ಕುಮಟಾ ತಾಪಂ ಸಭಾಭವನದಲ್ಲಿ ಗುರುವಾರ ಮಾಸಿಕ ಸಾಮಾನ್ಯ ಸಭೆ (GI tag for sweet potato) ನಡೆಯಿತು. ಲಿಂಗರಾಜ ಇಟ್ನಾಳ್, ವೆಂಕಟೇಶಮೂರ್ತಿ, ಉದಯ ನಾಯ್ಕ, ವಿನಾಯಕ ವೈದ್ಯ, ಪ್ರಕಾಶ ಹಾಲಮ್ಮನವರ, ಇತರರಿದ್ದರು. 
ಉತ್ತರ ಕನ್ನಡ

ಸಿಹಿ ಉಳ್ಳಾಗಡ್ಡಿ ಜಿಐ ಟ್ಯಾಗ್ (GI tag for sweet potato) ಕಷ್ಟ ಸಾಧ್ಯ

ಪ್ರಮುಖ ಮುಖ್ಯಾಂಶಗಳು

  • ತೋಟಗಾರಿಕೆ ಎಡಿ ಲಿಂಗರಾಜ ಇಟ್ನಾಳ್ ಮಾಹಿತಿ
  • ಕುಮಟಾ ತಾಪಂ ಸಾಮಾನ್ಯ ಸಭೆ

ಕುಮಟಾ:ತಾಲೂಕಿನವನ್ನಳ್ಳಿ,ಹಂದಿಗೋಣಮುಂತಾದ ಕಡೆಗಳಲ್ಲಿ ಬೆಳೆಯಲಾಗುವಸಿಹಿ ಉಳ್ಳಾಗಡ್ಡಿಗೆ ಜಿಐ ಟ್ಯಾಗ್(GI tag for sweetpotato) ಪಡೆಯುವುದುಕಷ್ಟಸಾಧ್ಯವಿದೆ.ಆದರೆ,ಕುಮಟಾತೆಂಗಿನಕಾಯಿಗೆ ಜಿಐ ಟ್ಯಾಗ್ನಿರೀಕ್ಷೆಯಿದೆ ಎಂದು ತೋಟಗಾರಿಕೆಸಹಾಯಕ ನಿರ್ದೇಶಕ ಲಿಂಗರಾಜಇಟ್ನಾಳ್ ತಿಳಿಸಿದರು.

ತಾಪಂಸಭಾಭವನದಲ್ಲಿ ಮಾಸಿಕ ಸಾಮಾನ್ಯಸಭೆಯಲ್ಲಿ ಇಲಾಖಾ ಪ್ರಗತಿ ಮಂಡಿಸಿದಅವರು,ತೋಟಗಾರಿಕೆಬೆಳೆಗಳಲ್ಲಿ ವಿಶೇಷ ಹೆಸರಾದಕುಮಟಾದ ತೆಂಗಿನಕಾಯಿ ಹಾಗೂ ಸಿಹಿಉಳ್ಳಾಗಡ್ಡಿಗೆ ಜಿಐ ಟ್ಯಾಗ್ಪಡೆಯುವ ಪ್ರಯತ್ನ ಜಾರಿಯಲ್ಲಿದೆ.ಆದರೆ,ತೆಂಗುಬೆಳೆಗಾರರ ಸಂಘಟನೆಯ ಮೂಲಕ ನಿಗದಿತನಿಯಮಗಳನ್ನು ಅನ್ವಯಿಸಿ ಕುಮಟಾತೆಂಗಿನ ವಿಶಿಷ್ಟತೆಗೆ ಜಿಐ ಟ್ಯಾಗ್ಪಡೆಯುವ ಪ್ರಯತ್ನ ಯಶಸ್ವಿಯಾಗಬಹುದಾಗಿದೆ.ಆದರೆ,ಜಿಐಟ್ಯಾಗ್ ಪಡೆಯುವುದಕ್ಕೆ ಕನಿಷ್ಠ100 ಎಕರೆಯಷ್ಟಾದರೂಸಿಹಿ ಉಳ್ಳಾಗಡ್ಡಿ ಬೆಳೆಯಬೇಕು,ಇಲ್ಲಿಅಷ್ಟೊಂದು ಇಲ್ಲ,ಸಿಹಿಉಳ್ಳಾಗಡ್ಡಿ ಬೆಳೆಗಾರರ ಸಂಘಟನೆಯೂಈ ಕಾರ್ಯಕ್ಕೆ ಮುಂದೆ ಬರಬೇಕಾಗುತ್ತದೆ.ಇಂಥಹಲವು ಕಾರಣಗಳಿಗಾಗಿ ಸಿಹಿಉಳ್ಳಾಗಡ್ಡಿ ಜಿಐ ಟ್ಯಾಗ್ ಪಡೆಯುವುದುಕಷ್ಟಸಾಧ್ಯ.ಆದರೆ,ಇಲಾಖೆಯಪ್ರಯತ್ನವಂತೂ ನಡೆದೆ ಇದೆ ಎಂದರು.

ಕೃಷಿಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿಮಾತನಾಡಿ,ಪ್ರಸಕ್ತಸಾಲಿನಲ್ಲಿ ವಾಡಿಕೆ ಮಳೆ 3600ಮಿಮಿಗಿಂತ ಶೇ.35ರಷ್ಟುಮಳೆ ಹೆಚ್ಚಾಗಿದ್ದು,ತಾಲೂಕಿನಲ್ಲಿ4800 ಮಿಮಿಮಳೆಯಾಗಿತ್ತು.ನವೆಂಬರ್‌ನಲ್ಲೂಮಳೆ ಮುಂದುವರಿದಿದ್ದರಿಂದ ಅಂದಾಜು16 ಹೆಕ್ಟೇರ್‌ನಷ್ಟುಭತ್ತ ಬೆಳೆಯೂ ನಷ್ಟವಾಗಿದೆ.

ಹಿಂಗಾರುಬಿತ್ತನೆಗೂ ಸಮಸ್ಯೆಯಾಗಿದೆ.ಆದರೂಶೇಂಗಾ,ಉದ್ದು,ಹೆಸರುಮುಂತಾದವನ್ನು ರೈತರು ಬಿತ್ತನೆಮಾಡಿದ್ದು,ಇಲಾಖೆಯಿಂದ44 ಕ್ವಿಂಟಾಲ್‌ನಷ್ಟುಶೇಂಗಾ ಬೀಜ ವಿತರಿಸಿದ್ದೇವೆಎಂದರು.ಕಗ್ಗಭತ್ತವು ಇಲ್ಲಿನ ವಿಶಿಷ್ಟತಳಿಯಾಗಿದ್ದು,ರೈತರುಬೀಜವನ್ನು ಇಲಾಖೆಗೆ ನೀಡಿದರೆಮಾತ್ರ ಪುನಃ ಅದನ್ನು ಸಂಸ್ಕರಿಸಿಮರಳಿ ಬೀಜವಾಗಿ ರೈತರಿಗೆ ವಿತರಿಸಲುಸಾಧ್ಯವಿದೆ ಎಂದರು.

ಬಿಇಒಉದಯ ನಾಯ್ಕ,ಖಾಸಗಿ,ಅನುದಾನಿತಶಾಲೆಗಳು ಈಗಾಗಲೇ ಮುಂದಿನ ವರ್ಷಕ್ಕೆಪ್ರವೇಶಾತಿ ಆರಂಭಿಸಿರುವುದರಿಂದಸರ್ಕಾರಿ ಶಾಲೆಗಳಲ್ಲೂ ಮಕ್ಕಳದಾಖಲಾತಿ ಹೆಚ್ಚಿಸುವ ಉದ್ದೇಶದಿಂದಡಿಸೆಂಬರ್‌ನಲ್ಲೇ ಪ್ರವೇಶಾತಿಆರಂಭಿಸಿದ್ದೇವೆ ಎಂದರು.

