ಆಯ್ಕೆಯಾದ ಜಿಲ್ಲೆಯ ನ್ಯಾಯಾಧೀಶರು
ರಾಜ್ಯಕ್ಕೆ ಎರಡನೇ ಸ್ಥಾನ:
ಶಿರಸಿ ನಗರದಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಓದಿದ ಯುವಕ ಸಿವಿಲ್ ನ್ಯಾಯಾಽÃಶರ ನೇಮಕಾತಿ ಆಯ್ಕೆ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.
ರಾಜ್ಯ ಹೈಕೋರ್ಟ್ ನಡೆಸಿದ್ದ ನೇಮಕಾತಿ ಪರೀಕ್ಷೆಯ ಫಲಿತಾಂಶ ಫೆ.17 ರಂದು ಪ್ರಕಟವಾಗಿದೆ. ಶಿರಸಿ ಹೆಗಡೆಕಟ್ಟಾ ಮೂಲದ ಸುಮಂತ ಮಂಜುನಾಥ ನಾಯ್ಕ ಎರಡನೇ ಸ್ಥಾನದಲ್ಲಿ ಆಯ್ಕೆಯಾಗಿದ್ದಾರೆ. 25 ರ ಅತಿ ಸಣ್ಣ ವಯಸ್ಸಿನಲ್ಲಿ ಮೊದಲ ಪ್ರಯತ್ನದಲ್ಲೇ ಸಿವಿಲ್ ನ್ಯಾಯಾಧೀಶ ಪರೀಕ್ಷೆ ಉತ್ತೀರ್ಣನಾಗಿರುವುದು ಇನ್ನೊಂದು ವಿಶೇಷ.
ಅವರ ತಂದೆ ಮಂಜುನಾಥ ನಾಯ್ಕ ಅವರು ಕಾರವಾರ ಎಸ್‌ಪಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಈಗ ಪದೋನ್ನತಿ ಹೊಂದಿ ಬೆಂಗಳೂರು ಲೋಕಾಯುಕ್ತದ ಸರ್ಕಾರಿ ಅಭಿಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಯಿ ಸುಜಾತಾ ಕೂಡ ವಕೀಲೆಯಾಗಿದ್ದಾರೆ.
ಸುಮಂತ್ ಶಿರಸಿಯಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದರು. ಎಂಇಎಸ್ ಕಾಲೇಜ್‌ನಲ್ಲಿ ಪಿಯು ಓದಿದ ನಂತರ ಹುಬ್ಬಳ್ಳಿಯ ಕರ್ನಾಟಕ ಲಾ ಯನಿವರ್ಸಿಟಿಯಲ್ಲಿ ಐದು ವರ್ಷದ ಕಾನೂನು ಪದವಿ ಪಡೆದಿದ್ದ. ಈಗ ಎರಡು ವರ್ಷಗಳಿಂದ ಹೈಕೋರ್ಟ್ನಲ್ಲಿ ವಕೀಲನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾಕಷ್ಟು ಚುರುಕಾಗಿದ್ದ ಸುಮಂತ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 10 ನೇ ಸ್ಥಾನ ಪಡೆದಿದ್ದರು. ಪಿಯುಸಿಯಲ್ಲಿ 98 ಅಂಕ ಪಡೆದಿದ್ದರು. ನಂತರ ಲಾ ಕಾಲೇಜ್‌ನಲ್ಲೂ ಉತ್ತಮ ಅಂಕ ಗಳಿಸಿದ್ದರು. ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸೈ ಎನಿಸಿಕೊಂಡಿರುವ ಸುಮಂತ್, ಚೆಸ್ ಆಟದಲ್ಲಿ ರಾಜ್ಯ ಮಟ್ಟದ ಗಮನ ಸೆಳೆದ ಸಾಧಕರಾಗಿದ್ದಾರೆ.
ದಾಂಡೇಲಿಯ ಬಡ ಕುಟುಂಬದಲ್ಲಿ ಹುಟ್ಟಿ ಕಷ್ಟದಲ್ಲೇ ಬೆಳೆದ ಪದ್ಮಾವತಿ ಮಾದಿಗ ಅವರು ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ದಾಂಡೇಲಿಯ ಬಂಬೂಗೇಟ್ ಬಳಿ ಸಣ್ಣ ಮನೆಯಲ್ಲಿ ವಾಸವಿರುವ ಕುಟುಂಬದ ಪದ್ಮಾವತಿ ಅವರು ಈಗ ದಾಂಡೇಲಿಯಲ್ಲಿ ವಕೀಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಅವರ ತಂದೆ ನಾಗಪ್ಪ ಚಪ್ಪಲಿ ಹೊಲಿಯುವ ವೃತ್ತಿ ಮಾಡುತ್ತಿದ್ದರು. ಐದು ವರ್ಷದ ಹಿಂದೆ ಅವರು ಮೃತಪಟ್ಟರು. ನಂತರ ಕುಟುಂಬದ ಪರಿಸ್ಥಿತಿ ಹದಗೆಟ್ಟಿತ್ತು. ದಾಂಡೇಲಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಷ್ಟದಲ್ಲೇ ಓದಿದ ಪದ್ಮಾವತಿ ಅವರು ಬಂಗೂರು ನಗರ ಪದವಿ ಕಾಲೇಜ್‌ನಲ್ಲಿ ಬಿಕಾಂ ಪದವಿ ಮುಗಿಸಿದ್ದರು. ನಂತರ ಬೈಲಹೊಂಗಲದಲ್ಲಿ ಕಾನೂನು ಪದವಿ ಪಡೆದಿದ್ದರು.
