ಹೊನ್ನಾವರ: ತಾಲೂಕಿನ ಸಾಲ್ಕೋಡ ಗ್ರಾಮದ ಜನತಾ ಕಾಲೋನಿ ರಸ್ತೆಯಲ್ಲಿ ಒಣಹುಲ್ಲು ಸಾಗಿಸುತ್ತಿದ್ದ ಬುಲೆರೋ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಬೆಂಕಿ ಆವರಿಸಿ ಬುಲೆರೋ ವಾಹನ ಸುಟ್ಟು ಕರಕಲಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿಯು ಪಕ್ಷದ ಅರಣ್ಯ ಪ್ರದೇಶಕ್ಕೆ ಆವರಿಸದಂತೆ ನೋಡಿಕೊಂಡರು. ವಾಹನವು ಸಾಗರ ತಾಲೂಕಿನಿಂದ ಹುಲ್ಲು ತುಂಬಿಕೊಂಡು ಬಂದಿದೆ ಎನ್ನಲಾಗಿದೆ.
ಬೆಂಕಿ ತಗುಲಿದ ವಾಹನವು ಸಂಪೂರ್ಣ ಹಾನಿಗೊಳಗಾಗಿದೆ. ಮೊಬೈಲ್ ಫೋನ್ ಮತ್ತು ವಾಹನದ ದಾಖಲು ಪತ್ರ ಸುಟ್ಟು ಹೋಗಿವೆ. ಚಾಲಕ ಹಾಗು ವಾಹನದಲ್ಲಿದ್ದ ಮತ್ತೊಬ್ಬ ಪ್ರಾಣಾಪಯದಿಂದ ಪಾರಾಗಿದ್ದಾರೆ.