ದಾಂಡೇಲಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಲಿಂಗಸೂಕ್ಷ್ಮ ಸಂವೇದನೆ ಮತ್ತು ಯುವಜನತೆ ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಡಾ. ಜಿ. ಬಸವರಾಜ, ತೃಪ್ತಿ ನಾಯಕ, ತಸ್ಲೀಮಾ ಜೋರುಮ್, ಮನೋಹರ ಉಡಚಂಚಿ ಮತ್ತಿತರರಿದ್ದರು.
ದಾಂಡೇಲಿ: ಹೆಣ್ಣು ದೇವತೆಯೂ ಅಲ್ಲ ರಾಕ್ಷಸಿಯೂ ಅಲ್ಲ ಅವಳೂ ಒಂದು ಜೀವ ಎಂಬ ಅಂತಃಕರಣವೇ ಲಿಂಗಸೂಕ್ಷ್ಮ ಸಂವೇದನೆ. ಹೆಣ್ಣನ್ನು ಸಮಾನವಾಗಿ ಪ್ರೀತಿಸುವ ಗೌರವಿಸುವ ಸೂಕ್ಷ್ಮ ವಿವೇಕವನ್ನು ಸಮಾಜ ಅಳವಡಿಸಿಕೊಂಡರೆ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತುಮಕೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಬಸವರಾಜ ಹೇಳಿದರು.
ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಲಿಂಗಸೂಕ್ಷ್ಮ ಸಂವೇದನೆ ಮತ್ತು ಯುವಜನತೆ ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೃಪ್ತಿ ನಾಯಕ ಮಾತನಾಡಿ, ಸಾವಿರಾರು ವಷರ್ಗಳಿಂದ ಹೆಣ್ಣು ಅನುಭವಿಸುತ್ತಾ ಬಂದ ಅಸಮಾನತೆ ಮತ್ತು ಶೋಷಣೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ತಸ್ಲೀಮಾ ಜೋರುಮ್, ಮನೋಹರ ಉಡಚಂಚಿ ಉಪಸ್ಥಿತರಿದ್ದರು. ಡಾ. ಎಂ.ಡಿ ಒಕ್ಕುಂದ, ಡಾ. ವಿನಯಾ ನಾಯಕ, ಎನ್‌ಎಸ್‌ಎಸ್ ವಿದ್ಯಾರ್ಥಿ ನಾಯಕರಾದ ಯೋನಲ್, ಪ್ರಶಾಂತ, ಸೀಮಾ, ಅನುಷಾ ಉಪಸ್ಥಿತರಿದ್ದರು. ಗೀತಾ ಕೋಟೆನ್ನವರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಶ್ವಿನಿ ಸ್ವಾಗತಿಸಿದರು. ಸೋನಿ ಪರಿಚಯಿಸಿದರು. ಅತೀಫಾ ವಂದಿಸಿದರು. ಸೋನಾಲಿ ಕಾರ್ಯಕ್ರಮವನ್ನು ನಿರೂಪಿಸಿದರು.