ಶಿರಸಿ ತಾಲೂಕು ಬನವಾಸಿಯಲ್ಲಿ (Daivajna Darshana) ದೈವಜ್ಞ ದರ್ಶನದಲ್ಲಿ ಕರ್ಕಿ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಪಾಲ್ಗೊಂಡರು. ಶ್ರೀ ಸುಜ್ಞಾನೇಶ್ವರ ಭಾರತೀ ಮಹಾಸ್ವಾಮಿ, ಶಾಂತಲಾ ಕಾನಳ್ಳಿ, ಪ್ರಭಾಕರ ವೆರ್ಣೇಕರ್ ಇತರರಿದ್ದರು. 
ಉತ್ತರ ಕನ್ನಡ

ದೈವತ್ವದ ದರ್ಶನವಾದರೆ ಆನಂದ ಸಾಧ್ಯ Daivajna Darshana

ಶಿರಸಿ: ದೈವತ್ವದ ದರ್ಶನ ಆದಾಗ ಮಾತ್ರ ಮನುಷ್ಯ ಆನಂದದಿಂದ ಇರಲು ಸಾಧ್ಯ, (Daivajna Darshana) ಆ ದಿಸೆಯಲ್ಲಿ ಪ್ರಯತ್ನ ಮುಖ್ಯ ಎಂದು ಶ್ರೀ ಕ್ಷೇತ್ರ ಕರ್ಕಿಯ ದೈವಜ್ಞ ಮಠಾದೀಶ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಬನವಾಸಿಯಲ್ಲಿ ಭಾನುವಾರ ಆಯೋಜಿಸಿದ್ದ ದೈವಜ್ಞ ದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯನಲ್ಲಿ ಕಾಮ, ಕ್ರೋಧ, ಮೋಹ, ಮದ, ಮತ್ಸರ ಹತೋಟಿಯಲ್ಲಿ ಇರಬೇಕು. ದೇವರ ಧ್ಯಾನ, ದೈವ ಚಿಂತನೆ ಹೆಚ್ಚು ಆದಂತೆ ದೈವತ್ವ ಪ್ರಕಟವಾಗುತ್ತದೆ ಎಂದರು.
ಕಿರಿಯ ಶ್ರೀಗಳಾದ ಶ್ರೀ ಸುಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮನುಷ್ಯನ ಒಳ್ಳೆಯ ಕೆಲಸದಿಂದ ಮಾತ್ರ ಒಳ್ಳೆಯದಾಗಲು ಸಾಧ್ಯ,
ಆದಷ್ಟು ಜೀವನ ಪರಿಪೂರ್ಣ ಆಗಬೇಕು ಎಂದಾದರೆ ಒಳ್ಳೆ ವಿಚಾರ, ಒಳ್ಳೆ ಮಾತು, ಒಳ್ಳೆಯ ಕಾರ್ಯ ಮಾಡಬೇಕು. ಯಾವದೇ ಕಷ್ಟ ಬಂದರು ಕೂಡ ಒಳ್ಳೆತನ ಬಿಡದೆ ಸತ್ಕರ್ಮ ಮಾಡುತ್ತ ಎಲ್ಲವನ್ನು ಭಗವಂತನಿಗೆ ಬಿಟ್ಟು ಬಿಡಿ, ಅಲ್ಲಿ ದೈವತ್ವದ ಅರಿವು ನಿಮಗೆ ಆಗುತ್ತದೆ ಎಂದರು.
ಕಾರ್ಯಕ್ರಮದ ಮೊದಲು ಬನವಾಸಿ ಶ್ರೀ ಬಸವೇಶ್ವರ ದೇವಸ್ಥಾನ ಎದುರಿನಿಂದ ದೈವಜ್ಞ ದರ್ಶನ ರಥದಲ್ಲಿ ಅಸೀನರಾದ ಉಭಯ ಶ್ರೀಗಳನ್ನು ವಿಜೃಂಭಣೆಯಿಂದ ಮೆರವಣಿಗೆ ಮೂಲಕ ನಾಮದೇವ ಕಲ್ಯಾಣ ಮಂಟಪದವರೆಗೆ ಕರೆ ತರಲಾಯಿತು.
