ಹೆಸ್ಕಾಂ ಕಚೇರಿಯ ಎದುರು ಬಿಜೆಪಿಗರು ಪ್ರತಿಭಟನೆ ನಡೆಸಿದರು. 
ಉತ್ತರ ಕನ್ನಡ

ಮತ್ತೆ ಮತ್ತೆ ಕರೆಂಟ್‌ ಹೋಗೋದ್ಯಾಕೆ ಗೊತ್ತಾ..?

ಸುಭಾಸ ಹೆಗಡೆ ಧೂಪದಹೊಂಡ
ಕಾರವಾರ: ಅನಿಯಮಿತ ವಿದ್ಯುತ್ ಕಡಿತವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಹೆಸ್ಕಾಂ ಎಇಇ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹೆಸ್ಕಾಂ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡರು. ಎಇಇ ಪ್ರಕಾಶ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ರವಿರಾಜ ಅಂಕೋಲೆಕರ್, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನಿರ್ವಹಣೆಗಾಗಿ ವಾರದಲ್ಲಿ ಎರಡು ಮೂರು ದಿನ ವಿದ್ಯುತ್ ಕಡಿತ ಮಾಡಲಾಗುತ್ತದೆ. ಅಲ್ಲದೇ ದಿನದಲ್ಲಿ ಹತ್ತಾರು ಬಾರಿ ವಿದ್ಯುತ್ ಸ್ಥಗಿತವಾಗುತ್ತದೆ. ಈ ಬಗ್ಗೆ ಕರೆ ಮಾಡಿದರೆ, ಸಹಾಯವಾಣಿ ಸದಾ ಕಾರ್ಯನಿರತವಾಗಿರುತ್ತದೆ. ಜನರಿಗೆ ಸರಿಯಾಗಿ ಉತ್ತರ ಕೊಡುವ ಕೆಲಸವಾಗಬೇಕು ಎಂದರು.
ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ ಗುನಗಿ ಮಾತನಾಡಿ, ಕರಾವಳಿಯಲ್ಲಿ ಉಷ್ಣ ಹವೆ ಬೀಸುತ್ತಿದೆ. ಪದೇ ಪದೇ ವಿದ್ಯುತ್ ಕಡಿತದಿಂದ ಮನೆಯಲ್ಲಿ ಉಷ್ಣಾಂಶ ಜಾಸ್ತಿಯಾಗಿ ಇರಲು ಸಾಧ್ಯವಾಗುತ್ತಿಲ್ಲ. ನವಜಾತ ಶಿಶುಗಳು, ಬಾಣಂತಿಯರು, ವೃದ್ಧರಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಕುಡಿಯುವ ನೀರಿನ ಯೋಜನೆಯಿಂದ ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಅಂಗಡಿಗಳಿಗೆ ನಷ್ಟವಾಗುತ್ತಿದೆ. ಎರಡು ಮೂರು ಗ್ರಾಪಂಗಳಿಗೆ ಒಬ್ಬ ಲೈನ್‌ಮನ್‌ಗಳಿದ್ದಾರೆ. ಅವರಿಗೆ ನಿರ್ವಹಣೆ ಕಷ್ಟವಾಗುತ್ತಿದೆ. ಸಾಮಗ್ರಿ ಪೂರೈಕೆಯಾಗುತ್ತಿಲ್ಲ ಎಂದರು. ಶುಭಂ ಕಳಸ ಮಾತನಾಡಿ, ಯಾವುದೇ ನಿರ್ವಹಣೆ ಕೆಲಸ ಇಲ್ಲದೆಯೂ ವಿದ್ಯುತ್ ಕಡಿತ ಮಾಡಲಾಗುತ್ತದೆ. ಈ ಬಗ್ಗೆ ದಾಖಲೆಗಳು ನಮ್ಮ ಬಳಿ ಇವೆ ಎಂದರು.
ಮನವಿ ಸ್ವೀಕರಿಸಿದ ಎಇಇ ಪ್ರಕಾಶ ನಾಯ್ಕ, ವಿದ್ಯುತ್ ತಂತಿ ಬದಲಾವಣೆ ಕಾಮಗಾರಿ ನಡೆದಿದೆ. ಅದಕ್ಕೆ
ನಾಗೇಶ ಕುರ್ಡೇಕರ್, ಸುನೀಲ ಸೋನಿ, ಸಂಜಯ ಸಾಳುಂಕೆ, ಕಿಶನ್ ಕಾಂಬಳೆ, ಮನೋಜ ಭಟ್, ಸೂರಜ್ ದೇಸಾಯಿ, ದೇವಿದಾಸ ಕಂತ್ರಿಕರ್, ಸತೀಶ ತಳೇಕರ್, ಉಲ್ಲಾಸ ಕೇಣಿ, ವೈಶಾಲಿ ತಾಂಡೇಲ, ರೇಷ್ಮಾ ಮಾಳ್ಸೇಕರ್, ಅನುಶ್ರೀ ಕುಬಡೆ, ಹನುಮಂತಪ್ಪ ತಳವಾರ ಇತರರು ಇದ್ದರು.