ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾದ ದಾಂಡೇಲಿಯ ಪದ್ಮಾವತಿ ಅವರನ್ನು ಮಾಜಿ ಶಾಸಕ ಸುನೀಲ ಹೆಗಡೆ ನೇತೃತ್ವದಲ್ಲಿ ಬಿಜೆಪಿ ಮಂಡಳದ ವತಿಯಿಂದ ಸನ್ಮಾನಿಸಲಾಯಿತು. ಬುಧವಂತಗೌಡ ಪಾಟೀಲ, ಗುರು ಮಠಪತಿ, ಗಿರೀಶ್ ಟೋಸೂರ, ಮಿಥುನ್ ನಾಯಕ ಇತರರಿದ್ದರು.
ದಾಂಡೇಲಿ: ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾದ ಪದ್ಮಾವತಿ ಅವರಿಗೆ ಸೋಮವಾರ ಅವರ ಸ್ವಗೃಹದಲ್ಲಿ ಬಿಜೆಪಿ ದಾಂಡೇಲಿ ಮಂಡಲದ ವತಿಯಿಂದ ಸನ್ಮಾನಿಸಲಾಯಿತು.
ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಪ್ರಕಾರ ಕಟ್ಟ ಕಡೆಯ ವ್ಯಕ್ತಿಗೆ ಎಲ್ಲ ರೀತಿಯ ಹಕ್ಕು ಬಾಧ್ಯತೆಗಳು ಸಿಗಬೇಕು ಎನ್ನುವ ವಿಚಾರದೊಂದಿಗೆ ಇವತ್ತು ಅತಿ ಕಡು ಬಡತನದಲ್ಲಿಯೇ ತನ್ನ ವಿದ್ಯಾಭ್ಯಾಸ ಪೂರೈಸಿ ಈಗ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವ ಪದ್ಮಾವತಿಯವರ ಛಲಕ್ಕೆ ಫಲ ಸಿಕ್ಕಿದಂತಾಗಿದೆ ಎಂದರು.
ಸನ್ಮಾನ ಸ್ವೀಕರಿಸಿದ ಪದ್ಮಾವತಿ ಮಾದಿಗ ಮಾತನಾಡಿ, ಮನೆಗೆ ಬಂದು ಗೌರವ ಸಲ್ಲಿಸಿದ್ದು ಅಭಿಮಾನ ಹೆಚ್ಚಿಸಿದೆ. ಸಂವಿಧಾನದ ಆಶಯಗಳಿಗೆ ಬದ್ಧಳಾಗಿ ಕರ್ತವ್ಯ ನಿರ್ವಹಿಸುತ್ತೇನೆ. ನನ್ನಿಂದ ಸಾಧ್ಯವಾದಷ್ಟು ವಿದ್ಯಾರ್ಥಿಗಳಿಗೆ ಈ ವಿಚಾರವಾಗಿ ಉತ್ತೇಜನ ನೀಡುತ್ತೇನೆ ಎಂದರು.
ಬಿಜೆಪಿ ದಾಂಡೇಲಿ ಘಟಕದ ಅಧ್ಯಕ್ಷ ಬುಧವಂತಗೌಡ ಪಾಟೀಲ, ಉಪಾಧ್ಯಕ್ಷ ಗುರು ಮಠಪತಿ, ಪ್ರಧಾನ ಕಾರ್ಯದರ್ಶಿ ಗಿರೀಶ ಟೋಸೂರ, ಮಿಥುನ್ ನಾಯಕ, ಪ್ರಮುಖರಾದ ರವಿ ಗಾಂವ್ಕರ್, ರೋಷನ್ ನೇತ್ರಾವಳಿ, ಈರಯ್ಯ ಸಾಲಿಮಠ, ಪವನ ಕೊಣ್ಣೂರ, ಸುಭಾಷ ಬೋವಿವಡ್ಡರ, ಮಂಜು ಶೆಟ್ಟಿ, ಶ್ವೇತಾ ಶೆಟ್ಟಿ , ಚನ್ನಬಸಪ್ಪ ಮುರುಗೋಡ ಇತರರಿದ್ದರು.