ದ್ವೇಷ ಭಾಷಣ (Hate speech) ವಿದೇಯಕವನ್ನು ವಿರೋಧಿಸಿ ಹೊನ್ನಾವರ ತಾಲೂಕು ಬಿಜೆಪಿ ಮುಖಂಡರು ತಹಸೀಲ್ದಾರ್ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ಹೊನ್ನಾವರ: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ದ್ವೇಷ ಭಾಷಣ Hate speech ವಿದೇಯಕ ವಿರೋಧಿಸಿ ತಾಲೂಕಿನ ತಾಲೂಕು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ, ದ್ವೇಷ ಭಾಷಣ ವಿದೇಯಕ ನಾಗರಿಕರ ಹಕ್ಕನ್ನು ಮೊಟಕುಗೊಳಿಸುವ ಮತ್ತು ಪ್ರಜಾಪ್ರಭುತ್ವದ ನೀತಿಯ ವಿರುದ್ಧವಾಗಿದೆ.
ಮುಖ್ಯಮಂತ್ರಿಗಳು ವಾಕ್ ಸ್ವಾತಂತ್ರ್ಯ ಎಂದು ಭಾಷಣದಲ್ಲಿ ಹೇಳುತ್ತಾರೆ. ಆದರೆ, ಅವರೆ ಇದೀಗ ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಮುಂದಾಗುತ್ತಿದ್ದಾರೆ ಎಂದರು.
ಉಪ ತಹಸಿಲ್ದಾರ್ ಉಷಾ ಪಾವಸ್ಕರ್ ಮನವಿ ಸ್ವೀಕರಿಸಿದರು. ಬಿಜೆಪಿ ಪಕ್ಷದ ಪದಾಧಿಕಾರಿಗಳಾದ ಮಂಜುನಾಥ ನಾಯ್ಕ, ಯೋಗೀಶ ಮೇಸ್ತ, ಎಂ.ಜಿ. ನಾಯ್ಕ, ಬಿಜೆಪಿ ಮುಖಂಡ ಶಿವಾನಂದ ಹೆಗಡೆ, ರಾಜೇಶ ಭಂಡಾರಿ, ಪ.ಪಂ.ಮಾಜಿ ಅಧ್ಯಕ್ಷ ನಾಗರಾಜ ಭಟ್, ಪ.ಪಂ. ಅಧ್ಯಕ್ಷ ವಿಜಯ ಕಾಮತ, ಉಪಾಧ್ಯಕ್ಷ ಸುರೇಶ ಹೊನ್ನಾವರ, ಶ್ರೀಕಲಾ ಶಾಸ್ತ್ರಿ, ಎಂ.ಎಸ್. ಹೆಗಡೆ, ಬಿ.ಟಿ. ಗಣಪತಿ ಪಾಲ್ಗೊಂಡಿದ್ದರು.