ಕಾರವಾರ: ಸೈಬರ್ ಕ್ರೈಂ ವಂಚನೆ ಜಾಲದಲ್ಲಿ ಬ್ಯಾಂಕ್ ಅಧಿಕಾರಿಗಳೇ ಭಾಗಿಯಾಗಿದ್ದಾರೆ ಎಂಬ ಆತಂಕಕಾರಿ ಅಂಶ ಬೆಳಗಿಗೆ ಬಂದಿದೆ. ಆನ್‌ಲೈನ್ ವಂಚನೆ ಪ್ರಕರಣವೊಂದರಲ್ಲಿ ಕಾರವಾರದ ಸೈಬರ್ ಕ್ರೈಂ ಪೊಲೀಸರು ಇಬ್ಬರು ಆರ್‌ಬಿಎಲ್ ಅಧಿಕಾರಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹೈದ್ರಾಬಾದ್‌ನಲ್ಲಿ ವಾಸವಿರುವ ತೆಲಂಗಾಣ ವಾರಂಗಲ್ ಮೆಹಬೂಬಾಬಾದ್ ಮೂಲದ ಪಿಣ್ಣಿ ಶ್ರವಣಕುಮಾರ್ ಮಲ್ಲಯ್ಯ,ಹೈದ್ರಾಬಾದ್ ಮಲಕಾಜಗಿರಿ ರಂಗಾರೆಡ್ಡಿ ನಿವಾಸಿ ವಿನಯಕುಮಾರ್ ಸತ್ಯನಾರಾಯಣ ಜೈನ್ ಎಂಬುವವರನ್ನು ಬಂಽಸಿ ಕಾರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇಬ್ಬರು ಆರ್‌ಬಿಎಲ್ ಬ್ಯಾಂಕ್‌ನಲ್ಲಿ ಪಬ್ಲಿಕ್ ರಿಲೇಶನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಅವರು ಬೇರೆಯವರ ಹೆಸರಿನಲ್ಲಿ ತಮ್ಮ ಬ್ಯಾಂಕ್‌ನಲ್ಲಿ ಖಾತೆ ತೆರೆದು ಸಭಯರ್ ವಂಚನೆಯ ಹಣವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು ಮೋಸ ಮಾಡುತ್ತಿದ್ದರು ಎಂದು ಎಸ್‌ಪಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಹೊನ್ನಾವರದ ಉದ್ಯಮಿ ಓಸಿಮ್ ಇಬ್ರಾಹಿಂ ಶೇಖ್ ಎಂಬುವವರಿಗೆ ಆನ್‌ಲೈನ್ ಟ್ರೇಡಿಂಗ್ ಮಾಡುವ ಆಸೆ ಹುಟ್ಟಿಸಿ, ಎಂ.ಮಾರ್ಕೆಟ್ ಎಕ್ಸಸ್ ಎಂಬ ಆ್ಯಪ್ ಡೌನ್‌ಲೋಡ್ ಮಾಡಿಸಿದ್ದ ಅವರಿಂದ 46.50 ಲಕ್ಷ ರೂ. ಹೂಡಿಕೆ ಮಾಡಿಸಿದ್ದರು. ಆ್ಯಪ್‌ನಲ್ಲಿ 78 ಲಕ್ಷ ಹಣ ಗಳಿಸಿದಂತೆ ತೋರಿಸಿ ವಂಚಿಸಿದ್ದರು. ಅವರು ಕಾರವಾರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರವಾರ ಸೈಬರ್ ಕ್ರೈಂ ಠಾಣೆ ಡಿವೈಎಸ್‌ಪಿ ಬಿ.ಅಶ್ವಿನಿ ನೇತೃತ್ವದ ತಂಡ ತನಿಖೆ ಕೈಗೊಂಡು ನವೆಂಬರ್ 6 ರಂದು ಬೆಂಗಳೂರಿನ ಕೆಂಪೆಗೌಡ ವಿಮಾನ ನಿಲ್ದಾಣದಲ್ಲಿ ಬಿಹಾರ ಈಸ್ಟ್ ಚಂಪಾರಣ ಮೂಲದ ಷಾ ಅಲಂ ಶಮೀಮ್ ಅಕ್ತರ್ ಎಂಬ ಆರೋಪಿಯನ್ನು ಬಂಽಸಿತ್ತು. ಆತ ನೀಡಿದ ಮಾಹಿತಿಯ ಮೇರೆಗೆ ಬಿಹಾರ ಮೂಲದ ಇನ್ನೊಬ್ಬ ಆರೋಪಿ ಶಮೀಮ್ ಅಕ್ತರ್ ಅಬ್ದುಲ್ ಜಬ್ಬಾರ ಎಂಬ ಇನ್ನೊಬ್ಬನನ್ನೂ ಭಾನುವಾರ ಬೆಂಗಳೂರಿನಲ್ಲಿ ಬಂಽಸಲಾಗಿದೆ. ಒಟ್ಟಾರೆ ಪ್ರಕರಣಕ್ಕೆ ಸಂಬಂಸಿದಂತೆ ನಾಲ್ವರನ್ನು ಬಂಽಸಲಾಗಿದೆ. ಇವರು ಆರೋಪಿ ಹಣ ನೀಡುವಂತೆ ಪೀಡಿಸಿ, ದೂರು ನೀಡಲು ಮುಂದಾದಾಗ ಹನಿ ಟ್ರಾಪ್ ಕೂಡ ನಡೆಸಿದ್ದರು ಎಂಬ ಅಂಶವೂ ತನಿಖೆಯಲ್ಲಿ ಹೊರ ಬಂದಿದೆ.