ಹಳೆಯ ಪಿಂಚಣಿ ಯೋಜನೆ pension ಜಾರಿಗೆ ತರಲು ಆಗ್ರಹಿಸಿ ಮಾಧ್ಯಮಿಕ ಶಾಲಾ ನೌಕರರು ಶಿರಸಿಯಲ್ಲಿ ಪ್ರತಿಭಟನೆ ನಡೆಸಿದರು.
ಶಿರಸಿ: ಏಪ್ರಿಲ್ 2006 ರ ನಂತರ ನೇಮಕವಾದ ನೌಕರರಿಗೆ ಹಳೆಯ ಪಿಂಚಣಿ ಯೋಜನೆ pension ಜಾರಿಗೆ ತರಲು ಆಗ್ರಹಿಸಿ ಶಿರಸಿ ಶೈಣಿಕ ಜಿಲ್ಲಾ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರು ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ನಿವೃತ್ತ ನೌಕರರಿಗೆ ಪಿಂಚಣಿಯೇ ಜೀವನಾಧಾರವಾಗಿದೆ. ತಮ್ಮ ಸಂಧ್ಯಾಕಾಲದ ಜೀವನಕ್ಕೆ ಅತಿ ಅವಶ್ಯವಾಗಿರುವ ಹಿನ್ನೆಲೆಯಲ್ಲಿ ಬೇಡಿಕೆಗಳನ್ನು ಪರಿಶೀಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಜಿಲ್ಲಾ ಟಕದ ಅಧ್ಯ ನಾರಾಯಣ ದಾಯಿಮನೆ, ಪ್ರಧಾನ ಕಾರ್ಯದಶಿರ್ ದಿನೇಶ ನೇತ್ರಕರ್, ಕೇಂದ್ರ ಸಮಿತಿ ಸದಸ್ಯ ಎಂ. ರಾಜಶೇಖರ, ತಾಲೂಕು ಟಕದ ಅಧ್ಯೆ ಸವಿತಾ ಭಟ್, ಪ್ರಧಾನ ಕಾರ್ಯದಶಿರ್ ಬಸಪ್ಪ ತಳವಾರ, ಸಿದ್ದಾಪುರದ ಅಧ್ಯ ಗುರು ಶಾಂತಪ್ಪ ಯಲ್ಲಾಪುರ, ವಿನಾಯಕ ಹೆಗಡೆ, ಶರಣಬಸವ ಬೇವಿನಕಟ್ಟಿ, ಗಣೇಶ ಭಟ್ ಇತರರಿದ್ದರು.