ಬಸ್ ಕಾರಿನ ನಡುವೆ ಅಪಘಾತ ಸಂಭವಿಸಿದೆ. 
ಉತ್ತರ ಕನ್ನಡ

ಬಸ್ ಡಿಕ್ಕಿ ಕಾರು ಚಾಲಕ ಸಾವು

ಸುಭಾಸ ಹೆಗಡೆ ಧೂಪದಹೊಂಡ
ಯಲ್ಲಾಪುರ: ಕಾರೊಂದು ಬಸ್ ಗೆ ಡಿಕ್ಕಿ ಹೊಡೆದು ಕಾರ್ ಚಾಲಕ ಮೃತಪಟ್ಟ ಘಟನೆ ತಾಲೂಕಿನ ಮಳಲಗಾಂವ ಕ್ರಾಸ್ ಬಳಿ ನಡೆದಿದೆ.
ಕುಂದಾಪುರದ ಮುಖೇಶ ಶೆಟ್ಟಿ (40) ಮೃತ ವ್ಯಕ್ತಿ. ಸಿದ್ದಾಪುರ ಕಡೆಯಿಂದ ಬೆಳಗಾವಿಗೆ ಮದುವೆಗೆಂದು ಹೊರಟಿದ್ದ ಬಸ್ ಗೆ ಕಲಘಟಗಿಯಿಂದ ಶಿರಸಿ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. 
ಕಾರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ ಹಾಗೂ ಕಾರಿನಲ್ಲಿ ಇದ್ದ ಪ್ರಯಾಣಿಕರಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿದ್ದು, ಬಸ್ ನ ಮುಂಭಾಗ ಜಖಂಗೊಂಡಿದೆ. 
ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.