ಅಕ್ಷರದಾಸೋಹಅಧಿಕಾರಿ ವಿನಾಯಕ ವೈದ್ಯ ಮಾತನಾಡಿ,ಸರ್ಕಾರಿಶಾಲೆಯ ಎಲ್‌ಕೆಜಿ,ಯುಕೆಜಿಮಕ್ಕಳನ್ನೂ ಅಕ್ಷರ ದಾಸೋಹದವ್ಯಾಪ್ತಿಯಲ್ಲಿ ತರಲಾಗಿದ್ದು,ಡಿಸೆಂಬರ್‌ನಿಂದಲೇಅವರಿಗೆ ಬಿಸಿಯೂಟ ಹಾಗೂ ಇತರಪೌಷ್ಟಿಕ ಆಹಾರ ವಿತರಣೆ ಶುರುವಾಗಿದೆ.ಮಕ್ಕಳಸಂಖ್ಯೆಗೆ ತಕ್ಕಂತೆ ಅಡುಗೆಸಿಬ್ಬಂದಿಯನ್ನು ಹೆಚ್ಚುವರಿನಿಯೋಜನೆಗೂ ಅವಕಾಶವಿದ್ದುಪರಿಶೀಲಿಸಲಾಗುತ್ತಿದೆ.ತಾಲೂಕಿನಲ್ಲಿರುವಒಟ್ಟು 445ಅಡುಗೆಸಿಬ್ಬಂದಿಗೆ ಸದ್ಯವೇ ಅಡುಗೆಸ್ಪರ್ಧೆ ಹಾಗೂ ಕಾರ್ಯಾಗಾರಆಯೋಜಿಸಲಾಗುವುದು ಎಂದರು.

ತಾಲೂಕಾಸ್ಪತ್ರೆಯಲ್ಲಿಎಸ್‌ಟಿಪಿ ಕಾಮಗಾರಿ ನಡೆಯುತ್ತಿದ್ದುಹಾಲಿ ಇರುವ ಶೌಚದ ಸೆಫ್ಟ್ಟಿಕ್ಟ್ಯಾಂಕ್ ಖಾಲಿ ಮಾಡುವ ಸಮಸ್ಯೆಯಿಂದಾಗಿಕಾಮಗಾರಿ ವಿಳಂಬವಾಗುತ್ತಿದೆಎಂದು ಆಸ್ಪತ್ರೆಯ ಸಹಾಯಕ ಅಧಿಕಾರಿಸಭೆಗೆ ತಿಳಿಸಿದರು.

ಪ್ರತಿಕ್ರಿಯಿಸಿದತಾಪಂ ಆಡಳಿತಾಧಿಕಾರಿ ಪ್ರಕಾಶಹಾಲಮ್ಮನವರ,ಕುಮಟಾಪುರಸಭೆ ಹಾಗೂ ಹೊನ್ನಾವರ ಪಟ್ಟಣಪಂಚಾಯಿತಿಯ ಸಕ್ಕಿಂಗ್ ಯಂತ್ರವೆರಡನ್ನೂಏಕಕಾಲಕ್ಕೆ ಬಳಸಿ ಪರಸ್ಪರಸಮನ್ವಯತೆಯೊಂದಿಗೆ ಎಸ್‌ಟಿಪಿಕಾಮಗಾರಿ ನಡೆಸಲು ಅನುಕೂಲಮಾಡಿಕೊಡಬೇಕು ಎಂದು ಸೂಚಿಸಿದರು.

ಆರೋಗ್ಯಾಧಿಕಾರಿಡಾ. ಆಜ್ಞಾನಾಯಕ,ತಾಲೂಕಿನಲ್ಲಿ2023-24 ನೇಸಾಲಿಗಾಗಿ ಅಳಕೋಡ ಹಾಗೂ ಮೂರೂರಿನಮಡಕಿಬೈಲ ಗ್ರಾಮವನ್ನು ತಂಬಾಕುಮುಕ್ತಗ್ರಾಮವಾಗಿ ಆಯ್ಕೆ ಮಾಡಲಾಗಿದೆ.ಇದೇರೀತಿ2024-25ನೇಸಾಲಿಗಾಗಿ ಪ್ರತಿ ಗ್ರಾಮ ಪಂಚಾಯಿತಿಮಟ್ಟದಲ್ಲಿ ಒಂದೊಂದು ಗ್ರಾಮಆಯ್ಕೆ ಮಾಡಬೇಕಿದೆ ಎಂದರು.

