ರೈತರಿಗೆ ಪೆಟ್ರೋಲ್ ಹಾಗೂ ಡೀಸೆಲ್ diesel ಪೂರೈಕೆಯಲ್ಲಿ ತೊಂದರೆ ಆಗದಂತೆ ಪೆಟ್ರೋಲ್ ಪಂಪ್‌ಗಳಿಗೆ ಆದೇಶ ನೀಡಬೇಕು ಎಂದು ಯಲ್ಲಾಪುರದಲ್ಲಿ ತಾಲೂಕು ರೈತ ಸಂಘದಿಂದ ತಹಸೀಲ್ದಾರ್ ಚಂದ್ರಶೇಖರ ಹೊಸ್ಮನಿ ಅವರಿಗೆ ಮನವಿ ಸಲ್ಲಿಸಲಾಯಿತು 
ಉತ್ತರ ಕನ್ನಡ

diesel ರೈತರಿಗೆ ತೊಂದರೆಯಾಗದಂತೆ ಡೀಸೆಲ್ ವಿತರಿಸಿ

ಯಲ್ಲಾಪುರ: ಕೃಷಿ ಕಾರ್ಯಗಳಿಗೆ ಬಳಸಲು ರೈತರಿಗೆ ಪೆಟ್ರೋಲ್ ಹಾಗೂ ಡೀಸೆಲ್ diesel ಪೂರೈಕೆಯಲ್ಲಿ ತೊಂದರೆ ಆಗದಂತೆ ಪೆಟ್ರೋಲ್ ಪಂಪ್‌ಗಳಿಗೆ ಆದೇಶ ನೀಡಬೇಕು ಎಂದು ಆಗ್ರಹಿಸಿ ತಾಲೂಕು ರೈತ ಸಂಘದಿಂದ ತಹಸೀಲ್ದಾರ್ ಚಂದ್ರಶೇಖರ ಹೊಸ್ಮನಿ ಅವರಿಗೆ ಮನವಿ ಸಲ್ಲಿಸಲಾಯಿತು.
ರೈತರು ತಮ್ಮ ಕೃಷಿ ಭೂಮಿಯಲ್ಲಿ ಕಳೆ ನಿರ್ವಹಣೆ, ಅಡಕೆ ಗಿಡಗಳಿಗೆ ತಗುಲಿದ ಎಲೆಚುಕ್ಕೆ ರೋಗ ನಿವಾರಣೆಗೆ ಔಷಧ ಸಿಂಪಡಣೆ ಮುಂತಾದ ಕೃಷಿ ಚಟುವಟಿಕೆಗಳನ್ನು ಯಂತ್ರದ ಮೂಲಕ ನಡೆಸುತ್ತಾರೆ.
ಈ ಕಾರ್ಯಕ್ಕಾಗಿ ವಾರದಲ್ಲಿ 2-3 ಬಾರಿ 5 ಲೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್-ಡೀಸೆಲ್ ಅವಶ್ಯಕತೆ ಇದೆ. ಅಗತ್ಯವಿದ್ದಷ್ಟು ಸಿಗದೇ ಇದ್ದಲ್ಲಿ ಕೃಷಿ ಕಾರ್ಯಕ್ಕೆ ಹಿನ್ನಡೆಯಾಗುತ್ತದೆ. ರೈತರ ಹಿತದೃಷ್ಟಿಯಿಂದ ಅಗತ್ಯವಿರುವಷ್ಟು ಇಂಧನ ನೀಡಬೇಕು.
ಇದಕ್ಕೆ ಪೂರಕವಾಗಿ ರೈತರಿಂದ ಪಹಣಿ ಪತ್ರಿಕೆ ಅಥವಾ ಇತರ ದಾಖಲೆಗಳು ಬೇಕಿದ್ದರೆ ಪಡೆಯಲಿ. ರೈತರಿಗಾದ ಈ ಸಮಸ್ಯೆಯನ್ನು ಬಗೆಹರಿಸಲು ಪಂಪ್‌ಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ತಾಲೂಕು ರೈತ ಸಂಘದ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ, ಕಾರ್ಯದರ್ಶಿ ಕೆ.ಟಿ. ಹೆಗಡೆ, ಪ್ರಮುಖರಾದ ಗಣೇಶ ಹೆಗಡೆ ಸವಣಗೇರಿ, ವೆಂಕಟರಮಣ ಕಾರೆಮನೆ ಉಪಸ್ಥಿತರಿದ್ದರು.