ಚರಸ್ ಮಾರುತ್ತಿದ್ದ ಇಂಜಿನಿಯರ್ ನನ್ನು ಪೊಲೀಸರು ಬಂಧಿಸಿದರು 
ಉತ್ತರ ಕನ್ನಡ

ಚರಸ್ ಮಾರುತ್ತಿದ್ದ ಇಂಜಿನಿಯರ್ ಬಂಧನ!!

ಸುಭಾಸ ಹೆಗಡೆ ಧೂಪದಹೊಂಡ
ಮುಂಡಗೋಡ: ಚರಸ್ ಮಾರಾಟ ಮಾಡುತ್ತಿದ್ದ ಇಂಜಿನಿಯರ್ ಒಬ್ಬನನ್ನು ಮುಂಡಗೋಡ ಠಾಣೆ ಪೊಲೀಸರು ಶುಕ್ರವಾರ  ಬಂಧಿಸಿದ್ದಾರೆ.
ಸುಭಾಷ್ ನಗರದ  ಸಚಿನ್ ಟೆಕ್ ಬಹದ್ದೂರ್ ಗೂರ್ಖಾ ಬಂಧಿತ. ಆತನಿಂದ 8 ಲಕ್ಷ ರೂ. ಮೌಲ್ಯದ 781 ಗ್ರಾಂ ಚರಸ್ ವಶಕ್ಕೆ ಪಡೆಯಲಾಗಿದೆ.
ಆತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ.
ಮಾದಕ ವಸ್ತುವಿನೊಂದಿಗೆ ಬೈಕ್ ನಲ್ಲಿ ತೆರಳುವಾಗ ಪಟ್ಟಣದ ಶಿರಸಿ-ಹುಬ್ಬಳ್ಳಿ ಮಾರ್ಗದ (ರಾಜ್ಯ ಹೆದ್ದಾರಿ-69) ರಲ್ಲಿ ಬಸ್ 
ಡಿಪೋ ಹತ್ತಿರ ತೆರಳುವಾಗ ಪೊಲೀಸರು ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ.‌ 
ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ,  ಪಿಎಸ್ ಐ ಯಲ್ಲಾಲಿಂಗ ಕುನ್ನೂರ, ಸಿಬ್ಬಂದಿ  ಕೋಟೇಶ್ವರ ನಾಗರವಳ್ಳಿ ಮಹಾಂತೇಶ ಮುಧೋಳ, ಅಣ್ಣಪ್ಪ ಬುಡಿಗೇರ, ಶಿವಾನಂದ ದಾನಣ್ಣವರ, ಅನ್ವರ ಬಮ್ಮಿಗಟ್ಟಿ,  ಚಾಲಕ ಗುರುರಾಜ 
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.