ಮೆರವಣಿಗೆಯಲ್ಲಿ ಪಂಚ ವಾದ್ಯ, ದೈವಜ್ಞ ಮಹಿಳೆಯರು ಪೂರ್ಣ ಕುಂಭ ಸ್ವಾಗತ, ಬನವಾಸಿ ಮಹಿಳಾ ಮಂಡಳಿಯವರ ಕೋಲಾಟ ನೃತ್ಯ, ಶಿರಸಿ ದೈವಜ್ಞ ಮಹಿಳೆಯರ ಚಂಡೆ ವಾದ್ಯ, ಶಿರಸಿ ಯುವತಿಯರಿಂದ ಲೇಜಿಮ್ ನೃತ್ಯ, ಭಜನೆ ಮೆರವಣಿಗೆ ಕಳೆ ಗಟ್ಟುವಂತೆ ಮಾಡಿತ್ತು.
ನಾಮದೇವ ಸಮಾಜದ ಮಹಿಳೆಯರು ಕಲ್ಯಾಣ ಮಂಟಪ ಎದುರಿಗೆ ಪೂರ್ಣ ಕುಂಭ ಸ್ವಾಗತ ಕೋರಿದರೆ, ಪುರುಷರು ಸಮವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ವೇದಿಕೆಗೆ ಬರುವ ಮೊದಲು ಉಭಯ ಶ್ರೀಗಳು ಶ್ರೀ ವಿಠ್ಠಲ ರುಕುಮಾಯ್ ದೇವರ ದರ್ಶನ ಮಾಡಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು.
ಬನವಾಸಿ ಗ್ರಾಮ ಪಂಚಾಯಿತಿ, ಶ್ರೀ ಮಧುಕೇಶ್ವರ ದೇವಸ್ಥಾನ ಆಡಳಿತ ಸಮಿತಿಯವರು, ದೇವಸ್ಥಾನ ವೈದಿಕ ಪ್ರಮುಖರು, ವೈಷ್ಯ ವಾಣಿ ಸಮಾಜ, ಗೌಡ ಸಾರಸ್ವತ ಸಮಾಜ, ವೀರಶೈವ ಸಮಾಜ ಸೇರಿದಂತೆ ಊರಿನ ಅನೇಕಪ್ರಮುಖರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಬನವಾಸಿ ದೈವಜ್ಞ ಸಮಾಜದ ಅಧ್ಯಕ್ಷ ಕೃಷ್ಣರಾಯ ಪದ್ಮಪ್ಪ ಕಾನಳ್ಳಿ ದಂಪತಿ ಪಾದುಕಾ ಪೂಜೆ ನೆರವೇರಿಸಿದರು. ಸಮಾಜದ ಪರವಾಗಿ ಉಭಯ ಶ್ರೀಗಳಿಗೆ ಫಲ ಸಮರ್ಪಣೆ ಮಾಡಿದರು.
ಶಾಂತಲಾ ಪ್ರಶಾಂತ್ ಕಾನಳ್ಳಿ ಪ್ರಾರ್ಥನೆ ಮಾಡಿದರು, ಪತ್ರಕರ್ತ ಉದಯಕುಮಾರ್ ಕಾನಳ್ಳಿ ನಿರೂಪಣೆ ಮಾಡಿದರು.
ವೇ.ಮೂ. ಯೋಗೀಶ್ ಭಟ್ ಪ್ರಸ್ತಾವನೆ ಮಾಡಿದರು. ವೇದಿಕೆಯಲ್ಲಿ ಶಿರಸಿ ದೈವಜ್ಞ ಸಮಾಜದ ಅಧ್ಯಕ್ಷರು ಪ್ರಭಾಕರ್ ವೇರ್ಣೇಕರ, ಶ್ರೀ ಮಠದ ಟ್ರಷ್ಟಿ ಗಣಪತಿ ಶೇಟ್ ಕಾಗೇರಿ, ಯುವಕ ಮಂಡಳಿ ಅಧ್ಯಕ್ಷ ಉಮೇಶ್ ಶೇಟ್, ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ಶೇಟ್ ಉಪಸ್ಥಿತರಿದ್ದರು.