ಕುಡಿಯುವ ನೀರಿನ water problem ಸಮಸ್ಯೆಯಿಂದ ಮುಂಡಗೋಡ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬೋರರ್ವೆಲ್ ಬಾಡಿಗೆ ಪಡೆದಿರುವುದು 
ಉತ್ತರ ಕನ್ನಡ

water problem ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ಮುಂಡಗೋಡ: ತಾಲೂಕಿನ ಹತ್ತುಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರು water problem ಸರಬರಾಜು ಮಾಡುವ ಬೋರವೆಲ್‌ಗಳ ಅಂತರ್ಜಲ ಕುಸಿತವಾದ ಪರಿಣಾಮ ಖಾಸಗಿ ಬೋರವೆಲ್‌ಗಳಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.
ಕಳೆದ ವರ್ಷ ಅಪಾರ ಪ್ರಮಾಣದ ಮಳೆ ಸುರಿದರೂ ಬೇಸಿಗೆಯಲ್ಲಿ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ.
ಈ ವರ್ಷವು ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಬೋರವೆಲ್‌ಗಳ ಅಂತರ್ಜಲ ಮಟ್ಟ ಕುಸಿತ ಕಂಡಿದೆ.
ಇದರಿಂದ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗದೆ ಗ್ರಾಮ ಪಂಚಾಯಿತಿಯವರು ಸ್ಥಳೀಯ ರೈತರ ಬೋರವೆಲ್ ಬಾಡಿಗೆ ಪಡೆದು ನೀರು ಪೂರೈಕೆ ಮಾಡುತ್ತಿದ್ದಾರೆ.
ಬಾಡಿಗೆ ಬೋರವೆಲ್: ತಾಲೂಕಿನ ಚವಡಳ್ಳಿ, ಸಾಲಗಾಂವಹೊಸಕೊಪ್ಪದಲ್ಲಿ ತಲಾ ಎರಡು ಬೋರವೆಲ್ ಬಾಡಿಗೆ ಪಡೆಯಲಾಗಿದೆ.
ಇನ್ನೂ ಹುಲಿಹೊಂಡ, ಕಾತೂರ, ಶಿಗ್ನಳ್ಳಿಹುಲಿಹೊಂಡ, ಇಂದೂರ, ಕೊಪ್ಪ,ಅರಿಶಿಣಗೇರಿ, ಮೈನಳ್ಳಿಗೌಳಿದಡ್ಡಿ, ಶಿವಾಜಿನಗರಗಳಲ್ಲಿ ತಲಾ ಒಂದೊಂದು ಬೋರವೆಲ್ ಗಳನ್ನು ಬಾಡಿಗೆ ತೆಗೆದುಕೊಂಡು ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ಮುಂಡಗೋಡ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಬೋರವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿ, ಕುಡಿಯುವ ನೀರು ಪೂರೈಕೆ ಸಮಸ್ಯೆಯಾಗಿತ್ತು. ತಕ್ಷಣ ಗ್ರಾಮ ಪಂಚಾಯಿತಿ ವತಿಯಿಂದ ಖಾಸಗಿ ಬೋರವೆಲ್ ಬಾಡಿಗೆ ಪಡೆದು ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಮತ್ತಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಗಳಿದ್ದು, ಆದ್ದರಿಂದ ಮುಂಜಾಗ್ರತವಾಗಿ ಖಾಸಗಿ ಬೋರವೆಲ್ ಗಳನ್ನ ಗುರುತಿಸಲಾಗಿದೆ.

> ರಾಜೇಶ್ವರಿ ಕದಂ, ಇಂಜಿನಿಯರ್, ಕುಡಿಯುವ ನೀರು ಸರಬರಾಜು ಇಲಾಖೆ