ಹಳಿಯಾಳ: ಕಳಗಿನಕೊಪ್ಪ ಗ್ರಾಮದ ಮನೆಯೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿದೆ.
ಕಾಡುಪ್ರಾಣಿಗಳನ್ನು ಹೊಡೆಯುವ ಸಲುವಾಗಿ ಮದ್ದನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಅದಕ್ಕೆ ಬೆಂಕಿ ತಾಗಿ ಸ್ಫೋಟವಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಸೋಮವಾರ ಬೆಳಗಿನಜಾವ ಸ್ಫೋಟ ಸಂಭವಿಸಿದೆ. ಅದರಿಂದ ಒಂದು ಮನೆ ಸಂಪೂರ್ಣವಾಗಿ ಜಕಂ ಆಗಿದೆ, ಅಕ್ಕಪಕ್ಕದ ಎರಡು ಮನೆಗಳ ಕಿಟಕಿ ಬಾಗಿಲುಗಳೂ ಕಿತ್ತು ಹೋಗಿವೆ.
ಇಡೀ ಗ್ರಾಮ ಭಯಭೀತವಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ. ಹಳಿಯಾಳ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.