ವಿದೇಶಿ ಮಹಿಳೆ  
ಉತ್ತರ ಕನ್ನಡ

ವಿದೇಶಿ ಮಹಿಳೆ ಶವವಾಗಿ ಪತ್ತೆ

ಸುಭಾಸ ಹೆಗಡೆ ಧೂಪದಹೊಂಡ

ಗೋಕರ್ಣ:ಇಲ್ಲಿನ ಮುಖ್ಯ ಸಮುದ್ರ ತೀರದಲ್ಲಿ ಭಾನುವಾರ ರಾತ್ರಿ ವಿದೇಶಿ ಮಹಿಳೆಯೋರ್ವಳ ಶವ ಪತ್ತೆಯಾಗಿದೆ.ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಬೇಲೆಹಿತ್ತಲು ಬಳಿಯ ಗೆಸ್ಟ್-ಹೌಸ್ ಒಂದರಲ್ಲಿ ನೆಲೆಸಿದ್ದ ಯುರೋಪಿನ ಝೆಕ್ ಗಣರಾಜ್ಯದ ಮಹಿಳೆಯೋರ್ವಳು ಮುಖ್ಯ ಸಮುದ್ರದಲ್ಲಿ ಭಾನುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈಜಲು ತೆರಳಿ ಆ ನಂತರ ತಿರುಗಿ ಬಂದಿರಲಿಲ್ಲ.ನಂತರ ರಾತ್ರಿ ಈಕೆಯ ಶವ ಅದೇ ತೀರದಲ್ಲಿ ಪತ್ತೆಯಾಗಿದ್ದು ಮೃತಳು ಯುರೋಪಿನ ಝೆಕ್ ಗಣರಾಜ್ಯದ ಮಿಲೊಸ್ಲಾವಾ ಹರ್‌ಕೋವಾ(78) ಎಂದು ಪೊಲೀಸರು ಗುರುತಿಸಿರುವರು.ಈ ಬಗ್ಗೆ ಪಿಎಸ್‌ಐ ಶಶಿಧರ ಪ್ರಕರಣ ದಾಖಲಿಸಿದ್ದಾರೆ.ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠ ಜಗದೀಶ ಮತ್ತು ಭಟ್ಕಳ ಡಿಎಸ್‌ಪಿ ಮಹೇಶ ಕೆ. ಇಲ್ಲಿಗೆ ಆಗಮಿಸಿ ಸ್ಥಳ ಪರಿಶೀಲಿಸಿದರು.