ಸಿದ್ದಾಪುರ: ಕೌಂಟುಂಬಿಕ ಕಲಹದಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದ್ದು, ಇನ್ನಿಬ್ಬರನ್ನು ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ನಡೆದಿದೆ.
ಅವರಗುಪ್ಪದ ವಸಂತ ನಾಯ್ಕ(33) ಕೊಲೆಯಾದವರು. ಅವರ ತಮ್ಮ ಮಹೇಶ ನಾಯ್ಕ, ಪಕ್ಕದ ಮನೆಯ ಕುಮಾರ ನಾಯ್ಕ ಗಾಯಗೊಂಡಿದ್ದು, ಶಿವಮೊಗ್ಗ ಆಸ್ಪತ್ರೆಗೆ ಸಾಗಿಸಲಾಗಿದೆ.
ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಸುಚಿತ್ರಾ ನಾಯ್ಕ, ಆಕೆಯ ತಂದೆ ಲೋಕನಾಥ ಚೌಡಪ್ಪ, ನಾಯ್ಕ, ಹೆಮ್ಮನಬೈಲ್ ನ ಕಮಲಾಕರ ಸ್ವಾಮಿ ಹಾಗೂ ನಾಲ್ವರು ಅಪರಿಚಿತರು ಸೇರಿ ಕೊಲೆ ಮಾಡಿದ್ದಾರೆ ಎಂದು ಮೃತರ ಪತ್ನಿ ಸಂಧ್ಯಾ ನಾಯ್ಕ ಸಿದ್ದಾಪುರ ಠಾಣೆಗೆ ದೂರು ನೀಡಿದ್ದಾರೆ.ಎಸ್ ಪಿ ದೀಪನ್ ಎಂ.ಎನ್.ಸ್ಥಳಕ್ಕೆ ಭೇಟಿ ನೀಡಿದ್ದು ಆರೋಪಿತರ ಪತ್ತೆಗೆ ಬಲೆ ಬೀಸಿದ್ದಾರೆ.
ಹಿನ್ನೆಲೆ:
ಅವರಗುಪ್ಪದ ಮಹೇಶ ನಾಯ್ಕ ಕೌಟುಂಬಿಕ ಕಲಹ ಅವರ ಸಹೋದರನನ್ನು ಬಲಿ ತೆಗೆದುಕೊಂಡಿದೆ. ಮಹೇಶ ಸುಚಿತ್ರಾ ನಾಯ್ಕ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಆದರೆ, ಅವರ ನಡುವೆ ಬಿರುಕು ಕಾಣಿ ನಾಯ್ಕ ಕೌಟುಂಬದಲ್ಲಿ ಬಿರುಕು ಉಂಟಾಗಿತ್ತು. ಮಹೇಶ ಬೆಂಗಳೂರಿಗೆ ಹೋಗಿ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದರೆ, ಆತನ ಪತ್ನಿ ಸುಚಿತ್ರಾ ಶಿವಮೊಗ್ಗಕ್ಕೆ ತೆರಳಿ ಕಮಲಾಕರ ಸ್ವಾಮಿ ಎಂಬುವವನ ಜೊತೆ ಇಬ್ಬರು ಹೆಣ್ಣು ಮಕ್ಕಳ ಜೊತೆ ವಾಸವಿದ್ದಳು.
ಮಹೇಶ- ಸುಚಿತ್ರಾ ಅವರ ಮಗಳು ಸುಮಶ್ರೀ ಮಹೇಶ ಅವರಿಗೆ ಸಂದೇಶ ಕಳಿಸಿ, "ಅಮ್ಮನ ಕಿರುಕುಳ ವಿಪರೀತವಾಗಿದೆ. ನನ್ನನ್ನು ಕರೆದುಕೊಂಡು ಹೋಗು" ಎಂದು ಮನವಿ ಮಾಡಿದ್ದಳು. ತಂದೆಯ ಸೂಚನೆಯ ಮೇರೆಗೆ ಮಗಳು ಸುಮಶ್ರೀ ಬಸ್ ಹತ್ತಿ ಸಿದ್ದಾಪುರಕ್ಕೆ ಬಂದಿದ್ದಳು. ಸಿದ್ದಾಪುರ ಠಾಣೆಯಲ್ಲಿ ಮಾಹಿತಿ ನೀಡಿ ಶಿರಸಿ ಮಕ್ಕಳ ರಕ್ಷಣಾ ಸಮಿತಿಗೆ ತೆರಳಿ ಮಾಹಿತಿ ನೀಡಿ ಮಹೇಶ ಹಾಗೂ ಸುಮಶ್ರೀ ಇಬ್ಬರೂ ರಾತ್ರಿ ಮನೆಗೆ ತಲುಪಿದ್ದರು. ಸೋಮವಾರ ರಾತ್ರಿ ನಾಲ್ವರು ಅಪರಿಚಿತ ಗಂಡಸರ ಜೊತೆ ಆಗಮಿಸಿದ ಸುಚಿತ್ರಾ, ಆಕೆಯ ತಂದೆ ಲೋಕನಾಥ ನಾಯ್ಕ ಹಾಗೂ ಕಮಲಾಕರ ಸ್ವಾಮಿ ಅವರು ಗಲಾಟೆ ಮಾಡಿದ್ದರು. ನಂತರ ಮೂವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ವಸಂತ ನಾಯ್ಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.