ಕೆ.ಆರ್‌.ದೇಸಾಯಿ  
ಉತ್ತರ ಕನ್ನಡ

ಕದ್ರಾ ಅಣೆಕಟ್ಟೆಯ ನೀರು ನಮಗೆ ಬೇಡ : ಸದಾಶಿವಗಡ ಗ್ರಾಮಸ್ಥರ ಕ್ಯಾತೆ

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ಕೈಗಾ ಅಣು ಸ್ಥಾವರದ ಅಣು ವಿಕಿರಣ ಸಮಸ್ಯೆ ಉಂಟಾಗುವ ಆತಂಕ
ಕಾರವಾರ:

ಕದ್ರಾ ಅಣೆಕಟ್ಟೆಯಿಂದ ಕಾಳಿ ನದಿಯ ಬಲ ದಂಡೆಯ ಗ್ರಾಮಗಳಿಗೆ ಪೂರೈಕೆ ಮಾಡುವ ನೀರನ್ನು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ. ಯೋಜನೆಯ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ವಕೀಲ ಕೆ.ಆರ್.ದೇಸಾಯಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಕದ್ರಾ ಅಣೆಕಟ್ಟೆಯ ನೀರನ್ನು ಕೈಗಾ ಅಣು ವಿದ್ಯುತ್ ಸ್ಥಾವರದ ಕೂಲಂಟ್‌ಗೆ ಬಳಸಲಾಗುತ್ತದೆ. ಮರಳಿ ಅದನ್ನು ಅಣೆಕಟ್ಟೆಗೇ ಬಿಡಲಾಗುತ್ತದೆ. ಆ ನೀರಿನಲ್ಲಿ ವಿಕಿರಣದ ಪ್ರಭಾವ ಇರುವ ಸಾಧ್ಯತೆ ಇದೆ. ಅಥವಾ ಮುಂದೆ ಅಪಾಯ ಸಂಭವಿಸುವ ಸಾಧ್ಯತೆಯೂ ಇದೆ. ಇದರಿಂದ ಯಾವುದೇ ಕಾರಣಕ್ಕೆ ಸದಾಶಿವಡಗ ಸೇರಿ ಕಾಳಿ ನದಿಯ ಯಾವುದೇ ಗ್ರಾಮಗಳ ಜನ ಆ ನೀರನ್ನು ಸೇವಿಸಲು ಸಿದ್ಧರಿಲ್ಲ ಎಂದರು.
ಜಲಜೀವನ ಮಿಷನ್ ಯೋಜನೆಯಡಿ ಕದ್ರಾ ಅಣೆಕಟ್ಟೆಯಿಂದ ಸದಾಶಿಗಡವರೆಗೆ ನೀರು ಪೂರೈಸಲು ಪೈಪ್‌ಲೈನ್ ಹಾಕಲಾಗಿದೆ. ನಲ್ಲಿಗಳನ್ನು ಅಳವಿಸಲಾಗಿದೆ. ಕದ್ರಾ ಅಣೆಕಟ್ಟೆಯ ನೀರು ಪೂರೂಸುವ ಮಾಹಿತಿ ಇದೆ. ಅದಕ್ಕೆ ನಮ್ಮ ವಿರೋಧವಿದ್ದು, ಯೋಜನೆ ಕೈಬಿಡಬೇಕು. ಸ್ಥಳೀಯವಾಗಿ ಬಾವಿ ತೋಡಿ ನೀರು ಕೊಡಬೇಕು. ಅಥವಾ ಕೈಗಾಕ್ಕಿಂತ ಮೇಲೆ ಕೊಡಸಳ್ಳಿ ಅಣೆಕಟ್ಟೆಯಿಂದ ನೀರನ್ನು ಪಂಪ್ ಮಾಡಿ ಕಾರವಾರಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.
ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಪರಿಸರ ಅನುಮತಿ ನೀಡುವ ಪೂರ್ವದಲ್ಲಿ ಪರಿಸರ ಇಲಾಖೆಯು ಹಲವು ಷರತ್ತುಗಳನ್ನು ವಿಧಿಸಿತ್ತು. ಆದರೆ, ಅದು ಪಾಲನೆಯಾಗುತ್ತಿಲ್ಲ. ಕೈಗಾ ಸುತ್ತಲಿನ ಗಾಳಿ, ನೀರು ಮುಂತಾದ ಪರಿಸರ ವಿಚಾರಗಳ ಬಗ್ಗೆ ಮಲ್ವಿಚಾರಣೆ ನಡೆಸಲು ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯೊAದರ ಪ್ರತಿನಿಽಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ ಅಽಕಾರಿಗಳಿರುವ ಸಮಿತಿಯನ್ನು ರಚಿಸಬೇಕು ಎಂದು ಷರತ್ತು ವಿಽಸಲಾಗಿದೆ. ಕೈಗಾ ಆಡಳಿತ ಅಂಥ ಯಾವುದೇ ಸಮಿತಿ ರಚಿಸಿದ ಬಗ್ಗೆ ಮಾಹಿತಿ ಇಲ್ಲ.
ನೀರಿನಲ್ಲಿ ವಿಕಿರಣದ ಅಂಶವಿಲ್ಲ ಎಂದು ಸಾಬೀತುಪಡಿಸಲು ಕೈಗಾ ಆಡಳಿತ ಯಾವುದೇ ಕ್ರಮ ವಹಿಸಿಲ್ಲ. ಇದರಿಂದ ನಾವು ಆ ನೀರು ಸ್ವೀಕರಿಸಲು ಸಾಧ್ಯವಿಲ್ಲ ಎಂದರು. ಸದಾಶಿವಗಡದ ಸನಾತನ ಸ್ವರಾಜ್ಯ ಸಂಘದ ಅಧ್ಯಕ್ಷ ವಿನಾಯಕ ಸಾವಂತ, ಅಶೋಕ ರಾಣೆ, ಗುರು ಸಾವಂತ, ವಾಮನ ನಾಗೇಕರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.