ದಾಂಡೇಲಿಯ ಆಜಾದ್ ನಗರದ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಜರುಗಿದ ದಿಂಡಿ ಉತ್ಸವವು (Dindi Utsava) ಸೋಮವಾರ ಸಂಪನ್ನಗೊಂಡಿತು 
ಉತ್ತರ ಕನ್ನಡ

ದಾಂಡೇಲಿಯಲ್ಲಿ ದಿಂಡಿ ಉತ್ಸವ ಸಂಪನ್ನ (Dindi Utsava)

ದಾಂಡೇಲಿ: ಆಜಾದ್ ನಗರದ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ 22ನೇ ವಷರ್ದ ದಿಂಡಿ ಉತ್ಸವವು (Dindi Utsava) ಸೋಮವಾರ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಧಾರವಾಡದ ಮದಿಹಾಳ ಊರಿನ ವಿಠ್ಠಲರಾವ್ ಎಸ್. ಕಾಟೇನವರ ನೇತೃತ್ವದಲ್ಲಿ ಜರುಗಿದ ದಿಂಡಿ ಉತ್ಸವ ನಿಮಿತ್ತ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ದಿಂಡಿ ಸೋಹಳಾ ನಗರ ಪ್ರದಕ್ಷಿಣೆ ಮಾಡಿ ಶ್ರೀ ಸ್ವಾಮಿ ಸನ್ನಿಧಿಗೆ ಆಗಮಿಸಿದ ನಂತರ ಕಾಲಾ ಕೀರ್ತನೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.
ದಿಂಡಿ ಉತ್ಸವದಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು. ಮಂದಿರದ ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಭಕ್ತಾಭಿಮಾನಿಗಳು ಉತ್ಸವದ ಯಶಸ್ಸಿಗೆ ಶ್ರಮಿಸಿದರು.