ಕುಮಟಾದ ವನ್ನಳ್ಳಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಕಿಟ್ ವಿತರಿಸಲಾಯಿತು. ಕಲ್ಮೇಶ್ ಎಂ., ಯೋಗಾನಂದ ಗಾಂಧಿ, ವೀಣಾ ದಿನೇಶ, ಮಂಜುನಾಥ ಗೊಂಡ, ಲಕ್ಷ್ಮೀ ನಾಯ್ಕ ಇದ್ದರು.
ಕುಮಟಾ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ತಾಲೂಕಿನಲ್ಲಿ ಒಟ್ಟು 14 ಕುಟುಂಬಗಳಿಗೆ ವಾತ್ಸಲ್ಯ ಕಿಟ್ ವಿತರಿಸಲಾಯಿತು.
ವನ್ನಳ್ಳಿಯಲ್ಲಿ ಶಿವಮ್ಮ ಮಾಸ್ತಿ ನಾಯ್ಕ ಅವರಿಗೆ ವಾತ್ಸಲ್ಯ ಕಿಟ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜ್ಞಾನ ವಿಕಾಸ ಸಮನ್ವಯಾಧಿಕಾರಿ ವೀಣಾ ದಿನೇಶ್ ಮಾಹಿತಿ ನೀಡಿ, ವಾತ್ಸಲ್ಯ ಕಿಟ್‌ನಲ್ಲಿ ದಿನಬಳಕೆ ಬಟ್ಟೆ, ಚಾಪೆ, ದಿಂಬು, ಬೆಡ್ ಶಿಟ್, ಸೋಪು, ಬಾಚಣಿಕೆ, ಸಿರಿ ಧಾನ್ಯ ಆಹಾರ, ದಿನ ನಿತ್ಯ ಅಡುಗೆ ತಯಾರಿ ಪಾತ್ರೆಗಳನ್ನು ಒಳಗೊಂಡಿರುತ್ತದೆ. ತಾಲೂಕಿನಲ್ಲಿ ಇಲ್ಲಿಯವರೆಗೆ ಒಟ್ಟು 108 ಫಲಾನುಭವಿಗಳಿಗೆ ವಾಸ್ತಲ್ಯ ಕಿಟ್ ವಿತರಣೆ ಮಾಡಲಾಗಿದೆ. ರಾಜ್ಯಾದ್ಯಂತ ಏಕಕಾಲದಲ್ಲಿ ಈ ಮಹತ್ತರ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಫಲಾನುಭವಿಗಳು ಕೂಡಾ ವಾತ್ಸಲ್ಯ ಕಿಟ್‌ನ್ನು ಪ್ರಸಾದರೂಪದಲ್ಲಿ ಸ್ವೀಕಾರ ಮಾಡಿದ್ದಾರೆ ಎಂದರು.
ಯೋಜನಾಧಿಕಾರಿ ಕಲ್ಮೇಶ್ ಎಂ. ಸಣ್ಣಗೌಡರ, ಜಿಲ್ಲಾ ಜನಜಾಗ್ರತಿ ವೇದಿಕೆ ಸದಸ್ಯ ಯೋಗಾನಂದ ಗಾಂಧಿ ನಾಯ್ಕ, ಮೇಲ್ವಿಚಾರಕ ಮಂಜುನಾಥ ಗೊಂಡ, ಸೇವಾಪ್ರತಿನಿಧಿ ಲಕ್ಷ್ಮೀ ನಾಯ್ಕ, ಸ್ಥಳೀಯರಾದ ಶ್ಯಾಮಲಾ ರಾಮ ನಾಯ್ಕ, ಮೋಹನ ನಾಯ್ಕ, ಲಕ್ಷ್ಮೀ ಕೃಷ್ಣ ನಾಯ್ಕ, ಮಂಜಯ್ಯ ನಾಯ್ಕ ಉಪಸ್ಥಿತರಿದ್ದರು.