ಕಾರವಾರ
ಬೆಳಗಾಂವಿ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕನ್ನಡವನ್ನು 'ಗುಡ್ಡಗಾಡು ಜಿಲ್ಲೆ' ಎಂದು ಘೋಷಿಸಿ, ಯೋಜನಾ ಮುಕ್ತ ಜಿಲ್ಲೆ ಎಂದು ನಿರ್ಣಯಿಸಿ ಎಂದು ಅರಣ್ಯ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರನಾಥ ನಾಯ್ಕ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತಮಾಡಿದರು.
ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಮತ್ತು ಪರಿಸರ ಸೂಕ್ಷ್ಮತೆ ಹೊಂದಿರುವುದು, ಸಮುದ್ರ ಮಟ್ಟದಿಂದ ಕನಿಷ್ಠ 600 ಮೀಟರ್ ಗಿಂತ ಹೆಚ್ಚು ಎತ್ತರ, ಉತ್ತರಕನ್ನಡ ಜಿಲ್ಲೆ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶದಿಂದ ಶೇ. 80 ರಷ್ಟು ಅರಣ್ಯ ಪ್ರದೇಶ ಹೊಂದಿದೆ. ಜಿಲ್ಲಾಡಳಿತವೇ 100 ವಿವಿಧ ಗುಡ್ಡಗಳ ಕುಸಿತದ ಸೂಕ್ತ ಪ್ರದೇಶ ಗುರುತಿಸಿದೆ.
ಕಸ್ತೂರಿ ರಂಗನ್ ವರದಿಯಲ್ಲಿ ಜಿಲ್ಲೆಯ 11 ತಾಲೂಕುಗಳಲ್ಲಿ 567 ಸೂಕ್ಷ್ಮ ಪ್ರದೇಶ ಹಳ್ಳಿ, ಹಾಗೂ ಜಿಲ್ಲೆಯಲ್ಲಿ 80 ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು ಅಂದರೆ, ಜಿಲ್ಲೆಯ ಜನಸಂಖ್ಯೆಯಲ್ಲಿ ಒಂದು ಮೂರಾಂಶ ಜನರು ವಾಸ್ತವ್ಯ ಮತ್ತು ಸಾಗುವಳಿ ಅರಣ್ಯ ಭೂಮಿಯ ಮೇಲೆ ಅವಲಂಬಿತರಾಗಿರುವುದರಿಂದ ಜಿಲ್ಲೆಯನ್ನು ಗುಡ್ಡ ಗಾಡು ಜಿಲ್ಲೆಯೆಂದು ಘೋಷಿಸಲು ಪ್ರಸಕ್ತವಾದ ಅಂಶವೆಂದು ಅವರು ಪ್ರಸ್ತಾಪಿಸಿದರು.
ಭೂ ಕುಸಿತ ಭೀತಿ, ಗಿರಿಜನ ವಾಸಿಸುವ ಪಶ್ಚಿಮ ಘಟ್ಟದ ಕಡಿದಾದ ಗುಡ್ಡಗಾಡುಗಳಿಂದ ಚಿಕ್ಕ ಚಿಕ್ಕ ಹಳ್ಳಿ, ಕಡಿದಾದ ರಸ್ತೆಗಳು, ನೈಸರ್ಗಿಕ ಅಡೆ ತಡೆಗಳಿಂದ, ಮೂಲ ಸೌಕರ್ಯದ ಕೊರತೆ, ಹಳ್ಳಿಯಿಂದ ಹಳ್ಳಿಗೆ ಅಂತರ, ತುರ್ತು ಆರೋಗ್ಯ ಸೇವೆಗೆ ಅನುಗುಣವಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವುದು ಗುಡ್ಡಗಾಡು ಜಿಲ್ಲೆ ಘೋಷಣೆಗೆ ಪ್ರಮುಖ ಭೌಗೋಳಿಕ ಲಕ್ಷಣಗಳಾಗಿವೆ ಎಂದು ಅವರು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ 80 ಸಾವಿರ ಅರಣ್ಯವಾಸಿಗಳ ಕುಟುಂಬಗಳು ಅಂದರೇ, ಒಂದು ಮೂರು ಅಂಶ ಜಿಲ್ಲೆ ಸಂಖ್ಯೆಯನ್ನು ಅರಣ್ಯವಾಸಿಗಳನ್ನು ಹೊಂದಿದೆ. ಅರಣ್ಯವಾಸಿಗಳು ವಾಸ್ತವ್ಯ ಮತ್ತು ಸಾಗುವಳಿಗಾಗಿ ಅರಣ್ಯ ಭೂಮಿ ಅನುಭವಿಸುತ್ತೀರುವುದು ಕೆವಲ 18 ಸಾವಿರ ಹೇಕ್ಟರ್ ಅರಣ್ಯ ಪ್ರದೇಶ ಮಾತ್ರ ಎಂದು ಅವರು ಹೇಳಿದರು.
ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಮೊಬೈಲ್ ನೆಟವರ್ಕ ಇಲ್ಲದ ಜಿಲ್ಲೆಯಾದ ಉತ್ತರಕನ್ನಡವೂ ಗುಡ್ಡಗಾಡು ಜಿಲ್ಲೆ ಘೋಷಣೆಗೆ ಅರ್ಹತೆ ಹೊಂದಿದೆ ಎಂದರು. ತಮಿಳುನಾಡಿನ ನೀಲಗಿರಿ, ಆಸಸ್ಸಾಂ ದಿಮಾ ಹಸಾವೋ ಗಳನ್ನು ಈಗಾಗಲೇ ನೀತಿ ಆಯೋಗದಡಿ ಘೋಷಿಸಲಾಗಿದೆ ಎಂದು ವಿವರಿಸಿದರು.
ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರು, ಯಲ್ಲಾಪುರ ಅಧ್ಯಕ್ಷ ಭೀಮಸೀ ವಾಲ್ಮಕೀ, ಜಿಲ್ಲಾ ಸಂಚಾಲಕ ರಾಜೇಶ ಮಿತ್ರ ನಾಯ್ಕ ತೆಂಗಿನಕೇರಿ ಸುದ್ದಿ ಗೋಷ್ಠಿಯಲ್ಲಿದ್ದರು.
.....
ಬಾಕ್ಸ್--
ಸಾಕಪ್ಪ ಸಾಕು ಯೋಜನೆ:
ಸ್ವಾತಂತ್ರ್ಯ ನಂತರದ ದಿನದಿಂದ ಉತ್ತರಕನ್ನಡ ಜಿಲ್ಲೆಯಲ್ಲಿನ 64,365 ಹೇ ಆರಣ್ಯ ಪ್ರದೇಶವನ್ನು ವಿವಿಧ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಜಿಲ್ಲೆಗೆ ಯಾವುದೇ ಯೋಜನೆ ಬೇಡ ಎಂಬ ಪರಿಸ್ಥಿತಿ ಇದೆ.
1972 ರ ಸಮ್ಮೇಳನದ ತತ್ವ ಸಿದ್ಧಾಂತಕ್ಕೆ ವ್ಯತಿರಿಕ್ತವಾಗಿ ಪರಿಸರ ವಿರೋಧಿ ಯೋಜನೆ ಜಾರಿಯಾಗುತ್ತಿವೆ. ಇದರಿಂದ ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶಕ್ಕೆ ಆತಂಕ ಉಂಟಾಗಿದೆ ಎಂದು ರವೀಂದ್ರನಾಥ ನಾಯ್ಕ ಹೇಳಿದರು
......