ಡಿ.21ಕ್ಕೆಪಲ್ಸ ಪೋಲಿಯೋ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ.ಒಟ್ಟೂ83 ಬೂತ್‌ಗಳಿಂದ7046 ಮಂದಿಗೆಪೋಲಿಯೋ ಹನಿ ಗುರಿ ಹಾಕಿಕೊಳ್ಳಲಾಗಿದೆಎಂದರು.

ಕಳೆದಹಲವಾರು ಸಭೆಗಳಂತೆಯೇ ಈ ಸಭೆಯಲ್ಲೂಹೆಸ್ಕಾಂಗೆ ಗ್ರಾಮ ಪಂಚಾಯಿತಿಗಳಿಂದವಿದ್ಯುತ್ ಬಿಲ್ ಬಾಕಿ ವಿಚಾರಮತ್ತೆ ಪ್ರಸ್ತಾಪವಾಯಿತು.

ಹೆಸ್ಕಾಎಇಇ ರಾಜೇಶ ಮಡಿವಾಳ ವಿವರಿಸಿ,ಒಟ್ಟು62.73 ಲಕ್ಷರೂ. ಬಾಕಿಇದೆ ಎಂದರು.ಪಂಚಾಯಿತಿಗಳಲ್ಲಿತೆರಿಗೆ ಅಭಿಯಾನದ ಮೂಲಕವಾದರೂವಿದ್ಯುತ್ ಬಿಲ್ ಪಾವತಿಗೆ ಕ್ರಮಕೈಗೊಳ್ಳಬೇಕು ಎಂದು ಆಡಳಿತಾಧಿಕಾರಿತಿಳಿಸಿದರು.

ಕುಮಟಾಕೈಗಾರಿಕಾ ವಸಾಹತಿಗೆ 110ಕೆವಿಗ್ರಿಡ್‌ನಿಂದ ನೇರ ವಿದ್ಯುತ್ಸಂಪರ್ಕ, ಮೂರೂರುಕಲ್ಲಬ್ಬೆಗೂ ನೇರ ಸಂಪರ್ಕ,ಜತೆಗೆಎತ್ತಿನಬೈಲದಲ್ಲಿ 33ಕೆವಿಕೇಂದ್ರ ಸ್ಥಾಪಿಸಿ ಸುತ್ತಮುತ್ತಲದೂರಗಾಮಿ ಗ್ರಾಮಗಳಿಗೂ ನೇರವಿದ್ಯುತ್ ಸಂಪರ್ಕ ನೀಡುವ ಮೂಲಕಅನಗತ್ಯ ವಿದ್ಯುತ್ ನಿಲುಗಡೆಯಸಮಸ್ಯೆಯಿಂದ ಗ್ರಾಹಕರು ಮುಕ್ತಿಪಡೆಯಲಿದ್ದಾರೆ ಎಂದು ಹೆಸ್ಕಾಂಎಇಇ ತಿಳಿಸಿದರು.

ಗೋಕರ್ಣಕ್ಕೆಸಂಜೆ 5.30ರಿಂದಬಳಿಕ 6.45ರವರೆಗೆಬಸ್ ಇಲ್ಲ.ಒಂದೊಮ್ಮೆಕಾರಣಾಂತರದಿಂದ 6.45ರಬಸ್ ಬಿಡದಿದ್ದರೆ ತಾಸುಗಟ್ಟಲೆಬಸ್ ಕಾಯಬೇಕಾದ ಅನಿವಾರ್ಯತೆಯಬಗ್ಗೆ ಉತ್ತರಿಸಿದ ವಾಕರಸಾ ಡಿಪೋವ್ಯವಸ್ಥಾಪಕ ಭಂಡಾರಿ,ಸಿಬ್ಬಂದಿಹಾಗೂ ಬಸ್ ಕೊರತೆಯಿಂದ ಬಸ್ಸಮಯಾವಳಿಯನ್ನು ಬದಲಿಸಲಾಗದಂತಿದೆಎಂದು ಅಸಹಾಯಕತೆ ನಿವೇದಿಸಿದರು.

ವಿವಿಧಇಲಾಖೆಗಳ ಪ್ರಗತಿ ಪರಿಶೀಲನೆನಡೆಯಿತು.ಇಒರಾಜೇಂದ್ರ ಭಟ್ ಇದ್ದರು.ನಾಗರಾಜಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.