ಕಾರವಾರದಲ್ಲಿ ಬಸವೇಶ್ವರ ಜಯಂತಿ ಆಚರಿಸಲಾಯಿತು
ಕೀಳು, ಜಾತಿ ಧರ್ಮ, ಮಡಿಮೈಲಿಗೆ ತುಂಬಿದ್ದ ಸಮಯದಲ್ಲಿ ನೊಂದವರ, ದೀನದಲಿತರ ಉದ್ಧಾರಕ್ಕೆ ನಿಂತವರು. ಕೆಳವರ್ಗದವರನ್ನು ಮೇಲ್ವರ್ಗದವರು ಅತ್ಯಂತ ಹೀನಾಯವಾಗಿ ಕಾಣುತಿದ್ದ ಆ ಅನ್ಯಾಯವನ್ನು ಹೋಗಲಾಡಿಸಲೆಂದೇ ಬಸವಣ್ಣನವರ ಕಲ್ಯಾಣದಲ್ಲಿ ಕ್ರಾಂತಿಯ ಬೀಜ ಬಿತ್ತಿದರು. ಅವರ ವಚನಗಳು ಸರ್ವಕಾಲಕ್ಕೂ ಶ್ರೇಷ್ಠ ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.
ಅವರು ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆಯ ಸಹಯೋಗದಲ್ಲಿ ಕಾರವಾರದ ನ್ಯೂ ಕೆ.ಹೆಚ್.ಬಿ ಕಾಲೋನಿ ಹಬ್ಬುವಾಡದ ಬ್ರಹ್ಮಕುಮಾರಿ ಸಭಾಂಗಣ, ಓಂ ಶಾಂತಿ ಭವನದಲ್ಲಿ ಆಯೋಜಿಸಲಾದ ಬಸವ ಜಯಂತಿಯನ್ನು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಹನ್ನೇರಡನೇ ಶತಮಾನದಲ್ಲಿ ಬಸವಣ್ಣನವರು ಮೇಲು ಕೀಲು, ಗಂಡು ಹೆಣ್ಣು, ಜಾತಿ ಧರ್ಮ, ಮೂಡ ನಂಬಿಕೆ ಈಗೇ
ಅಸಮಾನತೆಯನ್ನು ಹೊಗಲಾಡಿಸಲು ಬಿತ್ತಿದ ಕಾಂತ್ರಿಯ ಬೀಜ ಇಂದು ಹೆಮ್ಮರವಾಗಿ ಬೆಳೆದಿದೆ. ಮಹಿಳೆಯರಿಗೆ ಉನ್ನತ ಸ್ಥಾನಮಾನ, ಸಮಾನ ಅವಕಾಶ ಕಲ್ಪಿಸಿ, ಅನುಭವ ಮಂಟಪವನ್ನು ನಿರ್ಮಿಸಿ ಎಲ್ಲಾ ಸಮುದಾಯವರನ್ನು ಒಗ್ಗೂಡಿಸಿ ಜನರಲ್ಲಿ ಜಾಗೃತಿ ಮೂಡಿಸಿ ಸಮಾಜದಲ್ಲಿನ ಅನಿಷ್ಠಆಚರಣೆಗಳ ವಿರುದ್ಧ ಹೊರಾಡಿದರು. ಸರ್ಕಾರವು ವಿಶ್ವಗುರು ಬಸವಣ್ಣ ನವರನ್ನು ಸಾoಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಅವರಒಂದೊoದು ವಚನಗಳು ವಿಶ್ವ ವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆ ಇಲ್ಲ ಎಂದರು.
ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಪಿ ಏನಗಗೌಡರ ಮಾತನಾಡಿ, ಹನ್ನೇರಡನೇ ಶತಮಾನದಲ್ಲಿಸಮಾಜದಲ್ಲಿನ ಅಸಮಾನತೆಯನ್ನು ಹೊಗಲಾಡಿಸಲು, ಸಮಾಜದಲ್ಲಿರುವ ಪ್ರತಿಯೊಬ್ಬರು ಸಮಾನರು ಎಂಬ ಮನೋಭಾವವನ್ನು ಬಿತ್ತಿದವರುಬಸವಣ್ಣ. ವಚನಗಳ ಮೂಲಕ ಸಮಾಜದ ಸುಧಾರಣೆ ತರಲು ಹೋರಾಡಿದ ಮಹಾನ್ ನಾಯಕ ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಾವೇಲ್ಲರೂ
ಮುನ್ನಡೆಯೋಣ ಎಂದರು.ಬಸವಣ್ಣನವರ ಕುರಿತು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಕವಿತ ಅಕ್ಕನವರುವಿಶೇಷ ಉಪನ್ಯಾಸ ನೀಡಿ, ಬಸವಣ್ಣನವರ ಜಯಂತಿ ಕೇವಲ ಜಯಂತಿಯಾಗದೇ ಕ್ರಾಂತಿಯ ಸ್ಮರಣೆಯಾಗಿದೆ. ಭಕ್ತಿಯ ಅಡಿಪಾಯದಲ್ಲಿ ಸಮಾಜದಸುಧಾರಣೆ ಮಾಡಿದವರು. ಎಲ್ಲರಿಗೂ ಒಂದೇ ದೇವರು ಎಂಬ ಏಕ ದೇವೋಪಾಸನೆ, ಕಾಯಕವೇ ಕೈಲಾಸ ವಸುದೈವ ಕುಟುಂಬಕ ಹೀಗೆ ಹಲವಾರುಸಂದೇಶಗಳನ್ನು ಸಾರಿದರು. ಸಮಾಜದಲ್ಲಿನ ಅಸ್ಪೃಶ್ಯತೆ, ಜಾತಿ, ಮೂಡನಂಬಿಕೆ, ಮೌಡ್ಯ, ಅಂಧ ಶ್ರದ್ಧೆಗಳನ್ನು ಹೋಗಲಾಡಿಸಲು ಬಸವಣ್ಣನವರುಸರಳ ರೀತಿಯಲ್ಲಿ ಜನ ಸಾಮಾನ್ಯರಿಗೆ ಮುಟ್ಟುವಂತೆ ಭಕ್ತಿಯ ವಚನಗಳ ಸಾರಿದರು ಅವರು ನುಡಿದಂತೆ ನಡೆದರು. ಅವರ ವಚನಗಳು, ತತ್ವಾ ಆದರ್ಶಗಳು, ನಡೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.ಕಾರ್ಯಕ್ರಮದಲ್ಲಿ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತೆ ಸುಧಾ ತಳವಾರ, ಅಖಿಲ ಭಾರತ ವೀರಶೈವ ಮಹಾಸಭಾದಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರು,ವೀರಶೈವ ಸಾoಸ್ಕೃತಿಕ ಸಂಘದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಹಿರೇಮಠ, ಲಿಂಗಾಯತ ಸಮುದಾಯದವರು ಮತ್ತಿತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ವೆಂ. ನಾಯ್ಕ ಸ್ವಾಗತಿಸಿದರು. ನ್ಯೂ ಹೈಸ್ಕೂಲ್ ಶಿಕ್ಷಕ ಕೃಷ್ಣಮೂರ್ತಿ ಶಿವು ಹುಳ್ಸೆಮಕ್ಕಿ ನಿರೂಪಿಸಿ, ವಂದಿಸಿದರು.