧ ಗೋವಾ ನಿವಾಸಿಗಳಾದ ಸಶೀಲ್ ಮಕ್ಸೂದ್ ಹಾಗೂ ಷಾ ಅಲಿ ಸೌದಾಗರ್ ಎಂಬ ಇಬ್ಬರನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಗೋವಾ ಪೊಲೀಸರು ತಿಳಿಸಿದ್ದಾರೆ. ವೈದ್ಯರ ಮಾಜಿ ಪತ್ನಿಯೇ ಕಿಡ್ನಾಪ್‌ಗೆ ಸುಪಾರಿ ನೀಡಿರುವ ಶಂಕೆ ಇದೆ. ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿರುವ ದೃಶ್ಯ ವೈರಲ್ ಆಗಿದೆ. ಈ ಸಂಬಂಧ ವೈದ್ಯರು ದೂರು ನೀಡುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು. ಕಾರವಾರ ಪೊಲೀಸರ ಸಹಕಾರ ಪಡೆದು, ಕಾರವಾರದಲ್ಲಿ ಅವರನ್ನು ಬಂಧಿಸಿ ಗೋವಾಕ್ಕೆ ಕರೆದೊಯ್ದಿದ್ದಾರೆ.