ಕಾರವಾರ ಪೊಲೀಸರು ಗಾಂಜಾ ಸಾಗಣೆದಾರರನ್ನು ಬಂಧಿಸಿದರು.  
ಉತ್ತರ ಕನ್ನಡ

ಅರ್ಧ ಕರಾವಳಿಗೆ ಗಾಂಜಾ ಪೂರೈಸುತ್ತಿದ್ದ ಮೂವರು ಮಹಿಳೆಯರು!!

ಪ್ರಮುಖ ಮುಖ್ಯಾಂಶಗಳು

  • ಕಾರವಾರ ಬಿಣಗಾದಲ್ಲಿ ಇಬ್ಬರ ಬಂಧನ
  • ಗೋವಾದಲ್ಲಿ ಮೂವರ ಬಂಧನ
  • ಕಾರವಾರಕ್ಕೆ ಪೂರೈಕೆಯಾಗುತ್ತಿದ್ದ ಗಾಂಜಾ ಮೂಲ ಹುಡುಕಿದ ಪೊಲೀಸರು
ಕಾರವಾರ: ಜಿಲ್ಲೆಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಗೋವಾದ ಮಹಿಳೆಯರ ಗ್ಯಾಂಗ್‌ಒಂದನ್ನು ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದುವರೆಗೆ ಸುಮಾರು 73 ಸಾವಿರ ರೂ.ಗೂ ಅಧಿಕ ಮೌಲ್ಯದ 1.31 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದು, ಐವರನ್ನು ಬಂಧಿಸಿದ್ದಾರೆ.
ಕಾರವಾರ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಯು.ಎಚ್.ಸಾತೇನಹಳ್ಳಿ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ನೇಹಲ್ ಖಾನ್, ಪ್ರಮೀಳಾ ನಾಯ್ಕ, ಕಾರ್ಯಾಚರಣೆ ನಡೆಸಿ, ಗೋವಾ ರಾಜ್ಯದ ಕಾಣಕೋಣ ಕೊಳಂ ಭಾಗ ಲಾಂಡ್ರಿಯಲ್ಲಿ ಗಾಂಜಾ ಪೂರೈಸುತ್ತಿದ್ದ ಮೂವರು ಮಹಿಳೆಯರನ್ನು ಬಂಽಸಿದ್ದಾರೆ. ಸುಷ್ಮಾ, ತುಳಸಿ, ಉಜ್ವಲಾ ಬಂಽತರು. ತಾಯಿ ತನ್ನ ಇಬ್ಬರು ಹೆಣ್ಣುಮಕ್ಕಳ ಜೊತೆ ಈ ವ್ಯವಹಾರ ನಡೆಸುತ್ತಿದ್ದಳು ಎನ್ನಲಾಗಿದೆ. ಅವರಿಂದ 48 ಸಾವಿರ ರೂ. ಮೌಲ್ಯದ 846 ಗ್ರಾಂ ಗಾಂಜಾ, ಡಿಜಿಟಲ್ ವೇಯಿಂಗ್ ಯಂತ್ರ ಹಾಗೂ 10,800 ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ.
ಈ ಮಹಿಳೆಯರು 1000 ರೂ. ಹಾಗೂ 500 ರೂ. ಸ್ಯಾಚೆಟ್‌ಗಳನ್ನು ಮಾಡಿ ಗೋವಾದಿಂದ ಉಡುಪಿಯವರೆಗೂ ಗಾಂಜಾ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗಗಳಿಗೆ ಇವರೇ ಮೂಲ ಪೂರೈಕೆದಾರರಾಗಿದ್ದರು. ಕಾರವಾರ ಹಾಗೂ ಅಂಕೋಲಾ ಭಾಗದಲ್ಲಿ ವಾಹನಗಳಲ್ಲಿ ಗಾಂಜಾ ತಂದು ಮಾರಾಟ ಮಾಡುವ ಸಾಕಷ್ಟು ಜನರಿಗೆ ಇವರು ಗಾಂಜಾ ಒದಗಿಸುತ್ತಿದ್ದರು. ಇನ್ನೂ ಹಲವರು ರೈಲಿನಲ್ಲಿ ಭಟ್ಕಳ, ಕುಮಟಾ, ಉಡುಪಿ, ಕುಂದಾಪುರ ಹೀಗೆ ಬೇರೆ ಬೇರೆ ಕಡೆ ಗಾಂಜಾ ತಲುಪಿಸುವವರಿದ್ದಾರೆ ಎನ್ನಲಾಗಿದೆ.
ಜು.27 ರಂದು ಬಿಣಗಾದ ರಾಮನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸದಾಶಿವಗಡ ತಾರಿವಾಡದ ಮಲ್ಲಿಕಾರ್ಜುನ ಹಡಪದ, ಬೆಂಗಳೂರು ರಾಮನಗರ ವಿನೋದಕುಮಾರ್ ಆರ್.ಜಾಲಮಂಗಲ ಎಂಬ ಇಬ್ಬರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಽಸಿದ್ದರು. ಅವರಿಂದ 25 ಸಾವಿರ ರೂ. ಬೆಲೆಬಾಳುವ 465 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿತ್ತು. ಅವರು ನೀಡಿದ ಮಾಹಿತಿಯಂತೆ ಮೂಲ ಪೂರೈಕೆದಾರರನ್ನು ಪೊಲೀಸರು ಬಂಽಸಿದ್ದಾರೆ.