ಸಿದ್ದಾಪುರದಲ್ಲಿ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಿ.ಆರ್. ನಾಯ್ಕ, ಚೈತನ್ಯಕುಮಾರ, ಸತೀಶ ಹೆಗಡೆ, ರಾಜೇಶ ನಾಯ್ಕ, ಎಂ.ವಿ. ನಾಯ್ಕ ಇತರರಿದ್ದರು.
ಸಿದ್ದಾಪುರ: ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರನ್ನು ಸ್ಮರಿಸುವುದು ಹಾಗೂ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುವುದು ಮಾದರಿ ಕಾರ್ಯ. ಹೆಣ್ಣು ಮಕ್ಕಳು ಓದಬಾರದು ಎಂಬ ನಂಬಿಕೆ ಇದ್ದ ಕಾಲದಲ್ಲಿ ಕಲಿತು, ಶಿಕ್ಷಕಿಯಾಗಿ ದಲಿತರು, ಬಡವರಿಗೆ ವಿದ್ಯಾದಾನ ಮಾಡಿದ ಹಿರಿಮೆ ಸಾವಿತ್ರಿಬಾಯಿ ಫುಲೆ ಅವರಿಗಿದೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಡಿ.ಆರ್.ನಾಯ್ಕ ಹೇಳಿದರು.
ಸಿದ್ದಾಪುರದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನ ಎಲ್ಲ ಶಿಕ್ಷಕಿಯರೂ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಅರ್ಹರು. ತಾಲೂಕಿನ ಶಿಕ್ಷಕ ವರ್ಗ ಉತ್ತಮ ಶಿಕ್ಷಣ ನೀಡಿದ್ದರಿಂದ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ ಎಂದು ಶ್ಲಾಘಿಸಿದರು. ಸಂಘದ ಶಿಕ್ಷಕರಿಗೆ ವಾರ್ಷಿಕವಾಗಿ ನೀಡುವ ಫಾರ್ಮ್‌ಗಳ ಬಿಡುಗಡೆ ಮಾಡಿದರು.
ಬಿಆರ್‌ಸಿ ಸಮನ್ವಯಾಧಿಕಾರಿ ಚೈತನ್ಯಕುಮಾರ ಕೆ.ಎಂ. ಅಧ್ಯಕ್ಷತೆವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಶ ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ.ನಾಯ್ಕ, ಪ್ರಧಾನಮಂತ್ರಿ ಪೋಷಣಾಶಕ್ತಿ ನಿರ್ಮಾಣ ಯೋಜನೆಯ ಸಹಾಯಕ ನಿರ್ದೇಶಕ ಉದಯ ಮೇಸ್ತ, ಶಿಕ್ಷಣ ಸಂಯೋಜಕ ಮಂಜುನಾಥ ಶಾಸ್ತ್ರಿ, ಮಂಜುಳಾ ಪಟಗಾರ, ವಿಜಯಲಕ್ಷ್ಮೀ, ನಮೃತಾ ವಿ., ರಾಮನಾಥ ನಾಯ್ಕ, ಜಿ.ಆರ್. ಹೆಗಡೆ, ಪದಾಧಿಕಾರಿಗಳು, ಸಿಆರ್‌ಪಿಗಳು ಉಪಸ್ಥಿತರಿದ್ದರು.
ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಗುರುರಾಜ ನಾಯ್ಕ ಸ್ವಾಗತಿಸಿದರು. ರಮ್ಯಾ ಪಟಗಾರ ನಿರ್ವಹಿಸಿದರು. ವಿಜಯಲಕ್ಷ್ಮೀ ಬಿ. ವಂದಿಸಿದರು.
ಪ್ರಶಸ್ತಿ: ಮಹಿಮಾ ಭಟ್ಟ, ಸವಿತಾ ಹೆಗಡೆ ಮಂಜುಳಾ ಹರಿಕಾಂತ, ನಾಗರತ್ನಾ ನಾಯ್ಕ, ಸೀಮಾ ಮಡಿವಾಳ, ಸ್ಮಿತಾ ಜೋಶಿ, ಗಿರಿಜಾ ದೇವಾಡಿಗ, ಮಂಗಳಮ್ಮ ಎನ್., ಗಂಗಾ ನಾಯ್ಕ, ವಿದ್ಯಾ ಭಟ್ಟ, ಗುಲಾಬಿ ನಾಯ್ಕ, ರೇಖಾ ಭಂಡಾರಿ, ಹೇಮಾವತಿ ನಾಯ್ಕ, ಗೀತಾಬಾಯಿ ಪಾಲನಕರ, ಗಿರಿಜಾ ಭಟ್ಟ, ಸುನಂದಾ ನಾಯ್ಕ, ಅಕ್ಕಮ್ಮ ನಾಯ್ಕ, ಶ್ರೀಮತಿ ಭಟ್ಟ ಅವರಿಗೆ ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.