ಭಟ್ಕಳದ ಅಳಿವೆಕೋಡಿ ದುರಂತದಲ್ಲಿ ಮತಪಟ್ಟವರ ಮನೆಗಳಿಗೆ ಮಹಾಕಾಳಿ ಸಂಸ್ಥಾನ ಸದ್ಧರ್ಮ ಪೀಠ ನಿಪ್ಪಾಣಿ ಪೀಠಾಧಿಪತಿಗಳು ಹಾಗೂ ಈಡಿಗ ನಾಮಧಾರಿ ಸಮಾಜದ ಗುರುಗಳೂ ಆಗಿರುವ ಶ್ರೀ ಅರುಣಾನಂದ ಸ್ವಾಮೀಜಿ ಭೇಟಿ ನೀಡಿ ಸಾಂತ್ವಾನ ಹೇಳಿದರು.
ಭಟ್ಕಳ: ಇತ್ತೀಚೆಗೆ ತಾಲೂಕಿನ ಅಳಿವೆಕೋಡಿ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರುಗಳಿಗೆ ಶ್ರೀ ಅರುಣಾನಂದ ಸ್ವಾಮೀಜಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಮಹಾಕಾಳಿ ಸಂಸ್ಥಾನ ಸದ್ಧರ್ಮ ಪೀಠ ನಿಪ್ಪಾಣಿ ಪೀಠಾಧಿಪತಿಗಳೂ ಹಾಗೂ ಈಡಿಗ ನಾಮಧಾರಿ ಸಮಾಜದ ಗುರುಗಳೂ ಆಗಿರುವ ಶ್ರೀ ಅರುಣಾನಂದ ಸ್ವಾಮೀಜಿ ಅವರು ಮೃತರ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರ ನೋವಿನಲ್ಲಿ ಭಾಗಿಯಾದರು. ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಟನೆಯ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಈ ದುರ್ಟನೆಯ ವಿಚಾರವನ್ನು ಬೆಂಗಳೂರಿನಲ್ಲಿ ನಡೆದ ಈಡಿಗ ಸಮಾಜದ ಎಲ್ಲಾ ಪಂಗಡಗಳ ಸಭೆಯಲ್ಲಿಯೂ ಪ್ರಸ್ತಾಪಿಸಿದ್ದಾಗಿ ಅವರು ತಿಳಿಸಿದರು. ಮೃತರ ಕುಟುಂಬಗಳ ಸಂಕಷ್ಟದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಅವರಿಗೆ ಸರ್ಕಾರದಿಂದ ಹೆಚ್ಚಿನ ಪರಿಹಾರ ದೊರಕುವಂತೆ ಪ್ರಯತ್ನಿಸುವ ಭರವಸೆ ನೀಡಿದರು.
ಅಲ್ಲದೇ ಮಠದ ವತಿಯಿಂದಲೂ ಅಗತ್ಯ ಸಹಾಯ ಸಹಕಾರ ನೀಡಲಾಗುವುದು ಎಂದು ಸ್ವಾಮೀಜಿ ಭರವಸೆ ನೀಡಿದರು.
ಮೀನುಗಾರಿಕೆ ಇಲಾಖೆಯಿಂದ 10 ಲಕ್ಷ ರೂ. ನೆರವು
ಚಿಪ್ಪಿಕಲ್ಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ನೆರವಿಗೆ ಮೀನುಗಾರಿಕೆ ಇಲಾಖೆ ವತಿಯಿಂದ 10 ಲಕ್ಷ ರೂ. ಪರಿಹಾರ ಮಂಜೂರು ಮಾಡಿಸಿರುವುದಾಗಿ ಸಚಿವ ಮಂಕಾಳ ವೆದ್ಯ ತಿಳಿಸಿದ್ದಾರೆ.
ಮೃತರ ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಸಚಿವರು, ಬದುಕಿನ ಸಂಕಷ್ಟದ ನಡುವೆ ಸರ್ಕಾರ ಮತ್ತು ಸಮಾಜ ಸಂತ್ರಸ್ಥ ಕುಟುಂಬಗಳ ಜತೆ ನಿಲ್ಲಬೇಕಾಗಿದ್ದು ಇದಕ್ಕೆ ತಾವು ಬದ್ಧರಿದ್ದೇವೆ. ಈಗಾಗಲೇ ಸರ್ಕಾರದಿಂದ ತಲಾ 5 ಲ ಪರಿಹಾರ ಮಂಜೂರಾಗಿದ್ದು, ಅದಕ್ಕೆ ಹೆಚ್ಚುವರಿಯಾಗಿ ತಮ್ಮ ಇಲಾಖೆಯಿಂದ 10 ಲಕ್ಷ ನೆರವು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಅಲ್ಲದೆ, ಪರಿಹಾರದ ಚೆಕ್ಗಳು ಸಿದ್ಧವಾಗಿದ್ದು ಈ ಕೂಡಲೆ ವಿತರಿಸಲಾಗುವುದು ಎಂದರು. ಮೃತರ ಮಕ್ಕಳ ಶಿಣ, ಕುಟುಂಬದ ಭವಿಷ್ಯದ ಕುರಿತು ವಿಶೇಷ ಗಮನ ಹರಿಸಲಾಗುವುದು. ಅನಾಥ ಮಕ್ಕಳಿಗೆ ಅಗತ್ಯವಿರುವ ಎಲ್ಲ ಸಹಕಾರ ಒದಗಿಸಲಾಗುವುದು ಎಂದರು.
ಈ ದುರಂತದಿಂದ ಪಡುಶಿರಾಲಿ ಗ್ರಾಮದಲ್ಲಿ ಇನ್ನೂ ದುಃಖದ ವಾತಾವರಣ ಮುಂದುವರಿದಿದೆ. ಗ್ರಾಮಸ್ಥರು, ನಾಮಧಾರಿ ಸಮಾಜಬಾಂಧವರು ಸಹ ಮೃತರ ಕುಟುಂಬಗಳ ನೆರವಿಗೆ ಮುಂದಾಗುತ್ತಿದ್ದು, ಮಾನವೀಯತೆ ಮೆರೆಯುತ್ತಿದ್ದಾರೆ.