ಭಟ್ಕಳದ ಹೆದ್ದಾರಿಯ ಮಧ್ಯದಲ್ಲಿ ನಿಮಿರ್ಸಿರುವ ಅಮ್ಮನವರ ಹೊರೆ ಇಡುವ ಸ್ಥಳ.
- ಹಿಂದೂ ಸಂಟನೆಗಳ ಸದಸ್ಯರ ಆಕ್ರೋಶ
- ಕಣ್ಣೊರೆಸುವ ತಂತ್ರಕ್ಕೆ ಮುಂದಾಯಿತೇ ಜಿಲ್ಲಾಡಳಿತ
ಭಟ್ಕಳ: ಮುರಿನಕಟ್ಟೆ ತೆರವು ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಶಮನ ಮಾಡಲು ಜಿಲ್ಲಾಡಳಿತ ನಿಮಿರ್ಸುತ್ತಿದ್ದ ಕಟ್ಟೆ ಕೇವಲ ಹಿಂದೂಗಳ ಕಣ್ಣೊರೆಸುವ ತಂತ್ರವಾಗಿದೆ ಎಂದು ಹಿಂದೂ ಸಂಟನೆಗಳ ಸದಸ್ಯರು ಆಕ್ರೋಶ ಹೊರಹಾಕುತ್ತಿದ್ದಾರೆ.
ಹೆದ್ದಾರಿಯ ಡಿವೈಡರ್ ಮಧ್ಯದಲ್ಲಿ 7*15 ಅಡಿ ಜಾಗ ಬಿಟ್ಟು ಅದಕ್ಕೆ ಉದ್ದದಲ್ಲಿ ಗ್ರೀಲ್ ಅಳವಡಿಸಿ ಮುರಿನಕಟ್ಟೆ ಎಂದು ಗುರುತು ಮಾಡಿದೆ. ಹೆದ್ದಾರಿ ಕಾಮಗಾರಿಗಾಗಿ ತೆರವು ಮಾಡಿರುವ ಅಮ್ಮನ ಹೊರೆ ಇಡುವ ಮುರಿನಕಟ್ಟೆಯನ್ನು ಕಳೆದ ಮೇ 24ರಂದು ತಾಲೂಕಾಡಳಿತ ಹಾಗೂ ಸ್ಥಳಿಯರ ಸಹಕಾರದಲ್ಲಿ 10*10 ಕಟ್ಟೆ ನಿರ್ಮಾಣ ಮಾಡಿದ್ದರು. ನಿರ್ಮಾಣ ಮಾಡಿದ ಕಟ್ಟೆಯನ್ನು ಮುಸ್ಲಿಂ ಸಮುದಾಯದ ಕೆಲ ಕಿಡಿಗೇಡಿ ಯುವಕರು ಅದೇ ದಿನ ಧ್ವಂಸ ಮಾಡಿದ್ದರು.
ಇದನ್ನು ವಿರೋಧಿಸಿ ಬಿಜೆಪಿ ಹಾಗೂ ಹಿಂದೂ ಸಂಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದವು. ಬಳಿಕ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗೋಷ್ಠಿ ನಡೆಸಿ, ಕಟ್ಟೆ ಧ್ವಂಸ ಮಾಡಿದ ಜಾಗದ ಬದಲಾಗಿ ಹೆದ್ದಾರಿ ಮಧ್ಯದಲ್ಲಿಯೆ ಡಿವೈಡರ್ ಜಾಗದಲ್ಲಿ 7*15 ಜಾಗದಲ್ಲಿ ಜಿಲ್ಲಾಡಳಿತ ಕಟ್ಟೆ ನಿಮಿರ್ಸಲಿದೆ ಎಂದು ಮಾಹಿತಿ ನೀಡಿದ್ದರು. ಈಗ ಕಟ್ಟೆ ನಿರ್ಮಾಣವಾಗಿದ್ದರೂ ಹಿಂದೂ ಧಾಮಿರ್ಕ ಭಾವನೆಗೆ ತಕ್ಕಂತೆ ನಿರ್ಮಾಣ ಮಾಡಿಲ್ಲ ಎಂದೂ ಹಿಂದೂ ಸಂಟನೆಯ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದು, ಇದು ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಭಟ್ಕಳ ಹಿಂದೂ ಜಾಗರಣಾ ಟಕ ಅಧ್ಯ ಜಯಂತ ಬೆಣಂದೂರು ಜಿಲ್ಲಾಡಳಿತ ಸಭೆಯಲ್ಲಿ ಹೇಳಿದಂತೆ ನೆಯಲ್ಲಿ ತೋರಿಸಿದಂತೆ ಕಟ್ಟೆ ನಿರ್ಮಾಣ ಮಾಡಿಲ್ಲ. ಎರಡು ಹೆದಾರಿಗಳ ಮಧ್ಯದಲ್ಲಿ ನೆಲಕ್ಕೆ ಕಾಂಕ್ರೀಟ್ ಹಾಕಿ ಉದ್ದದಲ್ಲಿ ಗ್ರೀಲ್ ಅಳವಡಿಸಿ ಕಟ್ಟೆ ಎಂದೂ ತೋರಿಸಲಾಗಿದೆ. ಆದರೆ, ಇಲ್ಲಿ ಯಾವುದೇ ಕಟ್ಟೆ ನಿರ್ಮಾಣ ಮಾಡಿಲ್ಲ. ಮುರಿನಕಟ್ಟೆ ಎನ್ನುವ ನಾಮಲಕವನ್ನೂ ಹಾಕಿಲ್ಲ. ದೇವಿಯ ಪ್ರತಿಕವಾಗಿ ಇರುವ ಭಗವಾಧ್ವಜವನ್ನೂ ಅಳವಡಿಸಿಲ್ಲ. ಅಂದ ಮೇಲೆ ಇದು ಹೇಗೆ ಹಿಂದೂಗಳ ಧಾರ್ಮಿಕ ಪೂಜನೀಯ ಮುರಿನಕಟ್ಟೆ ಆಗಲು ಸಾಧ್ಯ. ನಾವು ಅವರಿಗೆ ಮೂರುಅಡಿ ಎತ್ತರ ಕಟ್ಟೆ ಕಟ್ಟಿ ಅದರ ಸುತ್ತಲೂ ಗ್ರೀಲ್ ಅಳವಡಿಸಲೂ ಹೇಳಿದ್ದೇವೆ. ಆದರೆ, ಇವರು ನಿಮಿರ್ಸಿರುವ ಕಟ್ಟೆ ನಮ್ಮ ಮೂಲ ಕಟ್ಟೆಯ ಅಸ್ತಿತ್ವವನ್ನೆ ಪ್ರಶ್ನಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.