ಯಲ್ಲಾಪುರ ತಾಲೂಕಿನ ಚಿನ್ನೇಶ್ವರ ರಾಮಲಿಂಗೇಶ್ವರ ದೇವರ ಮತ್ತು ಪರಿವಾರ ದೇವರುಗಳ ಮುರು ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಶಿಖರ ಪ್ರತಿಷ್ಠಾಪನೆ ನೆರವೇರಿಸಿ ಸ್ವರ್ಣವಲ್ಲೀ ಶ್ರೀಗಳು Svarṇavalli shriಆಶೀರ್ವಚನ ನೀಡಿದರು. western culture
ಯಲ್ಲಾಪುರ: ನಮ್ಮ ಹೃದಯದಲ್ಲಿ ಭಗವಂತನನ್ನು ಸ್ಥಾಪಿಸಿಕೊಂಡು ಆಧ್ಯಾತ್ಮಿಕ ಶಕ್ತಿ ಜಾಗೃತಗೊಳಿಸಿದಾಗ ಮಾತ್ರ ನಾವು ಉತ್ಕೃಷ್ಟತೆಯನ್ನು ಪಡೆಯಬಹುದು ಎಂದು ಸ್ವರ್ಣವಲ್ಲೀ
ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಇಡಗುಂದಿಯ ಚಿನ್ನೇಶ್ವರ ರಾಮಲಿಂಗೇಶ್ವರ ದೇವರ ಮತ್ತು ಪರಿವಾರ ದೇವರುಗಳ ಮರು ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಶಿಖರ ಪ್ರತಿಷ್ಠಾಪನೆ ನೆರವೇರಿಸಿ ಆಶೀರ್ವಚನ ನೀಡಿದರು.
ಬಾಹ್ಯ ಶಕ್ತಿಯ ಆಸೆಯ ಭೋಗಕ್ಕೆ ಒಳಗಾಗಬಾರದು. ಪಾಶ್ಚಾತ್ಯ ಸಂಸ್ಕೃತಿಯ western culture ಪ್ರಭಾವಕ್ಕೆ ಮರುಳಾಗಬಾರದು ಎಂದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಭಗವಂತನಿಗೆ ಯಾರ ಬಳಿ ಯಾವ ಕೆಲಸ ಮಾಡಿಸಬೇಕೆನ್ನುವುದು ಗೊತ್ತಿದೆ. ಆ ಕೆಲಸವನ್ನು ಭಗವಂತ ಆತನಿಂದ ಮಾಡಿಸುತ್ತಾನೆ ಎಂದರು.
ಉಚ್ಛ ನ್ಯಾಯಾಲಯದ ನ್ಯಾಯವಾದಿ ಗಣಪತಿ ಎನ್. ಭಟ್ಟ ನಡಿಗೆಮನೆ, ಪ್ರಮುಖರಾದ ಜಿ.ಆರ್. ಭಾಗ್ವತ, ಡಾ.ಗಣಪತಿ ಭಟ್ಟ, ದೇವಸ್ಥಾನದ ಅಧ್ಯಕ್ಷ ದತ್ತಾತ್ರೇಯ ಹೆಗಡೆ ಕಣ್ಣಿಪಾಲ, ನಾರಾಯಣ ಹೆಗಡೆ, ಕೃಷ್ಣ ಭಟ್ಟ ಚಿಮ್ನಳ್ಳಿ, ಇತರರಿದ್ದರು.