ಕಾರಿಗೆ ಬೆಂಕಿ 
ಉತ್ತರ ಕನ್ನಡ

ಸಿಲಿಂಡರ್ ಸ್ಪೋಟ, ಆಟೋ ಕಾರುಗಳು ಭಸ್ಮ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಆಟೋ ರಿಕ್ಷಾದಲ್ಲಿದ್ದ ಸಿಲಿಂಡರ್ ಕಿಟ್ ಸ್ಪೋಟಗೊಂಡು ರಿಕ್ಷಾ ಸೇರಿ ಎರಡು ಕಾರು ಸುಟ್ಟು ಹೋದ ಘಟನೆ ತಾಲೂಕಿನ ಅಮದಳ್ಳಿಯಲ್ಲಿ ಸೋಮವಾರ ತಡ ರಾತ್ರಿ ನಡೆದಿದೆ.
ಸುಫ್ರೀನ್ ಫರ್ನಾಂಡಿಸ್ ಹಾಗೂ ಥಾಮಸ್ ಫರ್ನಾಂಡಿಸ್ ಎಂಬುವರಿಗೆ ಸೇರಿದ ಎರಡು ಕಾರು ಹಾಗೂ ಒಂದು ರಿಕ್ಷಾ ಸುಟ್ಟು ಕರಕಲಾಗಿದೆ.
ಅಟೋದಲ್ಲಿದ್ದ ಎಲ್'ಪಿಜಿ ಕಿಟ್ ನಲ್ಲಿ ಸೋರಿಕೆ ಆಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ವಾಹನಗಳು ಕ್ಷಣಾರ್ಧದಲ್ಲೇ ಹೊತ್ತಿ ಉರಿದಿವೆ.
ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.