ದಾಂಡೇಲಿ ಅಂಚೆ ಕಚೇರಿ ಆವರಣದಲ್ಲಿ ಅಂಚೆ ಇಲಾಖೆಯ ಸರಕು ಸಾಗಣೆ ವಾಹನಕ್ಕೆ ಚಾಲನೆ ನೀಡಲಾಯಿತು.  
ಉತ್ತರ ಕನ್ನಡ

ಅಂಚೆ ಇಲಾಖೆ ಸರಕು ಸಾಗಣೆ ವಾಹನಕ್ಕೆ ಚಾಲನೆ Indian post

ದಾಂಡೇಲಿ: ತ್ವರಿತ ಸೇವೆ ಹಾಗೂ ಗ್ರಾಹಕ ಸ್ನೇಹಿ ಸೇವೆಯ ಉದ್ದೇಶದಿಂದ ಅಂಚೆ ಇಲಾಖೆಯ ಹೊಸದಾದ ಸರಕು ಸಾಗಣೆಯ ವಾಹನಕ್ಕೆ ನಗರದ ಕೇಂದ್ರ ಅಂಚೆ ಕಚೇರಿ (indian Post) ಆವರಣದಲ್ಲಿ ಇತ್ತೀಚೆಗೆ ಚಾಲನೆ ನೀಡಲಾಯಿತು.
ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಶಿರಸಿ ವಿಭಾಗದ ಅಂಚೆ ಅಧೀಕ್ಷಕ ಹೂವಪ್ಪ ಜಿ., ಈ ವಾಹನವು ಪ್ರತಿದಿನ ಬೆಳಗ್ಗೆ ಹುಬ್ಬಳ್ಳಿ ಆರ್.ಎಂ.ಎಸ್‌ನಿಂದ ಹೊರಟು ಹಳಿಯಾಳ, ದಾಂಡೇಲಿ, ಅಂಬಿಕಾನಗರ, ಕುಂಬಾರವಾಡಾ, ಜೊಯಿಡಾ, ಗಣೇಶಗುಡಿ, ಜಗಲಬೇಟ್, ರಾಮನಗರ ಮತ್ತು ಕ್ಯಾಸಲ್ ರಾಕ್ ಅಂಚೆ ಕಚೇರಿಗಳಿಗೆ ಸರಕುಗಳನ್ನು ತಲುಪಿಸಿ ಮತ್ತು ಆಯಾ ಅಂಚೆ ಕಚೇರಿಗಳಿಂದ ಅದೇ ಮಾರ್ಗದಲ್ಲಿ ಅಂಚೆ ಚೀಲಗಳನ್ನು ಕೊಂಡೊಯ್ಯುತ್ತದೆ.
ತ್ವರಿತ ಸೇವೆಯೊಂದಿಗೆ ಇದೊಂದು ಗ್ರಾಹಕ ಸ್ನೇಹಿ ಸೇವೆಯಾಗಿದೆ ಎಂದರು.
ದಾಂಡೇಲಿ ವಲಯದ ವಿವಿಧ ಅಂಚೆ ಕಚೇರಿಗಳ ಅಂಚೆಪಾಲಕರಾದ ನಮೃತಾ ಕೋಳಂಬಕರ್, ಯು.ಜಿ. ಗಾಂವಕರ, ಮೇರಿ ಮಂಚಲಾ, ವಿಜಯಕುಮಾರ್ ಕಲಾಲ, ಜಯಶ್ರೀ ದೀಪಸಾಗರ ಹಾಗೂ ಅಂಚೆ ಇಲಾಖೆಯ ಸಿಬ್ಬಂದಿಯಿದ್ದರು.