ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.  
ಉತ್ತರ ಕನ್ನಡ

ವೇತನವಿಲ್ಲದೇ ಆಶಾಗಳಿಗೆ ನಿರಾಶೆ

ಕಾರವಾರ: ಬಾಕಿ ಗೌರವಧನ ಬಿಡುಗಡೆಗೆ ಆಗ್ರಹಿಸಿ ನಗರದಲ್ಲಿ ಆಶಾ ಕಾರ್ಯಕರ್ತೆಯರು ಮಂಗಳವಾರ ಪ್ರತಿಭಟನೆ ನಡೆಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಪಂ ಕಚೇರಿಯ ಎದುರು ಪ್ರತಿಭಟನಾ ಸಭೆ ನಡೆಸಿದರು.

ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಯುಕ್ತ ಆಶ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆದಿದ್ದು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜಿಪಂ ಉಪ ಕಾರ್ಯದರ್ಶಿ ಎಂ.ಎಸ್.ಅಲ್ಲಾಭಕ್ಷ ಅವರು ಮನವಿ ಸ್ವೀಕರಿಸಿದರು.

ಸಂಘದ ಗೌರವ ಸಲಹೆಗಾರ ಗಂಗಾಧರ ಬಡಿಗೇರ ಪ್ರತಿಭಟಾ ಸಭೆಯಲ್ಲಿ ಮಾತನಾಡಿ, ಕಳೆದ 9 ವರ್ಷದಿಂದ ಆಶಾ ಕಾರ್ಯಕರ್ತೆಯರಿಗೆ ಕೇವಲ 1500 ರೂ. ಹೆಚ್ಚಳವಾಗಿದೆ. ಇದರಿಂದಾಗಿ ಬೆಲೆ ಏರಿಕೆಯ ಹೊಡೆತಕ್ಕೆ ಸಿಕ್ಕು ಈ ಬಡ ತಾಯಂದಿರ ಕುಟುಂಬಗಳು ಬೀದಿ ಪಾಲಾಗುವಂತಾಗಿದೆ. ವಿವಿಧ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಗಣನೀಯವಾಗಿ ವೇತನ ಹೆಚ್ಚಿಸಲಾಗಿದೆ. ಆದರೆ, ರಾಜ್ಯದಲ್ಲಿ ದುಡಿದ ವೇತನವೂ ಕೂಡ ಸರಿಯಾಗಿ ದೊರೆಯುತ್ತಿಲ್ಲ. ಕಳೆದ ಒಂದು ವರ್ಷದಿಂದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಮತ್ತು ಗೌರವಧನ ನಿಗದಿತ ಅವಧಿಯಲ್ಲಿ ಸಿಗದೇ ಸಂಕಷ್ಟದಲ್ಲಿದ್ದಾರೆ. ಈಗ ಗೌರವಧನ ಬರದೇ 6 ತಿಂಗಳಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಅಧ್ಯಕ್ಷೆ ಪದ್ಮಾ ಚಲುವಾದಿ ಮಾತನಾಡಿ, ಮೊಬೈಲ್ ನೀಡದಿರುವುದು, ತಾಂತ್ರಿಕ ತೊಂದರೆ, ಸರ್ವರ್ ಸಮಸ್ಯೆಗಳ ನಡುವೆಯೂ ಆಶಾ ಕಾರ್ಯಕರ್ತೆಯರನ್ನು ಸಮಸ್ತ ಆ್ಯಪ್ ಮೂಲಕ ಕೆಲಸ ಮಾಡಲು ಅಽಕಾರಿಗಳು ಒತ್ತಾಯಿಸುತ್ತಿದ್ದಾರೆ. ನಾವು ತಾಂತ್ರಿಕತೆಯ ವಿರೋಽಗಳಲ್ಲ ಆದರೆ, ಡಿಜಿಟಲ್ ದಾಖಲಾತಿ ಪ್ರಕ್ರಿಯೆಯಿಂದಾಗಿ ಆಶಾಗಳು ಜನರ ಆರೋಗ್ಯ ಸೇವೆ ಕಡೆಗೆ ಗಮನ ಹರಿಸುವುದಕ್ಕಿಂತ, ಭೌತಿಕ ದಾಖಲೆ ಮತ್ತು ಮೊಬೈಲ್ ದಾಖಲೆಗಳಿಗೆ ಸಮಯ ವ್ಯರ್ಥ ಮಾಡುವಂತಾಗುತ್ತದೆ ಎಂದರು.

ಡಿಎಚ್‌ಒ ಡಾ. ಸಂಜಯ್ ದೊಡ್ಮನಿ ಈ ಸಂದರ್ಭದಲ್ಲಿದ್ದು ಮಾತನಾಡಿ, ಆ್ಯಪ್‌ನಲ್ಲಿ ಕೆಲಸ ಮಾಡಲು ಒತ್ತಾಯ ಮಾಡಬಾರದೆಂದು ಸಂಬಂಧಪಟ್ಟ ಅಽಕಾರಿಗಳಿಗೆ ಈ ಕೂಡಲೇ ನಿರ್ದೇಶನ ನೀಡುತ್ತೇನೆ. ಹಾಗೂ ಉಳಿದ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಸಂಘಟನೆಯ ಉಪಾಧ್ಯಕ್ಷೆ ಕವಿತಾ ಗಾವಡ, ಪದಾಽಕಾರಿಗಳಾದ ಶ್ವೇತಾ ಕಪಡಸ್ಕರ್, ಮಹಾಲಕ್ಷ್ಮೀ ನಾಯ್ಕ, ಶೋಭಾ ನಾಯ್ಕ್, ಕಸ್ತೂರಿ ಮುಂಡಗೋಡ, ನಿವೇದಿತಾ ಕೊಳಂಬಕರ್, ಹಾಲಮ್ಮ ನಾಯ್ಕ್, ಆಶಾ ನಾಗೆಕರ್ , ಪ್ರಭಾಮಣಿ ವರ್ಧಮಾನ್, ಅಶ್ವಿನಿ ಕಲಾವತಿ ಪಾಟೀಲ್, ವೈಶಾಲಿ, ಪ್ರೀತಿ, ಸಂಗೀತ ಇದ್ದರು.