ಯಲ್ಲಾಪುರದ ಕಾಳಮ್ಮನಗರ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿದರು. ಸುರೇಶ ಮಡಿವಾಳ, ಉಲ್ಲಾಸ ಶಾನಭಾಗ, ಸುನಂದಾ ದಾಸ, ಶ್ಯಾಮಿಲಿ ಪಾಟಣಕರ, ಸಂಜೀವಕುಮಾರ ಹೊಸ್ಕೇರಿ ಇತರರಿದ್ದರು. 
ಉತ್ತರ ಕನ್ನಡ

ವ್ಯಕ್ತಿಯ ಪರಿವರ್ತನೆಗೆ ಶಿಕ್ಷಣ ಅವಶ್ಯ

ಯಲ್ಲಾಪುರ: ಶಿಕ್ಷಣದಿಂದ ಮಾತ್ರ ವ್ಯಕ್ತಿಯ ಪರಿವರ್ತನೆ ಸಾಧ್ಯ ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಕಾಳಮ್ಮನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಕಾಲಿಕವಾಗಿ ನಿಧನರಾದ ಶಾಲೆಯ ವಿದ್ಯಾರ್ಥಿನಿಯರಾದದ ಸಿಂಚನಾ ಹಾಗೂ ಕೋಮಲಾ ಅವರ ಹೆಸರಿನಲ್ಲಿ ದತ್ತಿನಿಧಿ ಪ್ರಾರಂಭಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಬಹುಮಾನ ವಿತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ, ಪಪಂ ಮಾಜಿ ಅಧ್ಯಕ್ಷೆ ಸುನಂದಾ ದಾಸ, ಮಾಜಿ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಬಿದ್ರೆಮನೆ ಮಾತಾಡಿದರು.
ಯುವಜನ ಸೇವಾ ಕ್ರೀಡಾಧಿಕಾರಿ ನಾರಾಯಣ ನಾಯಕ, ಭಾರತ ಸೇವಾದಳದ ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ, ಸಿಆರ್‌ಪಿ ಶಿವಾನಂದ ವೆರ್ಣೆಕರ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಸಂಧ್ಯಾ, ನಿವೃತ್ತ ಶಿಕ್ಷಕ ಮಂಜುನಾಥ ನಾಯಕ, ಕಾಳಮ್ಮ ದೇವಸ್ಥಾನದ ಅಧ್ಯಕ್ಷ ಉದಯ ನಾಯ್ಕ, ಉಪಾಧ್ಯಕ್ಷ ನವೀನ ನಾಯ್ಕ, ಪತ್ರಕರ್ತರಾದ ನಾಗರಾಜ ಮದ್ಗುಣಿ, ಜಯರಾಜ ಗೋವಿ, ಮುಖ್ಯಾಧ್ಯಾಪಕ ಸಂಜೀವಕುಮಾರ ಹೊಸ್ಕೇರಿ, ಶಿಕ್ಷಕರಾದ ರೇಣುಕಾ ಗಾಂವ್ಕರ, ಜ್ಯೋತಿ ನಾಯ್ಕ, ಗಾಯತ್ರಿ ಭಟ್ಟ, ವೀಣಾ ನಾಯ್ಕ ಪುಷ್ಪಾ ಮೊಗೇರ ಇತರರಿದ್ದರು.