ಆಕೆಯ ಸಹೋದರರಿಬ್ಬರು ತಮ್ಮ ಚಮ್ಮಾರಿಕೆ ಕೆಲಸ ಮಾಡಿ ಓದಿಸಿದ್ದರು.
ಪದ್ಮಾವತಿ ಅವರು ಓದುವಾಗಲೂ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ತಳ ಸಮುದಾಯದ ಸಮಸ್ಯೆ ಮತ್ತು ಸವಾಲುಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಗುರಿ ಇದೆ ಎಂದು ಪದ್ಮಾವತಿ ತಿಳಿಸಿದರು.
ಮೆಕ್ಯಾನಿಕಲ್ ಇಂಜಿನಿಯರ್ ಈಗ ನ್ಯಾಯಾಧೀಶ!!
ಕಾರವಾರ ನಗರದ ಕಾಜುನಾಗದ ಆದಿತ್ಯ ವಿ.ಹೊಸಾಳ್ಕರ್ ದಿವಾಣಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಹೈಕೋರ್ಟ್ನಿಂದ ಆಯ್ಕೆ ಪಟ್ಟಿ ಬಿಡುಗಡೆಯಾಗಿದೆ.
ಆದಿತ್ಯ ಅವರು ಸೇಂಟ್ ಜೋಸೆಫ್ ಹೈಸ್ಕೂಲ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದರು. ಸರ್ಕಾರಿ ಪಿಯು ಕಾಲೇಜ್‌ನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ, ಕಾರವಾರದಲ್ಲೇ ಮೆಕ್ಯಾನಿಕಲ್ ಇಂಜಿನಿಯರಿAಗ್ ಪದವಿ ಪಡೆದಿದ್ದರು. ನಂತರ ಅವರು ಧಾರವಾಡದ ಹುರಕಡ್ಲಿ ಅಜ್ಜ ಕಾನೂನು ವಿದ್ಯಾಲಯದಲ್ಲಿ ಕಾನೂನು ವ್ಯಾಸಂಗ ಮಾಡಿದ್ದರು. 2025 ರಲ್ಲಿ ನ್ಯಾಯಾಧೀಶರ ಆಯ್ಕೆ ಪರೀಕ್ಷೆ ಎದುರಿಸಿದ್ದು, ಮೊದಲ ಪ್ರಯತ್ನದಲ್ಲೇ ಆಯ್ಕೆಯಾಗಿದ್ದಾರೆ.
ಹೊನ್ನಾವರದ ಮಾಫ್ರಿಡ್ ಈಗ ಸಿವಿಲ್ ಜಡ್ಜ್
ಹೊನ್ನಾವರ ಗಾಂಧಿ ನಗರ ಮೂಲದ ಮಾಫ್ರಿಡ್ ಡಯಾಸ್ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಹಂತದಿಂದ ಪದವಿಯವರೆಗೂ ಪಟ್ಟಣದಲ್ಲೇ ಓದಿದ್ದ ಅವರು ನಂತರ ಕಾನೂನು ಪದವಿ ಪಡೆದು, ಸದ್ಯ ಬೆಂಗಳೂರಿನಲ್ಲಿ ವಕೀಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಮೂಡ್ಕಣಿಯ ಬಸ್ತ್ಯಾಂವ ಹಾಗೂ ಮಾರಿಪಿಯಾದ್ ಅವರ ಪುತ್ರಿ, ನಗರದ ಮಾರ್ಕಸ್ ಲೋಪೀಸ್ ಅವರ ಪತ್ನಿ.
ವಿಶ್ವ ದರ್ಶನದ ವಿದ್ಯಾರ್ಥಿ ಈಗ ನ್ಯಾಯಾಧೀಶ
ಯಲ್ಲಾಪುರ ತಾಲೂಕಿನ ಇಡಗುಂದಿ ಸಮೀಪದ ಬಾಳೆಜಡ್ಡಿಯ ಶಶಾಂಕ ನಾಗೇಂದ್ರ ಭಟ್ಟ ಅವರು ಸಿವಿಲ್ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಕಳೆದ ತಿಂಗಳು ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿರುವ 26 ವರ್ಷದ ಶಶಾಂಕ, ತಾಲೂಕಿನಲ್ಲಿ ನ್ಯಾಯಾಧೀಶ ಹುದ್ದೆಗೇರಿದ ಅತಿ ಕಿರಿಯರೆನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಕಾನೂನು ಪದವಿ ಗಳಿಸಿದ ಶಶಾಂಕ ಅವರು, ಬೆಂಗಳೂರಿನಲ್ಲಿ ಭಾಗ್ವತ ಅಸೋಸಿಯೇಟ್ಸ್ ನಲ್ಲಿ ಹಿರಿಯ ವಕೀಲರ ಮಾರ್ಗದರ್ಶನದಲ್ಲಿ 3 ವರ್ಷಗಳ ಕಾಲ ವಕಾಲತ್ತಿನ ಅನುಭವ ಪಡೆದಿದ್ದಾರೆ. ಇವರು ಬಾಳೆಜಡ್ಡಿಯ ಲಲಿತಾ ಹಾಗೂ ಶಿವರಂಜಿನಿ ನಾಗೇಂದ್ರ ಭಟ್ಟ ದಂಪತಿಯ ಪುತ್ರ. ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಯಲ್ಲಾಪುರದಲ್ಲೇ ಪಡೆದಿದ್ದರು. ಯಲ್ಲಾಪುರ ವಿಶ್ವ ದರ್ಶನ ಶಿಕ್ಷಣ ಸಂಸ್ಥೆಯ ಯುವಕ