ಕಾರವಾರದಲ್ಲಿ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. 
ಉತ್ತರ ಕನ್ನಡ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಕಾಂಗ್ರೆಸ್ ವಿರೋಧ

ಕಾರವಾರ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ.ಶಂಭು ಶೆಟ್ಟಿ ಆಕ್ಷೇಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕಲ್ಲಿ ಮತದಾರರ ಪಟ್ಟಿ ಸ್ಪೆಷಲ್ ಇಂಟೆನ್ಸಿವ್ ರಿವಿಜನ್ (ಎಸ್ ಐಆರ್)ಘೋಷಣೆಯಾಗಿಲ್ಲ. ಚುನಾವಣಾ ಆಯೋಗದಿಂದ ಅಧಿಕೃತ ಆದೇಶವೇ ಇಲ್ಲ. ಆದರೂ ಕಾನೂನು ಬಾಹಿರವಾಗಿ ಈ ಪ್ರಕ್ರಿಯೆ ಮಾಡಲಾಗುತ್ತಿದೆ. ಆದರೂ 2002 ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಜಿಲ್ಲಾ ಚುನಾವಣಾಧಿಕಾರಿ ಘೋಷಿಸಿದ್ದಾರೆ. ಸಹಾಯಕ ಚುವಣಾಧಿಕಾರಿ ಈ ಸಂಬಂಧ ಪತ್ರಿಕಾ ಹೇಳಿಕೆ ಹೊರಡಿಸಿದ್ದಾರೆ.
ಆ ಸಂಬಂಧ ಜಿಲ್ಲಾ‌ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಅವರು ಕರೆದ ಸಭೆಯಲ್ಲಿ ಆಕ್ಷೇಪಿಸಿದ್ದೇವೆ. ಆದರೂ ಅದನ್ನು ಗಣನೆಗೆ ತೆಗೆದುಕೊಳ್ಳದೇ ಅಧಿಸೂಚನೆ ಹೊರಡಿಸಲಾಗಿದೆ ಎಂದರು.
2002 ರ ಮತದಾರರ ಪಟ್ಟಿಯನ್ನು 2024 ರಪಟ್ಟಿಯ ಜತೆ ಹೋಲಿಸಲಾಗುತ್ತದೆ. ಮತದಾರನ ದಾಖಲೆ ಇಲ್ಲದಿದ್ದರೆ ಆತ ಅಥವಾ ಆಕೆ ತಮ್ಮ ಪಾಲಕರ ಜನ್ಮ ದಾಖಲೆ ಒದಗಿಸಬೇಕಿದೆ.
ಈ ಪ್ರಕ್ರಿಯೆಯಲ್ಲಿ ಪಕ್ಷದ ಪ್ರತಿನಿಧಿಗಳಾದ ಬಿಎಲ್ಎ ಗಳನ್ನಾಗಲಿ, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನಾಗಲಿ ಗಣನೆಗೆ ತೆಗೆದುಕೊಂಡಿಲ್ಲ.
ಈ ಪ್ರಕ್ರಿಯೆ ವೋಟ್ ಚೋರಿಗೆ ರಹದಾರಿಯಾಗುತ್ತದೆ. ಇದು ಮುಂದೆ ದೊಡ್ಡ ಅನಾಹುತಕ್ಕೆ ರಹದಾರಿಯಾಗಿದೆ ಎಂಬ ಆತಂಕವಿದೆ ಎಂದರು.
ತಾಲೂಕು ಗ್ಯಾರಂಟಿ ಸಮಿತಿ‌ ಅಧ್ಯಕ್ಷ ರಾಜೇಂದ್ರ ರಾಣೆ, ಬ್ಲಾಕ್ ಸಮಿತಿ ಅಧ್ಯಕ್ಷ ಅರವಿಂದ ಕಲ್ಗುಟಕರ್,‌ ಕಾಂಗ್ರೆಸ್ ಪ್ರಮುಖರಾದ ಜಿ.ಪಿ.ನಾಯ್ಕ, ಮಾರುತಿ ನಾಯ್ಕ, ಚಂದ್ರಕಾಂತ ನಾಯ್ಕ, ಗಣಪತಿ ಕುಡ್ತಲಕರ್,, ಮಚ್ಚೇಂದ್ರ ಮಹಾಲೆ ಸೂರಜ್ ಕೂರ್ಮಕರ್ ಸುದ್ದಿಗೋಷ್ಠಿಯಲ್ಲಿದ್ದರು.