ಮುಂಡಗೋಡ ಹಳೂರ ಶ್ರೀ ಮಾರಿಕಾಂಬಾದೇವಿಯ ಮೊದಲ ದಿನದ ಹೂವಿನ ಅಲಂಕಾರ.
ಮುಂಡಗೋಡ: ಪಟ್ಟಣದ ಹಳೂರ ಶ್ರೀ ಮಾರಿಕಾಂಬಾದೇವಿ ಚೌತಮನೆಯಲ್ಲಿ ಪ್ರತಿಷ್ಠಾಪನೆಯಾಗಿದ್ದು, ಗುರುವಾರ ಮೊದಲ ದಿನದ ಹೂವಿನ ಅಲಂಕಾರ ಅಮ್ಮನವರ ಭಕ್ತರಲ್ಲಿ ಭಕ್ತಿಯ ಭಾವನೆಯನ್ನು ಹೆಚ್ಚಿಸಿದೆ.
ಅಮ್ಮನವರ ಭಕ್ತರ ಭಕ್ತಿಯ ಪ್ರತೀಕವಾಗಿ 5ನೇ ಜಾತ್ರಾ ಮಹೋತ್ಸವದಿಂದ ಆರಂಭವಾದ ಪುಷ್ಪಾಲಂಕಾರ ಅಮ್ಮನವರ ಆಶೀರ್ವಾದಿಂದ ಸತತವಾಗಿ ಪ್ರತಿ ಜಾತ್ರೆಯಲ್ಲೂ ಮುಂದುವರೆದಿದೆ. ಮೊದಲ ದಿನದ ಹೂವಿನ ಅಲಂಕಾರ ಅಮ್ಮನವರ ಮೆರಗನ್ನು ಹೆಚ್ಚಿಸಿದೆ. ಪುಷ್ಪಾಲಂಕಾರ 3ದಿನಗಳಿಗೊಮ್ಮೆ ಬದಲಾವಣೆ ಆಗಲಿದೆ. ಅಮ್ಮನವರ ಪ್ರತಿಷ್ಠಾಪಿತ ಸ್ಥಳವು ವಿವಿಧ ಹೂವಿನ ಅಲಂಕಾರದಿಂದ ಸುಂದರವಾದ ವಾತಾವರಣವನ್ನು ಸೃಷ್ಟಿಸಿದೆ.
ಗುರುವಾರ ಬೆಳಗ್ಗೆ 7ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಹಣ್ಣು ಕಾಯಿ ಸೇವೆ ಆರಂಭವಾಗಿದೆ. ಸಾವಿರಾರು ಭಕ್ತಾಧಿಗಳು ಅಮ್ಮನವರಿಗೆ ಹಣ್ಣು ಕಾಯಿ ಸೇವೆ ಸಲ್ಲಿಸಿದ್ದಾರೆ.