ದಾಂಡೇಲಿಯ ಹಾರ್ನಬಿಲ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಾಂಬೂ ಮಿಷನ್ ಕಾರ್ಯಾಗಾರ ಹಾಗೂ ತರಬೇತಿ ಕಾರ್ಯಕ್ರಮ ಜರುಗಿತು. ಪ್ರಶಾಂತ ಕುಮಾರ್ ಕೆ.ಸಿ., ಕಾವ್ಯಾ, ಬೀರಪ್ಪ, ಮಹಮ್ಮದ್ ಶಫಿ, ಸಂತೋಷ ಹುಬ್ಬಳ್ಳಿ ಇತರರಿದ್ದರು. 
ಉತ್ತರ ಕನ್ನಡ

ಬಾಂಬೂ ಮಿಷನ್ ಕಾರ್ಯಾಗಾರ ಸಂಪನ್ನ

ವಿನಯ ಆಶೋಕ ನಾಯ್ಕ
ದಾಂಡೇಲಿ: ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಬಾಂಬೂ ಮಿಷನ್ ಯೋಜನೆಯಡಿ ಹಳಿಯಾಳ ಅರಣ್ಯ ಇಲಾಖೆಯಿಂದ ನಗರದ ಹಾರ್ನಬಿಲ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಾಂಬೂ ಮಿಷನ್ ಕಾರ್ಯಾಗಾರ ಹಾಗೂ ತರಬೇತಿ ಕಾರ್ಯಕ್ರಮವು ಶನಿವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕುಮಾರ್ ಕೆ.ಸಿ. ಮಾತನಾಡಿ, ರಾಷ್ಟ್ರೀಯ ಬಾಂಬೂ ಮಿಷನ್ ಯೋಜನೆ ಬಿದಿರು ಕೃಷಿ ಉತ್ಪಾದನೆ, ಸಂಸ್ಕರಣೆ ಮತ್ತು ಮಾರುಕಟ್ಟೆಯನ್ನು ಉತ್ತೇಜಿಸುವ ಮೂಲಕ ಗ್ರಾಮೀಣ ಆರ್ಥಿಕತೆ ಹೆಚ್ಚಿಸುವ ಗುರಿ ಹೊಂದಿದೆ. ಬಿದಿರು ಆಧಾರಿತ ಕೈಗಾರಿಕೆಗಳು ಮತ್ತು ಪರಿಸರ ಸಂರಕ್ಷಣೆಯನ್ನು ಸುಸ್ಥಿರ ಕೃಷಿಯ ಮೂಲಕ ಬಲಪಡಿಸಲು ಈ ಯೋಜನೆಯು ಮಹತ್ವಪೂರ್ಣವಾಗಿದ್ದು, ಶಿಬಿರಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಪ್ರೊಬೇಷನರಿ ಐಎಫ್‌ಎಸ್ ಅಧಿಕಾರಿ ಕಾವ್ಯಾ, ಹಳಿಯಾಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬೀರಪ್ಪ, ಜಗಲ್‌ಪೇಟೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಮ್ಮದ್ ಶಫಿ, ಟಿಂಬರ್ ಡಿಪೋ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಹುಬ್ಬಳ್ಳಿ, ಸಂಪನ್ಮೂಲ ವ್ಯಕ್ತಿ ಸುರೇಶ ತೊಗರಿ, ವಲಯಾರಣ್ಯಾಧಿಕಾರಿಗಳಾದ ಎನ್.ಎಲ್. ನದಾಫ್, ಅಶೋಕ ಶೆಳ್ಳೆನ್ನವರ, ಮಹೀಮ್ ಜನ್ನು, ಸಂಗಮೇಶ ಪಾಟೀಲ, ಶಶಿಧರ ಗೌಡ ಪಾಟೀಲ, ಪ್ರವೀಣ ಚಲವಾದಿ, ವಿನಾಯಕ ಭಟ್, ರಶ್ಮಿ ದೇಸಾಯಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.