ಸುಳೆಮುರ್ಕಿಯಲ್ಲಿ ಪಲ್ಟಿಯಾದ ಕಾರು 
ಉತ್ತರ ಕನ್ನಡ

ಕಾರು ಪಲ್ಟಿ ಇಬ್ಬರು ಸಜೀವ ದಹನ

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಕಾರು ಪಲ್ಟಿಯಾಗಿ ಅದರಲ್ಲಿದ್ದ ಇಬ್ಬರು ಸಜೀವ ದಹನವಾದ ಘಟನೆ ಹೊನ್ನಾವರ ಸುಳೆಮುರ್ಕಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕಾರು ಚಾಲಕನ‌ನಿಯಂತ್ರಣ ತಪ್ಪಿ‌ ಮರಕ್ಕೆ ಡಿಕ್ಕಿಯಾಗಿ ಕಂದಕಕ್ಕೆ ಉರುಳಿದೆ. ಬೆಂಕಿ ಹೊತ್ತಿ ನಂಬರ್ ಪ್ಲೇಟ್ ಸಮೇತ ಸುಟ್ಟು ಕರಕಲಾಗಿದೆ. ಅದರಲ್ಲಿದ್ದ ಇಬ್ಬರು ಹೊರಬರಲಾರದೇ ಸುಟ್ಟು ಹೋಗಿದ್ದಾರೆ. ಕಾರು ಸಿದ್ದಾಪುರಕ್ಕೆ ಸೇರಿದ್ದು ಎನ್ನಲಾಗಿದೆ. ಮೃತರ ಗುರುತು ಇನ್ನಷ್ಟೇ ಖಚಿತವಾಗಬೇಕಿದೆ.