ಶಿರಸಿ ತಾಲೂಕಿನ ಕಾಗೇರಿ ಗ್ರಾಮದಲ್ಲಿ ಕಾಡುಕೋಣ wild buffalo ದಾಳಿಯಿಂದ ಬೆಳೆ ಹಾನಿಯಾಗಿರುವುದು. 
ಉತ್ತರ ಕನ್ನಡ

wild buffalo ಕಾಡುಕೋಣ ದಾಳಿಯಿಂದ ಬೆಳೆ ಹಾನಿ

ಶಿರಸಿ: ತಾಲೂಕಿನ ಕಾಗೇರಿ ಹಾಗೂ ನೇಗಾರು ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಕಾಡುಕೋಣಗಳ wild buffalo ಹಾವಳಿ ತೀವ್ರಗೊಂಡಿದೆ.
ಸುಮಾರು ಎಂಟು ಎಕರೆಗೂ ಹೆಚ್ಚು ಕಬ್ಬು, ಹಸಿಮೇವು, ದ್ವಿದಳ ಧಾನ್ಯಗಳ ಬೇಸಾಯವನ್ನು ಹಾಳೂ ಮಾಡಿವೆ. 3 ಲಕ್ಷ ರೂಪಾಯಿಗೂ ಅಧಿಕ ಭವಿಷ್ಯದ ಬೆಳೆ ಹಾನಿಯಾಗಿದೆ.
15ಕ್ಕೂ ಹೆಚ್ಚು ಕಾಡುಕೋಣಗಳ ಹಿಂಡು ರೈತರ ಹೊಲಗಳಿಗೆ ನುಗ್ಗಿ ಬೆಳೆಯಬೇಕಿದ್ದ ಬೆಳೆ ಹಾನಿ ಉಂಟು ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮುಕ್ಕಾಲು ಎಕರೆ ಕಬ್ಬಿನಗದ್ದೆ, ಇನ್ನುಳಿದಂತೆ ಹಸಿಮೆವು ಹಾಗೂ ಧಾನ್ಯದ ಬೆಳೆಗಳು ಸಂಪೂರ್ಣ ನಾಶವಾಗಿವೆ.
ಸನ್ನೆಂಪು, ಉದ್ದು, ಬವಡೆ ಸೇರಿದಂತೆ ದ್ವಿದಳ ಧಾನ್ಯ ಬೆಳೆಗಳಿಗೆ ಹಾನಿಯಾಗಿದೆ. ತಿಂಗಳ ಹಿಂದೆ ಗದ್ದೆಯ ಭೂಮಿ ಹದಗೊಳಿಸಿ ಬಿತ್ತನೆ ಮಾಡಿದ್ದ ಬೆಳೆ ಕೈಗೆ ಬರುವ ಮೊದಲೇ ಕಾಡುಮೃಗಗಳ ಪಾಲಿಗೆ ತುತ್ತಾಗಿವೆ.
ನೇಗಾರಿನ ಮಹೇಶ ಗಜಾನನ ಹೆಗಡೆ, ವಿಶ್ವನಾಥ ಮಹಾಬಲೇಶ್ವರ ಹಾಗೂ ಕೃಷ್ಣ ನಾಗ ಪೂಜಾರಿ, ಕಾಗೇರಿಯ ಪರಮೇಶ್ವರ ಅನಂತ ಹೆಗಡೆ, ನರಸಿಂಹ ವೆಂಕಟರಮಣ ಹೆಗಡೆ ಹಾಗೂ ಶ್ರೀಪಾದ ರಾಮಚಂದ್ರ ಹೆಗಡೆ ಅವರ ಕೃಷಿ ಭೂಮಿಯಲ್ಲೂ ಹಾನಿ ಸಂಭವಿಸಿದೆ.
ಕಾಡುಕೋಣಗಳು ರಾತ್ರಿ ವೇಳೆ ಗುಂಪುಗಳಾಗಿ ಹೊಲಗಳಿಗೆ ನುಗ್ಗುತ್ತಿವೆ. ಕಾಗೇರಿ, ನೇಗಾರಿನಲ್ಲಿ ಮಾಡಿದ ಕಾಡುಕೋಣಗಳ ಹಾವಳಿ ಈಗ ಬರೂರು, ಬೆಟ್ಟಕೊಪ್ಪ, ಕುಳವೆ, ಕಾನಮೂಲೆ, ಬೆಳಖಂಡ, ಸೊಪ್ಪಿನಮನೆ, ಕಾನಗೋಡ ಹಾಗೂ ಯಡಹಳ್ಳಿ ಭಾಗಗಳ ರೈತರಿಗೂ ಆತಂಕ ಉಂಟು ಮಾಡುವಂತೆ ಆಗಿದೆ. ಕಾಡುಕೋಣಗಳ ಹಾವಳಿಯಿಂದ ತತ್ತರಿಸಿರುವ ರೈತರು ಅರಣ್ಯ ಇಲಾಖೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.