ಯಲ್ಲಾಪುರ ತಾಲೂಕಿನ ಶೀಗೆಪಾಲ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಧ್ವಂಸ ಮಾಡಿದ ಅಡಕೆ ತೋಟಕ್ಕೆ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಭೇಟಿ ನೀಡಿದರು. ಕೆ.ಟಿ. ಹೆಗಡೆ, ಎಂ.ಜಿ. ಭಟ್ಟ ಶೀಗೆಪಾಲ, ನರಸಿಂಹ ಹಂಗಾರಿ, ನಾರಾಯಣ ಭಟ್ಟ ಕಲ್ಲಬ್ಬಿ, ನಾರಾಯಣ ಭಟ್ಟ ಶೀಗೆಪಾಲ, ರಾಮಚಂದ್ರ ಭಟ್ಟ ಶೀಗೆಪಾಲ ಇದ್ದರು. 
ಉತ್ತರ ಕನ್ನಡ

Condemnation ಅರಣ್ಯ ಇಲಾಖೆ ಅಧಿಕಾರಿಗಳ ವರ್ತನೆಗೆ ಖಂಡನೆ

ಪ್ರಮುಖ ಮುಖ್ಯಾಂಶಗಳು

  • ಶೀಗೆಪಾಲ ಗ್ರಾಮಕ್ಕೆ ಬಿಜೆಪಿ ರಾಜ್ಯ ವಕ್ತಾರ ಕೋಣೆಮನೆ ಭೇಟಿ
ಯಲ್ಲಾಪುರ: ತಾಲೂಕಿನ ಆನಗೋಡ ಗ್ರಾಪಂ ವ್ಯಾಪ್ತಿಯ ಶೀಗೆಪಾಲ ಗ್ರಾಮದಲ್ಲಿ ರಾಮಚಂದ್ರ ಭಟ್ಟ ಅವರಿಗೆ ಸೇರಿದ ಸುಮಾರು ಅರ್ಧ ಎಕರೆ ಅಡಕೆ ತೋಟದಲ್ಲಿನ ಗಿಡಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಧ್ವಂಸ ಮಾಡಿದ ಸ್ಥಳಕ್ಕೆ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಭೇಟಿ ನೀಡಿದರು.
ಅತಿಕ್ರಮಣ ಹಕ್ಕು ಮಂಜೂರಿಗಾಗಿ ಈ ಹಿಂದೆಯೆ ಅರ್ಜಿ ಸಲ್ಲಿಸಿ, ಜಿಪಿಎಸ್ ಆದ ಮ್ಯಾಪ್ ಮತ್ತು ಸರ್ಕಾರದ ಆದೇಶ ಪತ್ರ ಎಲ್ಲವೂ ಇದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ದುಂಡಾವರ್ತನೆ ಮೆರೆದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಅನ್ಯಾಯಕ್ಕೊಳಗಾದ ರೈತರಿಗೆ ಧೈರ್ಯ ತುಂಬಿದರು.
ಪ್ರಕರಣದ ಕುರಿತು ಇಲಾಖೆಯ ಮೇಲಧಿಕಾರಿಗಳೊಂದಿಗೆ ಮಾತನಾಡಿ, ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ದೊರಕಿಸಲು ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಅರಣ್ಯ ಇಲಾಖೆ ನೌಕರರು ತಾಲೂಕಿನಲ್ಲಿ ಬಡ ರೈತರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ವಿರುದ್ಧ ಮುಂದಿನ ಹೋರಾಟ ರೂಪಿಸುವುದಾಗಿ ತಿಳಿಸಿದರು. ಸ್ಥಳೀಯ ಪ್ರಮುಖರಾದ ಕೆ.ಟಿ. ಹೆಗಡೆ, ಎಂ.ಜಿ. ಭಟ್ಟ ಶೀಗೆಪಾಲ, ನರಸಿಂಹ ಹಂಗಾರಿ, ನಾರಾಯಣ ಭಟ್ಟ ಕಲ್ಲಬ್ಬಿ, ನಾರಾಯಣ ಭಟ್ಟ ಶೀಗೆಪಾಲ, ರಾಮಚಂದ್ರ ಭಟ್ಟ ಶೀಗೆಪಾಲ ಇತರರಿದ್ದರು.