ಬಿಜೆಪಿ ಪ್ರಮುಖರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.  
ಉತ್ತರ ಕನ್ನಡ

ಪಿಆರ್‌ಸಿಗೆ ಬಿಜೆಪಿ ವಿರೋಧ

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
  • ಜಿಲ್ಲೆಯ ಶಾಸಕ, ಮಾಜಿ ಶಾಸಕರು ಭಾಗಿ
ಕಾರವಾರ: ರಾಜ್ಯ ಸರ್ಕಾರ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ) ನೀಡುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ರಾಜ್ಯಪಾಲರು ಹಾಗೂ ಕೇಂದ್ರ ಗೃಹ ಸಚಿವರು ಮಧ್ಯ ಪ್ರವೇಶ ಮಾಡಿ ಈ ಪ್ರಕ್ರಿಯೆಯನ್ನು ತಡೆಯಬೇಕು ಎಂದು ಮನವಿ ಮಾಡಿದೆ. ಈ ಸಂಬಂಧ ರಾಜ್ಯಪಾಲರಿಗೆ ಬರೆದಿರುವ ಮನವಿಯನ್ನು ಜಿಲ್ಲೆಯ ಬಿಜೆಪಿ ಪ್ರಮುಖರು ಸೋಮವಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರ ಮೂಲಕ ಸಲ್ಲಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ದೇಶದ ಪೌರತ್ವವನ್ನು ಖಾತ್ರಿಗೊಳಿಸುವ ಯಾವುದೇ ಪ್ರಮಾಣಪತ್ರ ಕೊಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಆದರೆ, ಮುಂದಿನ ಚುನಾವಣೆ ಸೋಲುವ ಭಯದಲ್ಲಿ ಕಾಂಗ್ರೆಸ್ ಬಾಂಗ್ಲಾ ಅಕ್ರಮ ವಲಸಿಗರಿಗೆ ಮತದಾನದ ಹಕ್ಕು ಕೊಡಲು ಹೊರಟಿದೆ. ಅದನ್ನು ಮಾವೆಲ್ಲ ವಿರೋಸುತ್ತೇವೆ. ಅಕ್ರಮ ವಲಸಿಗರಿಗೆ ಯಾವುದೇ ಪ್ರಮಾಣಪತ್ರ ಕೊಡಬಾರದು ಎಂದು ಬಿಜೆಪಿಯಿಂದ ಆಂದೋಲನ ಮಾಡುತ್ತಿದ್ದೇವೆ ಎಂದರು.
ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ದರ್ಶಿ, ಶಾಸಕ ಯಶ್ಪಾಲ ಸುವರ್ಣಾ, ಪಿಆರ್‌ಸಿಯಿಂದ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಲಿದೆ. ಹಿಂದುಳಿದ ವರ್ಗಗಳ ಹೆಸರಿನಲ್ಲಿ ಗೆದ್ದು, ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು, ಹಾಲಿ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿ, ಈ ಪ್ರಕ್ರಿಯೆ ಸ್ಥಗಿತ ಮಾಡಿಸಬೇಕು ಎಂದು ಒತ್ತಾಯಿಸಿದರು. ಇಲ್ಲದೇ ಹೋದರೆ 204 ಹಿಂದುಳುದ ವರ್ಗಗಳ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ, ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ,ಅನಕೃತ ವಲಸಿಗರಿಗೆ ವಸತಿಯನ್ನು ಅಕೃತ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಆದರೆ, ಇದರಿಂದ ದೇಶದ ಭದ್ರತೆಗೆ ಆತಂಕ ಉಂಟಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ವೋಟ್ ಬ್ಯಾಂಕ್ ಮಾಡಿಕೊಳ್ಳಲು ಹೊರಟಿದೆ. ಸಂವಿಧಾನ ಬಿಕ್ಕಟ್ಟು ಸೃಷ್ಟಿ ಮಾಡುತ್ತಿದೆ. ಉದ್ಯೋಗ, ಪಡಿತರ ಸಮಸ್ಯೆಗಳು ರಾಜ್ಯದಲ್ಲಿ ಉದ್ಭವವಾಗುತ್ತವೆ ಎಂದು ಆರೋಪಿಸಿದರು.
ಮಾಜಿ ಶಾಸಕ ಸುನೀಲ ಹೆಗಡೆ, ಪಕ್ಷದ ಪ್ರಮುಖರಾದ ಶಿವಾಜಿ ನರಸಾನಿ, ಈಶ್ವರ ನಾಯ್ಕ, ಮನೋಜ ಭಟ್, ಗಣಪತಿ ಕರಂಜೆಕರ್, ಅನಿಲ ಮುತ್ನಾಳ, ಸುಭಾಷ ಗುನಗಿ, ರಾಜೇಂದ್ರ ನಾಯ್ಕ, ಪ್ರಶಾಂತ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.
ವರದಿ ಮುಚ್ಚಿಟ್ಟಿದ್ದೇಕೆ..?
ಕೇಂದ್ರ ಸರ್ಕಾರ ಜಾತಿ ಜನಗಣತಿ ಘೋಷಣೆ ಮಾಡುತ್ತಿದ್ದಂತೆ ಹರಿಬರಿಯಲ್ಲಿ ರಾಜ್ಯ ಸರ್ಕಾರ ಕೈಗೊಂಡ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಇನ್ನೂ ಬಿಡುಗಡೆ ಮಾಡದೇ ಇರುವುದೇಕೆ ಎಂದು ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಪ್ರಶ್ನಿಸಿದರು. ಕಾಂಗ್ರೆಸ್ ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿರುವುದನ್ನು ನೋಡಿದ್ದೇವೆ. 600 ಕೋಟಿ ಖರ್ಚು ಮಾಡಿ ಮಾಡಿದ ಸಮೀಕ್ಷೆ ಸಮರ್ಪಕವಾಗಿ ಆಗಿಲ್ಲ. ಕೇವಲ ಮನೆಗಳ ಎದುರು ಸ್ಟಿಕ್ಕರ್ ಹಾಕಿದ್ದು, ಮಾತ್ರ ಈಗಿನ ಸಿಎಂ ವರದಿ ಬಿಡುಗಡೆಗೆ ಹಿಂದೇಟು ಹಾಕುತ್ತಿರುವುದೇಕೆ ಎಂದರು.

ಪ್ರಭಾಕರ ಭಟ್ಟರ ಬಳಿ ಟ್ರೇನಿಂಗ್ ಪಡೆಯಲಿ

ಯಶ್ಪಾಲ್ ಸುವರ್ಣಾ ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರ ತವರು ಜಿಲ್ಲೆ ಹಿಂದುಳಿದಿದೆ. ಅದಕ್ಕೆ ಖರ್ಗೆ ಅವರೇ ಕಾರಣ. ಅವರು ಕೆಲವು ದಿನ ಸಂಘ ಪರಿವಾರದ ಕಲ್ಲಡ್ಕ ಪ್ರಭಾಕರ ಭಟ್ ಅವರ ಬಳಿ ತರಬೇತಿ ಪಡೆಯಲಿ. ನಂತರ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಂತೆ ಅವರ ಜಿಲ್ಲೆಯೂ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಬರಬಹುದು ಎಂದರು.