ಸಾಂದರ್ಭಿಕ ಚಿತ್ರ  
ಉತ್ತರ ಕನ್ನಡ

ವಿದ್ಯುತ್‌ ಶಾಕ್‌ ಶಾಮಿಯಾನ ಕಾರ್ಮಿಕ ಸಾವು

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ವಿದ್ಯುತ್ ಶಾಕ್ ತಗುಲಿ ಶಾಮಿಯಾನ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಗುರುವಾರ ನಗರದ ಕೆಎಚ್‌ಬಿ ಕಾಲನಿಯಲ್ಲಿ ನಡೆದಿದೆ.
ಪದ್ಮನಾಭ ನಗರದ ಭರತ್ ಗೌಡ(30) ಮೃತರು. ರಾಜು ವೆರ್ಣೇಕರ್ ಎಂಬುವವರ ಮನೆಯ ಗೃಹ ಪ್ರವೇಶಕ್ಕಾಗಿ ಪ್ರೇಮಾನಂದ ಗುನಗಾ ಅವರಿಗೆ ಸೇರಿದ ಶಾಮಿಯಾನ ಹಾಕಲಾಗಿತ್ತು. ಗುರುವಾರ ಬೆಳಗ್ಗೆ ಅದನ್ನು ತೆರವು ಮಾಡುವ ವೇಳೆ ಮೇಲಿದ್ದ ವಿದ್ಯುತ್ ತಂತಿಯಿAದ ಶಾಕ್ ತಾಗಿ, ಅಸ್ವಸ್ಥರಾಗಿದ್ದ ಅವರನ್ನು ಕ್ರಿಮ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆಗ ಅವರು ಮೃತಪಟ್ಟಿರುವುದು ಖಚಿತವಾಗಿದೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.