ಜೊಯಿಡಾದಲ್ಲಿ ಬಸ್‌ಗಳ ನಡುವೆ ಅಪಘಾತ ಸಂಭವಿಸಿದೆ
ಜೊಯಿಡಾ:ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 50 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಜೊಯಿಡಾ-ದಾಂಡೇಲಿ ರಸ್ತೆಯ ತಾಲೂಕಿನ ಚಾಪೋಲಿ ಸಮೀಪ ಗುರುವಾರ ಬೆಳಗ್ಗೆ ನಡೆದಿದೆ.
ಉಳವಿ- ಇಚಲಕರಂಜಿ, ಬೆಳಗಾವಿ-ಕಾರವಾರ ಎನ್‌ಡಬ್ಲುಕೆಆರ್‌ಟಿಸಿ ಬಸ್‌ಗಳ ನಡುವೆ ಡಿಕ್ಕಿ ಸಂಭವಿಸಿದೆ. ಶಾಲೆ ವಿದ್ಯಾರ್ಥಿಗಳೂ ಸೇರಿ ಎರಡೂ ಬಸ್‌ಗಳ ಪ್ರಯಾಣಿಕರು ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯವಾದ ಒಬ್ಬರನ್ನು ಧಾರವಾಡಕ್ಕೆ, ಇನ್ನಿಬ್ಬರನ್ನು ಕಾರವಾರಕ್ಕೆ ಸಾಗಿಸಲಾಗಿದೆ. ಉಳಿದವರಿಗೆ ಜೊಯಿಡಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಜೊಯಿಡಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.