ಅಂಕೋಲಾ ಹಿಚ್ಕಡ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಅಂಗವಾಗಿ ಗುರುವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ರಾಘವೇಂದ್ರ ನಾಯಕ, ರಮಾನಂದ ನಾಯಕ ಇತರರಿದ್ದರು. 
ಉತ್ತರ ಕನ್ನಡ

ಹಿಚ್ಕಡ ಸೇವಾ ಸಹಕಾರಿ ಸಂಘದ ಶತಮಾನೋತ್ಸವ (Centenary) 18ರಂದು

ಅಂಕೋಲಾ: ವ್ಯವಸ್ಥಿತ ನಿರ್ವಹಣೆ ಮತ್ತು ಬದ್ಧತೆಯಿಂದ ಗ್ರಾಹಕರ ವಿಶ್ವಾಸಗಳಿಸಿ ಗ್ರಾಮೀಣ ಭಾಗದಲ್ಲಿ ಸಹಕಾರಿ ತತ್ವದಡಿ ಹಣಕಾಸು ಸೇವೆಗೆ ಹೆಸರಾದ ಹಿಚ್ಚಡ ಸೇವಾ ಸಹಕಾರಿ ಸಂಘದ ಶತಮಾನೋತ್ಸವ Centenary ಸಮಾರಂಭವು ಜ. 18ರಂದು ಹಿಚ್ಕಡ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಾಘವೇಂದ್ರ ಆರ್. ನಾಯಕ ಹೇಳಿದರು.
ಸಂಘದ ಕಾರ್ಯಾಲಯದಲ್ಲಿ ಸಂಘದ ಶತಮಾನೋತ್ಸವದ ಅಂಗವಾಗಿ ಗುರುವಾರ ನಡೆದ ಸಭೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಉಸ್ತುವಾರಿ ಸಚಿವ ಮಂಕಾಳು ವೈದ್ಯ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಶಿವರಾಮ ಹೆಬ್ಬಾರ್ ಭದ್ರತಾ ಕೋಣೆ ಉದ್ಘಾಟಿಸುವರು. ಶಾಸಕ ಸತೀಶ್ ಸೈಲ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು.
ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ರಮಾನಂದ ನಾಯಕ, ಸ್ಮರಣ ಸಂಚಿಕೆಯ ಅಧ್ಯಕ್ಷ ಶಾಂತಾರಾಮ ನಾಯಕ, ಸಹಕಾರಿ ಕೆ.ವಿ. ನಾಯಕ, ಕೆಡಿಸಿಸಿ ನಿರ್ದೇಶಕ ಬೀರಣ್ಣ ನಾಯಕ, ಉಪನಿ ಬಂಧಕ ಅಜಮತ್ತುಲ್ಲಾ ಖಾನ್, ಎಆರ್ ಜಿ.ಕೆ.ಭಟ್, ಕೆಡಿಸಿಸಿ ಬ್ಯಾಂಕಿನ ಅಂಕೋಲಾ ಶಾಖೆ ವ್ಯವಸ್ಥಾಪಕಿ ದೀಪಾ ನಾಯಕ ಸೇರಿದಂತೆ ಪ್ರಮು ಖರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಹಕಾರಿ ಸಂಘದ ಉಪಾಧ್ಯಕ್ಷ ಸುಧೀರ ನಾಯಕ, ನಿರ್ದೇಶಕರಾದ ಬಿಂದೇಶ ನಾಯಕ, ಮಂಜುನಾಥ ನಾಯಕ, ಚೇತನ ನಾಯಕ, ಗೋಪಾಲಕೃಷ್ಣ ನಾಯಕ, ವೈಭವ ನಾಯಕ ಶಾಂತಾರಾಮ ಆಗೇರ, ಸರಳಾ ನಾಯಕ, ಅರ್ಚನಾ ನಾಯಕ, ಸುಮಂಗಲಾ ನಾಯಕ, ಸ್ಮರಣ ಸಂಚಿಕೆಯ ಪ್ರಮುಖರಾದ ಉಪನ್ಯಾಸಕ ಮಹೇಶ ನಾಯಕ, ರಾಮಮೂರ್ತಿ ನಾಯಕ, ಕಾರ್ಯನಿರ್ವಾಹಕ ಕೆ.ಟಿ. ಗೌಡ, ಸಿಬ್ಬಂದಿ ರೂಪಾ ನಾಯಕ, ಶ್ರೀನಿವಾಸ ನಾಯಕ, ಪ್ರಜ್ವಲ ಗುನಗಾ, ಅಮರ ನಾಯಕ, ದೀಕ್ಷಿತ್ ನಾಯಕ ಇತರರಿದ್ದರು.